/newsfirstlive-kannada/media/post_attachments/wp-content/uploads/2024/10/BNG_RAIN_5.jpg)
ಬೆಂಗಳೂರು: ಸಿಲಿಕಾನ್ ಸಿಟಿಗೆ ವರುಣರಾಯ ರಾತ್ರಿಯಿಂದ ಕೊಂಚ ಬಿಡುವು ಕೊಟ್ಟಿದ್ದು ನಗರವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಂದು ಕೂಡ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಈಗಾಗಲೇ ನಗರದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಉದ್ಯಾನನಗರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಮಳೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಆಫೀಸ್ ಸೇರಿದಂತೆ ಇತರೆ ಕೆಲಸಗಳಿಗೆ ಹೊರ ಹೋಗುವವರು ವಾತಾವರಣ ನೋಡಿಕೊಂಡು ಆದಷ್ಟು ಬೇಗ ಮನೆ ಸೇರಿಕೊಳ್ಳಬೇಕು. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಬೀಸುವ ಹಿನ್ನೆಲೆಯಲ್ಲಿ ವಾಯುಭಾರ ಕುಸಿತವಾಗಿದೆ. ಇದರ ಪರಿಣಾಮ ಇಂದು ಕೂಡ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ದರ್ಶನ್‌ಗಾಗಿ ಬಂತು ಮೆಡಿಕಲ್ ಬೆಡ್, ದಿಂಬು; ಮೆಡಿಕಲ್ ರಿಪೋರ್ಟ್‌ನಲ್ಲಿ ಇರೋದೇನು?
ಇನ್ನು ಕಳೆದ ಒಂದು ವಾರದಿಂದ ಸುರಿದ ಜಿಟಿ ಜಿಟಿ ಮಳೆಗೆ ಸಿಲಿಕಾನ್ ಸಿಟಿಯ ಹಲವು ರಸ್ತೆಗಳೆಲ್ಲ ಕೆರೆಯಂತೆ ಆಗಿದ್ದವು. ಇದರಿಂದ ಸ್ಥಳೀಯರು ಓಡಾಟ ಸೇರಿದಂತೆ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸಿದರು. ಕೆಲವು ಕಡೆ ಮರ ಬಿದ್ದು ಅನಾಹುತ ಸೃಷ್ಟಿಯಾಗಿತ್ತು. ಜಿಟಿ ಜಿಟಿ ಮಳೆಯಿಂದ ಕೆಲಸಕ್ಕೆ ಹೋಗುವವರಂತೂ ಏಕಪ್ಪಾ ನಮಗೆ ಈ ಪರೀಕ್ಷೆ.. ಎಂದುಕೊಳ್ಳುವಂತೆ ಆಗಿತ್ತು. ಸದ್ಯ ಇಂದು ಬೆಳಗಿನ ಜಾವ ಮಳೆ ಬಿಡುವು ಕೊಟ್ಟಿರಬಹುದು. ಆದರೆ ಮತ್ತೆ ವರುಣ ಆರ್ಭಟಿಸುವ ಮುನ್ಸೂಚನೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ