newsfirstkannada.com

ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್​ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?

Share :

Published June 5, 2024 at 8:26am

    ಡಿ.ಕೆ ಸುರೇಶ್​ ವಿರುದ್ಧ ಡಾ.ಸಿಎನ್​ ಮಂಜುನಾಥ್​ ಕಣಕ್ಕಿಳಿಸಿ ತಂತ್ರ

    ಸಾರಥಿಯಾಗಿ ಪಕ್ಷ ಸಂಘಟನೆಯಲ್ಲಿ ಸೈ ಎನಿಸಿಕೊಂಡ BSY ಪುತ್ರ

    ಬಿಜೆಪಿಯ ಸೋಲು, ಗೆಲುವಿನಲ್ಲಿ ಅಧ್ಯಕ್ಷ ಸ್ಥಾನ ಕಳೆದುಕೊಳ್ತಾರಾ..?

2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶ ಹೊರಬಿದ್ದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಸ್ಥಾನ ಗಟ್ಟಿಯಾಗಿದೆಯೇ? ಹೀಗೊಂದು ಚರ್ಚೆ ಪಕ್ಷದ ಪಾಳಯದಲ್ಲಿ ಹುಟ್ಟಿಕೊಂಡಿದ್ದು, ಹೌದು‌ ಎನ್ನುತ್ತಿದೆ ಮೂಲಗಳು. ಹಾಗಾದ್ರೆ, ಚುನಾವಣೆಯ ಫಲಿತಾಂಶ ವಿಜಯೇಂದ್ರರ ಸ್ಥಾನವನ್ನು ಗಟ್ಟಿಗೊಳಿಸಿದ್ದೇಗೆ? ವಿಜಯೇಂದ್ರ ನಿಜಕ್ಕೂ ಮಾಡಿದ್ದೇನು?.

ಲೋಕಸಭಾ ಕದನದ ಬಳಿಕ ಪಕ್ಷದಲ್ಲಿ ಬಿ.ವೈ.ವಿಜಯೇಂದ್ರ ಸ್ಟಾರ್

ರಾಜ್ಯದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ. ರಾಜ್ಯದಲ್ಲಿ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕುಳಿತಿದ್ರೂ ಸಹ 28 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಗೆದ್ದು ಬೀಗುವ ಮೂಲಕ, ಕಾಂಗ್ರೆಸ್​ ಪಕ್ಷವನ್ನು ಕಟ್ಟಿಹಾಕುವಲ್ಲಿ ಕೇಸರಿ ಪಡೆ ಸಫಲವಾಗಿದೆ. ಇನ್ನು ಇಂತಹ ಪ್ರದರ್ಶನ ಮಾಡಲು ಪಕ್ಷಕ್ಕೆ ಸಾರಥಿ ಬಹಳ ಮುಖ್ಯ. ಆ ಸಾರಥಿಯ ಸ್ಥಾನದಲ್ಲಿ ಕುಳಿತಿರುವ ಬಿ.ವೈ.ವಿಜಯೇಂದ್ರ ಅದರಲ್ಲಿ ಸಕ್ಸಸ್​ ಆಗಿದ್ದಾರೆ.

ಕಳೆದ ಆರೇಳು ತಿಂಗಳಿಂದ ಬಿಜೆಪಿ ಸಾರಥ್ಯ ವಹಿಸಿಕೊಂಡಿರುವ ಬಿ.ವೈ. ವಿಜಯೇಂದ್ರ, ಹೈಕಮಾಂಡ್​ನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷ ಸಂಘಟನೆ ಮಾಡಿ ಪಕ್ಷಕ್ಕೆ ಲೋಕ ಕದನದಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಠಿಸಿದ್ದಾರೆ. ಕಾಂಗ್ರೆಸ್ ಕಳೆದ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಗ್ಯಾರೆಂಟಿಗಳ ಮೇಲೆ ಗ್ಯಾರೆಂಟಿಗಳನ್ನು ಘೋಷಿಸಿ, ಬರೋಬ್ಬರಿ 136 ಶಾಸಕರ ಸಂಖ್ಯಾ ಬಲಾಬಲದೊಂದಿಗೆ ಅಧಿಕಾರ ಹಿಡಿದಿದೆ. ಅಂದಾಜು 1 ಕೋಟಿ ಕುಟುಂಬಗಳಿಗೆ ವಿವಿಧ ಗ್ಯಾರೆಂಟಿಗಳ ಮೂಲಕವೇ ಫಲಾನುಭವಿಗಳಿದ್ದಾರೆ ಎಂದು ಬೀಗುತ್ತಿದ್ದ ಸಂದರ್ಭದಲ್ಲಿಯೇ ಎದುರಾದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳ ಪೈಕಿ 17+2 ಸ್ಥಾನಗಳನ್ನು ಬಹಳ ಸಲೀಸಾಗಿ ಪಡೆದಿದ್ದು, ಮಾಸ್ಟರ್‌ಮೈಂಡ್ ವಿಜಯೇಂದ್ರರ ಜಾಣ್ಮೆಯಿಂದ ಎಂಬ ಚರ್ಚೆಗಳು ಆರಂಭವಾಗಿದೆ.

ಕಾಂಗ್ರೆಸ್​ ಕಟ್ಟಿ ಹಾಕುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದೇಗೆ?.

  • ಗ್ಯಾರಂಟಿ ಅಸ್ತ್ರವನ್ನೇ ರಾಜ್ಯ ಸರ್ಕಾರಕ್ಕೆ ತಿರುಗಿಸಿದ ವಿಜಯೇಂದ್ರ
  • ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿಗೆ ಪೆಟ್ಟು ಕೊಡುತ್ತಿದ್ದಾರೆ ಆರೋಪ
  • ಸರ್ಕಾರದ ಒಂದೊಂದೇ ತಪ್ಪುಗಳನ್ನು ಸಾರ್ವಜನಿಕ ಸಭೆಯಲ್ಲಿ ಚರ್ಚೆ
  • ಕಳೆದ ಎರಡ್ಮೂರು ತಿಂಗಳಲ್ಲಿ ವಿಜಯೇಂದ್ರ ಸತತ ರಾಜ್ಯ ಪ್ರವಾಸ
  • 38 ಸಾರ್ವಜನಿಕ ಸಭೆಗಳು, 32 ರೋಡ್ ಶೋ ಮಾಡಿದ್ದ ವಿಜಯೇಂದ್ರ
  • ಡಿಕೆ.ಸುರೇಶ್​ ವಿರುದ್ಧ ಡಾ.ಸಿಎನ್​ ಮಂಜುನಾಥ್​ ಕಣಕ್ಕಿಳಿಸಿ ತಂತ್ರ
  • ಸಾಕಷ್ಟು ಪರಿಶ್ರಮ ಹಾಕಿ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಸಕ್ಸಸ್​

ಇದನ್ನೂ ಓದಿ: 11 ವರ್ಷ.. 9 ಪಂದ್ಯ.. 9 ಸೋಲು.. ಕಪ್​​ ನಮ್ದಲ್ಲ.. ಈ ಇಬ್ಬರು ನಾಯಕರ ಕಾಡಿದ ಬ್ಯಾಡ್​ಲಕ್!

ಕಾಂಗ್ರೆಸ್​​ನ ಗ್ಯಾರಂಟಿ ಯೋಜನೆಗಳ ಆರ್ಭಟದ ನಡುವೆಯು ಈ ಫಲಿತಾಂಶ ನಮಗೆ ತೃಪ್ತಿ ತಂದಿದೆ. ಜನರು ಆಶೀರ್ವಾದ ಮಾಡಿರುವುದಕ್ಕೆ ತೃಪ್ತಿ ಇದೆ.

ಬಿ.ವೈ.ವಿಜಯೇಂದ್ರ. ಬಿಜೆಪಿ ರಾಜ್ಯಾಧ್ಯಕ್ಷ

ಮಾಜಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಪಾಲಿಗೆ ಈ ಲೋಕಸಭೆ ಚುನಾವಣೆ ಮಹತ್ವದ್ದಾಗಿತ್ತು. ಆದ್ರೀಗ ವಿಜಯೇಂದ್ರ ಪಕ್ಷ ಸಂಘಟನೆ ಮಾಡಿದ ರೀತಿಗೆ ರಾಜ್ಯದಲ್ಲಿ ಕೇಸರಿ ಪಡೆ ಮತ್ತೆ ಪುಟಿದಿದೆ. ಈ ಮೂಲಕ ವಿಜಯೇಂದ್ರ ಪಕ್ಷದ ಸಾರಥಿಯಾಗಿ ಮುಂದುವರೆಯುವ ಆಶಾಭಾವನೆ ಮೂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್​ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?

https://newsfirstlive.com/wp-content/uploads/2024/06/VIJAYENDRA-1.jpg

Load More