ರಣಭೀಕರ ಮಳೆಗೆ ಅಕ್ಷರಶಃ ತತ್ತರಿಸಿರುವ ರಾಷ್ಟ್ರ ರಾಜಧಾನಿ ದೆಹಲಿ
ಇಡೀ ದೆಹಲಿ ನಗರವನ್ನೇ ಸ್ತಬ್ಧ ಮಾಡಿದೆ ಭಾರೀ ಪ್ರಮಾಣದ ಮಳೆ ನೀರು
ಒಂದೇ ಗಂಟೆಯಲ್ಲಿ ಸುರಿದಿದೆ ಬರೋಬ್ಬರಿ 100 ಮಿಲಿಮೀಟರ್ ಮಳೆ
ನವದೆಹಲಿ: 10 ವಿಮಾನಗಳು ರಾಷ್ಟ್ರ ರಾಜಧಾನಿಯಿಂದ ಬೇರೆಡೆಗೆ ಮುಖಮಾಡಿ ಹಾರಿವೆ, ಶಾಲೆಗಳು ಮತ್ತೆ ಎಂದಿನಂತೆ ಬಾಗಿಲುಗಳನ್ನು ಮುಚ್ಚಿವೆ. ತಗ್ಗು ಪ್ರದೇಶಗಳು ರಸ್ತೆಗಳೆಲ್ಲಾ ಅಕ್ಷರಶಃ ನೀರಿನಲ್ಲಿ ನಿಂತಿವೆ. ಸದ್ಯ ಇದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಮಗೆ ಕಾಣಸಿಗುವ ಸಾಮಾನ್ಯ ದೃಶ್ಯಗಳು, ದೆಹಲಿಯಲ್ಲಿ ಒಂದು ಗಂಟೆ ಮಳೆಯಾದ್ರೆ ಸಾಕು ರಸ್ತೆಗಳು ಅಕ್ಷರಶಃ ನದಿಯಂತಾಗುತ್ತವೆ. ಆದ್ರೆ ಎಡಬಿಡದೆ ಸುರಿಯುತ್ತಿರುವ ಮಳೆ ದೆಹಲಿಯನ್ನು ಹೈರಾಣು ಮಾಡಿ ಹಾಕಿದೆ.
ಇದನ್ನೂ ಓದಿ: ಅರ್ಧ ಕಿ.ಮೀ ಉದ್ದಕ್ಕೂ ಶವಗಳ ಆಂಬ್ಯುಲೆನ್ಸ್.. ಏರುತ್ತಲೇ ಇದೆ ಸಾವಿನ ಸಂಖ್ಯೆ; ಕೇರಳ ಘೋರ ದೃಶ್ಯಗಳು ಇಲ್ಲಿವೆ!
ಧಾರಾಕಾರ ಮಳೆಯ ಪರಿಣಾಮವಾಗಿ ದೆಹಲಿಗೆ ಹೊರಡಬೇಕಿದ್ದ 8 ವಿಮಾನಗಳು ಜೈಪುರದತ್ತ ಹಾಗೂ ಎರಡು ವಿಮಾನಗಳು ಲಖನೌನತ್ತ ಮಾರ್ಗ ಬದಲಿಸಿದೆ. ಒಂದೇ ಒಂದು ಗಂಟೆಯಲ್ಲಿ ಸುಮಾರು 100 ಮಿಲಿ ಮೀಟರ್ನಷ್ಟು ಮಳೆ ಬಿದ್ದಿದ್ದು, ದೆಹಲಿ ಹೆಚ್ಚು ಕಡಿಮೆ ನದಿಯಂತಾಗಿ ಹೋಗಿದೆ.
ಇದನ್ನೂ ಓದಿ: ಮಳೆ ನೀರಲ್ಲಿ ಯುವಕರ ಹುಚ್ಚಾಟ.. ಬೈಕ್ ಮೇಲಿದ್ದ ಹುಡುಗಿ ಜೊತೆ ಅಸಭ್ಯ ವರ್ತನೆ; ಆಮೇಲೇನಾಯ್ತು? VIDEO
#WATCH | Delhi: Severe waterlogging witnessed on Minto Road after incessant rainfall in the national capital. pic.twitter.com/HnwN5lvB5w
— ANI (@ANI) July 31, 2024
ದೆಹಲಿಯಲ್ಲಿ ಸಾಮಾನ್ಯ ಮಳೆ ಬಿದ್ರೆನೇ ಉಕ್ಕಿ ಹರಿಯುವ ಯಮುನೆ, ಈ ರಣಭೀಕರ ಮಳೆಗೆ ರಣಚಂಡಿಯಂತೆ ಉಗ್ರವಾಗಿ ಹರಿಯುತ್ತಿದ್ದಾಳೆ. ಇಷ್ಟು ಸಾಲದೆಂಬಂತೆ, ಮುಂದಿನ 24 ಗಂಟೆಗಳ ಕಾಲ ಈ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಆಗಸ್ಟ್ 5ರವರೆಗೆ ದೆಹಲಿಯಲ್ಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಮಳೆ ಮುಂದವರಿಯಲಿದೆ ಎಂದು ಹೇಳಲಾಗಿದೆ. ಇನ್ನು ಗುರುವಾರದವರೆಗೂ ಶಾಲಾ ಕಾಲೇಜುಗಳಿಗೆ ಘೋಷಿಸಲಾಗಿದ್ದ ರಜೆಯನ್ನು ವಿಸ್ತರಿಸಲಾಗಿದೆ.
ಟ್ರಾಫಿಕ್ ಪೊಲೀಸರಿಗೆ ಸಲಹೆ ಸೂಚನೆ
ಮಹಾನಗರಳಲ್ಲಿ ಅತಿ ದೊಡ್ಡ ಸಮಸ್ಯೆ ಅಂದ್ರೆನೆ ಅದು ಟ್ರಾಫಿಕ್ ಅದು ಮಳೆ ಬಿದ್ದರಂತು ಅದರ ರಗಳೆ ಕೇಳುವುದೇ ಬೇಡ. ಈಗ ದೆಹಲಿಯಲ್ಲಿಯೂ ಸಹ ಭೀಕರ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಗಂಟೆಗಟ್ಟಲೆಯವರೆಗೆ ಆಗುತ್ತಿದೆ ಲೂಟ್ನೀಸ್ ದೆಹಲಿ, ಕಶ್ಮೇರಾ ಗೇಟ್, ರಾಜೇಂದ್ರನಗರ ಈ ಪ್ರದೇಶಗಳು ಭೀಕರ ಮಳೆಗೆ ನಲುಗಿ ಹೋಗಿವೆ. ಇನ್ನು ಹಲವು ಪ್ರದೇಶಗಳಲ್ಲಿ ರಸ್ತೆಯ ಮೇಲೆ ಮೊಣಕಾಲಿನವರೆಗೂ ನೀರು ಹರಿಯುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರಿಗೆ ಇವುಗಳೆಲ್ಲವನ್ನು ಸರಿಯಾಗಿ ನಿರ್ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ