Advertisment

ಈ ಜಿಲ್ಲೆಯ ಶಾಲಾ‌-ಕಾಲೇಜುಗಳಿಗೆ ರಜೆ ಘೋಷಣೆ.. ಧಾರಾಕಾರ ಮಳೆ, ಪ್ರವಾಸಿಗರಿಗೆ ಎಚ್ಚರಿಕೆ..!

author-image
Bheemappa
Updated On
ಪ್ರವಾಸಿಗರೇ ಇಲ್ ಕೇಳಿ..! ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ನೋ ಎಂಟ್ರಿ, ಕಾರಣ?
Advertisment
  • ಜಿಲ್ಲೆಯಾದ್ಯಂತ ಆರೆಂಜ್​ ಅಲರ್ಟ್ ಘೋಷಣೆ ಮಾಡಲಾಗಿದೆ
  • ಪ್ರವಾಸಿಗರಿಗೆ ಸುರಕ್ಷತೆಯ ಪಾಠ ಮಾಡಿದ PSI ಹರೀಶ್ R​.ನಾಯ್ಕ್
  • ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅವಾಂತರಗಳು

ರಾಜ್ಯದಲ್ಲಿ ಮಳೆ ಅಬ್ಬರ ಮುಂದುರೆದಿದ್ದು, ಕರಾವಳಿ ಭಾಗದಲ್ಲಿ ಸುರಿಯುತ್ತಿರೋ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆರಾಯನ ಆರ್ಭಟಕ್ಕೆ ನದಿಗಳು ಅಪಾಯದ ಮಟ್ಟ ಮೀರಿದ್ದು ಪ್ರವಾಹದ ಆತಂಕ ಶುರುವಾಗಿದ್ದು, ಉತ್ತರ ಕನ್ನಡ ಹಾಗೂ ಮಂಗಳೂರು ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Advertisment

ಕರುನಾಡಿನಲ್ಲಿ ಮುಂದುವರಿದ ಮಳೆರಾಯನ ಅಬ್ಬರ

ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಮುಂದುವರಿದೆ. ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಕರುನಾಡು ಕಂಗಾಲಾಗಿತ್ತು. ಈ ವರ್ಷ ಮುಂಗಾರು ಅಬ್ಬರಿಸುತ್ತಿದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರಳು ಸೃಷ್ಟಿಯಾಗಿವೆ.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

publive-image

ಚಾರ್ಮಾಡಿ ಘಾಟ್​​ ರಸ್ತೆಯಲ್ಲಿ ಧರೆ ಕುಸಿತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದೆ. ಇದರ ಪರಿಣಾಮ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಧರೆ ಕುಸಿತವಾಗಿದೆ. ಅಲೆಖಾನ್​​ ರಸ್ತೆಯ ಸಮೀಪ ರಸ್ತೆಯ ಒಂದು ಬದಿ ಕುಸಿದಿದ್ದು, ಘಾಟ್​​ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮೂಡಿಗೆರೆ ಸಿಪಿಐ ಪರಿಶೀಲನೆ ನಡೆಸಿದ್ರು.

Advertisment

ಉಡುಪಿ, ಉತ್ತರ ಕನ್ನಡದಲ್ಲಿ ಶಾಲಾ-ಕಾಲೇಜಿಗೆ ರಜೆ

ಕರವಾಳಿ ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದು, ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಸದ್ಯ ಮುಂಜಾಗ್ರತ ಕ್ರಮವಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಹಾಗೂ ಭಟ್ಕಳ ತಾಲೂಕಿನ ಶಾಲಾ‌ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೂ ಶಾಲಾ-ಕಾಲೇಜಿಗೆ ಇವತ್ತು ರಜೆ ನೀಡಲಾಗಿದೆ.

ಉಡುಪಿಯಲ್ಲಿ ಭಾರೀ ಮಳೆ.. ಆರೆಂಜ್​ ಅಲರ್ಟ್​ ಘೋಷಣೆ

ಉಡುಪಿಯಲ್ಲಿ ಸ್ವಲ್ಪ ವಿರಾಮ ನೀಡಿದ್ದ ಮಳೆರಾಯ ಮತ್ತೆ ಆರ್ಭಟ ಮುಂದುವರೆಸಿದ್ದಾನೆ. ಧಾರಾಕಾರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಇಂದು ಉಡುಪಿ ಜಿಲ್ಲೆಯಾದ್ಯಂತ ಆರೆಂಜ್​ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಉಡುಪಿಯ ಕಡಲ ತೀರದಲ್ಲೂ ಕಟ್ಟೆಚ್ಚರಿ ವಿಧಿಸಿದ್ರು ಪ್ರವಾಸಿಗರ ಹುಚ್ಚಾಟ ನಿಲ್ಲುತ್ತಿಲ್ಲ. ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದ ಪ್ರವಾಸಿಗರಿಗೆ ಗಂಗೊಳ್ಳಿ ಠಾಣೆಯ ಪಿಎಸ್​​ಐ ಹರೀಶ್ ಆರ್​ ನಾಯ್ಕ್​​ ಪ್ರವಾಸಿಗರಿಗೆ ಸುರಕ್ಷತೆ ಪಾಠ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?

Advertisment

publive-image

ಕೈ ಬೀಸಿ ಕರೆದ ಜೋಗ.. ನೋಡಲು ಎರಡು ಕಣ್ಣು ಸಾಲದು

ಮಳೆ ಅವಾಂತರ ಒಂದೆಡೆಯಾದ್ರೆ, ಮಲೆನಾಡಿನ ಹಲವು ಜಲಪಾತಗಳಿಗೆ ಮುಂಗಾರು ಮಳೆ ಜೀವಕಳೆ ತುಂಬಿದೆ. ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ಮಳೆಯಾಗುತ್ತಿರುವ ಕಾರಣ, ಜೋಗ ಜಲಾಪತ ಮೈದುಂಬಿದೆ. ಬೆಟ್ಟ-ಗುಡ್ಡಗಳ ನಡುವೆ ಬಳಕುತ್ತಾ ಬಂದು ಬೆಟ್ಟದ ತುದಿಯಿಂದ ಹಾಲ್ನೊರೆಯಂತೆ ಶರಾವತಿ ನದಿಯು ಧುಮ್ಮಿಕ್ಕುವ ದೃಶ್ಯವಂತು ಮನಮೋಹಕವಾಗಿದೆ.

ಇದಿಷ್ಟು ಮಲೆನಾಡು, ಕರಾವಳಿ ಭಾಗದ ಕಥೆಯಾದ್ರೆ, ಇನ್ನು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ದೂದ್​​ಗಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮ ಕಾರದಗಾ- ಬೋಜ್ ಸಂಪರ್ಕಿಸುವ ಸೇತುವೆ ಮುಳುಗಡೆ ಆಗಿದೆ. ಸೇತುವೆಯ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದರೂ ಜನರ ಹುಚ್ಚಾಟ ಮೆರೆಯುತ್ತಿದ್ದಾರೆ. ಕರುನಾಡಿನಲ್ಲಿ ಮಳೆರಾಯ ಅಬ್ಬರ ಜೋರಾಗಿದ್ದು, ಕೆಲವೆಡೆ ಅವಾಂತರಗಳನ್ನು ಸೃಷ್ಟಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment