newsfirstkannada.com

×

ಕಾವೇರಿ ಮಡಿಲಲ್ಲಿ ಮೊದಲ ವರ್ಷಧಾರೆ.. ಮಳೆರಾಯನ ಸಿಂಚನಕ್ಕೆ ಕೊಡಗು ಕೂಲ್, ಕೂಲ್‌

Share :

Published March 18, 2024 at 6:52pm

    ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಮಳೆಯ ಸಿಂಚನ

    ದಿಢೀರ್​ ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮೂಡಿದ ಸಂತಸ

    ವಿರಾಜಪೇಟೆ ತಾಲೂಕಿನ ಕೆಲವೆಡೆಯೂ ಸುರಿದ ವರ್ಷಧಾರೆ

ಕೊಡಗು: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪನೆರೆದಿದ್ದಾನೆ. ಸೆಕೆ ತಾಳಲಾರದೆ ಬಿಸಿಲಿಗೆ ಹಿಡಿಶಾಪ ಹಾಕುತ್ತಿದ್ದ ಜಿಲ್ಲೆಯ ಹಲವೆಡೆಗಳಲ್ಲಿ ವರ್ಷದ ಮೊದಲ ಮಳೆ ಜನರ ಮನದಲ್ಲಿ ಸಂತಸ ಮನೆಮಾಡಿದೆ. ಸಾಯಂಕಾಲ ನಗರದಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದೆ. ಸದ್ಯ ಮಂಜಿನನಗರಿಯ ವಾತಾವರಣ ಕೂಲ್​​ ಕೂಲ್​ ಆಗಿದೆ.

ಇದನ್ನು ಓದಿ: ಗುಡುಗು ಸಮೇತ ಭಾರೀ ಮಳೆ; ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರೆದ ಜಲರಾಯ 

ದಿಢೀರ್​ ಮಳೆಯಿಂದ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಕಾಫಿ ಹಾಗೂ ಕಾಳುಮೆಣಸು ಬೆಳೆಗಳಿಗೆ ಮಳೆ ಅವಶ್ಯಕವಾಗಿತ್ತು. ಬಿಸಿಲಿನಿಂದ ಒಣಗುತ್ತಿದ್ದ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿಗೆ ಮಳೆರಾಯ ತಂಪನೆರೆದಿದ್ದಾನೆ. ಸದ್ಯ ಮಳೆಯ ಸಿಂಚನದಿಂದ ಸಣ್ಣ ಪುಟ್ಟ ಕೃಷಿಯಲ್ಲಿ ತೊಡಗಿದ್ದ ರೈತರು ಹಾಗೂ ಬೆಳೆಗಾರರು ಫುಲ್​ ಖುಷ್​ ಆಗಿದ್ದಾರೆ. ಇನ್ನು, ವಿರಾಜಪೇಟೆ, ಮಡಿಕೇರಿ ಕುಶಾಲನಗರ ತಾಲೂಕಿನಲ್ಲಿ‌ ಧಾರಾಕಾರ ಮಳೆಯಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಕುಡಿಯೋ ನೀರಿಗೂ ಹಾಹಾಕಾರ ಶುರುವಾಗಿದೆ. ಎಂದೂ ಕಾಣದ ಜಲಕ್ಷಾಮಕ್ಕೆ ಕರುನಾಡು ತುತ್ತಾಗಿದೆ. ಹೀಗಿರುವಾಗ ಕಾವೇರಿ ಒಡಲಲ್ಲಿ ಮಳೆರಾಯನ ಸಿಂಚನ ಆಗಿರುವುದು ಸಂತಸ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ಮಡಿಲಲ್ಲಿ ಮೊದಲ ವರ್ಷಧಾರೆ.. ಮಳೆರಾಯನ ಸಿಂಚನಕ್ಕೆ ಕೊಡಗು ಕೂಲ್, ಕೂಲ್‌

https://newsfirstlive.com/wp-content/uploads/2024/03/mdk-rain-2.jpg

Load More