Advertisment

ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ

author-image
Bheemappa
Updated On
ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ
Advertisment
  • ನಿರಂತರ ಮಳೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ
  • ರಾಜ್ಯದಲ್ಲಿ ಮಳೆರಾಯನ ಆರ್ಭಟದಿಂದ ಜಲಪಾತಗಳಿಗೆ ಜೀವ ಕಳೆ
  • ನದಿಗಳಿಗೆ ಅಡ್ಡಲಾಗಿ ನಿರ್ಮಿಸಿದ್ದ 5 ಸೇತುಗಳು ಜಲಾವೃತಗೊಂಡಿವೆ

ಈ ವರ್ಷ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ಇವತ್ತೂ ರಜೆ ಘೋಷಿಸಲಾಗಿದೆ.

Advertisment

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?

ಎಡಬಿಡದೇ ಧೋ ಅಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಮಳೆ ನೀರೆಲ್ಲ ನುಗ್ಗಿದ್ದರಿಂದ ಶಾಲಾ ಆವರಣವೆಲ್ಲ ಕೆಸರು ಗದ್ದೆಯಾದಂತೆ ಆಗಿದೆ. ಇದು ರಾಜ್ಯದಲ್ಲಿ ಮಳೆರಾಯ ಸೃಷ್ಟಿಸಿದ ಸಾಲು ಸಾಲು ಅವಾಂತರಗಳು.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

Advertisment

publive-image

ಕಾರಿನ ಉರುಳಿದ ಬೃಹತ್​​ ಮರ.. ಅದೃಷ್ಟವಷಾತ್ ತಪ್ಪಿದ ಭಾರಿ ದುರಂತ

ನಿರಂತರ ಮಳೆಯಿಂದಾಗಿ ಕಾರಿನ ಮೇಲೆ ಬೃಹತ್​​ ಮರವೊಂದು ಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಘಟನೆಯಲ್ಲಿ ದಿಲೀಪ್​​ ಪವಾರ್​ ಎಂಬುವವರಿಗೆ ಸೇರಿದ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ನಿರಂತರ ಮಳೆ.. ಕೆಸರು ಗದ್ದೆಯಾದ ಶಾಲಾ ಆವರಣ

ದಾವಣಗೆರೆಯ ಜಿಲ್ಲೆಯ ಹರಿಹರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲಾ ಆವರಣ ಕೆಸರು ಗದ್ದೆಯಾಗಿ ಬದಲಾಗಿದೆ. ಪಟ್ಟಣದ ನೀಲಕಂಠ ನಗರದಲ್ಲಿರುವ ಶಾಲಾ ಆವರಣದಲ್ಲಿ ಮಳೆ ನೀರು ಹೊರ ಹೋಗದೆ ನಿಂತಲ್ಲೇ ನಿಂತಿದ್ದು, ಶಾಲೆ ಒಳಗೆ ಹೋಗಲು ಮಕ್ಕಳು ಪರದಾಡುತ್ತಿದ್ದಾರೆ.

ಬನ್ನಂಜೆ ಪರಿಸರದಲ್ಲಿ ನೆರೆಯಿಂದ ಕಾರ್ಮಿಕರು ಅತಂತ್ರ

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಬನ್ನಂಜೆ ಪರಿಸರದಲ್ಲಿ ನೆರೆಯಿಂದ ಬಾಗಲಕೋಟೆ ಮೂಲದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ರು. ಏಕಾಏಕಿ ನೆರೆಯಿಂದ ಗುಡಿಸಲು ಬಿಟ್ಟು ಹೊರಬಂದ ಕಾರ್ಮಿಕರು ನಮ್ಮನ್ನ ರಕ್ಷಿಸಿ ಎಂದು ನ್ಯೂಸ್ ಫಸ್ಟ್ ಮೂಲಕ ಮನವಿ ಮಾಡಿದ್ರು. ನ್ಯೂಸ್​ಫಸ್ಟ್​ನಲ್ಲಿ ಬನ್ನಂಜೆ ಪರಿಸರದ ಕಾರ್ಮಿಕ ಸಂಕಷ್ಟದ ಬಗ್ಗೆ ವರದಿಯಾಗ್ತಿದ್ದಂಯೆ ಎಚ್ಚೆತ್ತ ಅಧಿಕಾರಿಗಳು ಬೋಟ್​ಗಳ ಮೂಲಕ ಸ್ಥಳಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿದ್ದ ಕಾರ್ಮಿಕರು, ಸ್ಥಳೀಯ ಜನರನ್ನು ರಕ್ಷಣೆ ಮಾಡಿ, ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಿದ್ರು..

Advertisment

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ

ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಭದ್ರಾ ನದಿಯ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೆಬ್ಬಾಳೆ ಸೇತುವೆಗೆ ಸಮನಾಗಿ ಭದ್ರಾ ನದಿ ಹರಿಯುತ್ತಿದ್ದು, ಯಾವ ಸಮಯದಲ್ಲಾದ್ರೂ ಸೇತುವೆ ಮುಳುಗಡೆಯಾಗೋ‌ ಸಾಧ್ಯತೆ ಇದೆ..

ಕರಾವಳಿಯಲ್ಲಿ ಮಳೆಯ ಅಬ್ಬರ.. ಶಾಲಾ-ಕಾಲೇಜಿಗೆ ರಜೆ

ಇನ್ನು ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲೂ ಭಾರೀ ಮಳೆಯಾಗ್ತಿದೆ. ಅದರಲ್ಲೂ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ದಕ್ಷಿಣ ಕನ್ಡಡ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಮಾತ್ರ ಶಾಲಾ ಕಾಲೇಜಿಗೆ ಇವತ್ತೂ ಕೂಡ ರಜೆ ಘೋಷಿಸಲಾಗಿದೆ.

publive-image

ನದಿಯಲ್ಲಿ ನೀರಿನ ಮಟ್ಟ ಏರಿಕೆ.. ಐದು ಸೇತುವೆಗಳು ಜಲಾವೃತ

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಕಳೆದು ಒಂದು ವಾರಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ ಇದರ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ ಸಪ್ತನದಿಗಳು ಉಕ್ಕಿ ಹರಿಯುತ್ತಿವೆ. ಚಿಕ್ಕೋಡಿಯಲ್ಲಿ ಹರಿಯುವ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 5 ಸೇತುಗಳು ಜಲಾವೃತಗೊಂಡಿವೆ.

Advertisment

ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಜಲಾಯಶಗಳು, ಜಲಪಾತಗಳಿಗೆ ಜೀವ ಕಳೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಜನರೂ ಕೂಡ ಎಚ್ಚರಿಕೆಯಿಂದ ಇರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment