newsfirstkannada.com

ಅಬ್ಬಾ.. ದಾಖಲೆಯ ಮಹಾಮಳೆಗೆ ತತ್ತರಿಸಿ ಹೋದ ದುಬೈ ಸಿಟಿ; ಒಂದೊಂದು ದೃಶ್ಯವೂ ಭಯಾನಕ: ವಿಡಿಯೋ ನೋಡಿ!

Share :

Published April 17, 2024 at 5:49pm

    ಕೆರೆಯಂತಾದ ರಸ್ತೆಗಳು, ದುಬೈನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

    ಮಳೆಯ ನೀರಿನಲ್ಲಿ ಕಾರಿನ ಡೋರ್​​ ಬಳಿ ನಿಂತುಕೊಂಡ ಸಾಕುಪ್ರಾಣಿ ಪರದಾಟ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ದುಬೈನಲ್ಲಿನ ಪ್ರವಾಹದ ದೃಶ್ಯಗಳು

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಾದ್ಯಂತ ಮೊನ್ನೆಯಿಂದ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮಂಗಳವಾರ ಸಂಜೆಯಿಂದ ಶುರುವಾದ ಜಿಟಿ ಜಿಟಿ ಮಳೆ ನೋಡನೋಡುತ್ತಿದ್ದಂತೆ ಇಂದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ರಣಭೀಕರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಇದನ್ನೂ ಓದಿ: 4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

ನಿಧಾನಗತಿಯಲ್ಲಿ ನಗರಗಳಲ್ಲಿನ ಮುಖ್ಯ ರಸ್ತೆಗಳು, ಫುಟ್ ಪಾತ್​ಗಳು, ದುಬೈನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಖ್ಯ ರಸ್ತೆಗಳು, ಮೆಟ್ರೋ ನಿಲ್ದಾಣ, ಬೃಹತ್​ ಶಾಪಿಂಗ್​ ಮಾಲ್​​ಗಳು ಅಕ್ಷರಶಃ ಕೆರೆಯಂತಾಗಿವೆ. ನಿಲ್ದಾಣದಲ್ಲೇ ನೀರು ತುಂಬಿಕೊಂಡಿದ್ದರಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ದುಬೈನಲ್ಲಿನ ಪ್ರವಾಹದ ದೃಶ್ಯಗಳು ನೋಡುಗರಲ್ಲಿ ಅಚ್ಚರಿಯುಂಟು ಮಾಡುತ್ತಿದೆ.  ಇನ್ನು ಈ ಭೀಕರ ಮಳೆಗೆ ಬೆಕ್ಕಿನ ಮರಿಯೊಂದು ಕಾರಿನ ಬಳಿ ನಿಂತುಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಮಳೆಯ ನೀರಿನಲ್ಲಿ ಕಾರಿನ ಡೋರ್​​ ಬಳಿ ಬೆಕ್ಕು ನಿಂತುಕೊಂಡಿತ್ತು. ಇದನ್ನು ಗಮನಿಸಿದ ವ್ಯಕ್ತಿಯೂ ಕೂಡಲೇ ಬೋಟ್​ನಲ್ಲಿ ತೆರಳಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: 24 ಗಂಟೆಯಲ್ಲಿ ದಬದಬ ಸುರಿದ 1.5 ವರ್ಷದ ಮಳೆ.. ವರುಣಾಘಾತಕ್ಕೆ ದುಬೈ ತತ್ತರ; ಪರಿಸ್ಥಿತಿ ಹೇಗಿದೆ ನೋಡಿ!

ಇತ್ತ ನಿಧಾನವಾಗಿ ಮುಖ್ಯ ರಸ್ತೆಗಳಿಗೆ ಮಳೆ ನೀರು ಬಂದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ನೀರು ಬರುತ್ತಿದ್ದಂತೆ ವಾಹನ ಸವಾರರು ಕೂಡಲೇ ಅಲ್ಲಿಂದ ಹೊರ ಬಂದು ಜೀವವನ್ನು ಉಳಿಸಿಕೊಂಡಿದ್ದಾರೆ. ಈ ದಿಢೀರ್​ ಮಳೆಯಿಂದ ದುಬೈನ ನಿವಾಸಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ದಾಖಲೆಯ ಮಹಾಮಳೆಗೆ ತತ್ತರಿಸಿ ಹೋದ ದುಬೈ ಸಿಟಿ; ಒಂದೊಂದು ದೃಶ್ಯವೂ ಭಯಾನಕ: ವಿಡಿಯೋ ನೋಡಿ!

https://newsfirstlive.com/wp-content/uploads/2024/04/rain13.jpg

Load More