Heavy Rain: ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ; 20ಕ್ಕೂ ಹೆಚ್ಚು ಸಾವು

author-image
Ganesh Nachikethu
Updated On
Heavy Rain: ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ; 20ಕ್ಕೂ ಹೆಚ್ಚು ಸಾವು
Advertisment
  • ಕಳೆದ 5 ದಿನಗಳಿಂದ ಧಾರಾಕಾರ ಮಳೆಗೆ ನೆರೆರಾಷ್ಟ್ರ ಅರಬ್​ ತತ್ತರ
  • ಇಡೀ ದಿನ ಸುರಿಯುತ್ತಿರೋ ಭಾರೀ ಮಳೆಗೆ ರಸ್ತೆ, ಮನೆಗಳು ಜಲಾವೃತ
  • ಇದು ದುಬೈನಲ್ಲೇ ಸುರಿದ ಅತೀ ದೊಡ್ಡ ಮಳೆ ಎಂದು ಹೇಳಲಾಗುತ್ತಿದೆ!

ದುಬೈ: ಕಳೆದ 5 ದಿನಗಳಿಂದ ಧಾರಾಕಾರ ಮಳೆಗೆ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​ ತತ್ತರಿಸಿ ಹೋಗಿದೆ. ಅದರಲ್ಲೂ ಇಡೀ ದಿನ ಸುರಿಯುತ್ತಿರೋ ಜೋರು ಮಳೆಗೆ ರಸ್ತೆ, ಮನೆಗಳು ಜಲಾವೃತ ಆಗಿವೆ. ಇದರ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದು ದುಬೈನಲ್ಲೇ ಸುರಿದ ಅತೀ ದೊಡ್ಡ ಮಳೆ ಎಂದು ಹೇಳಲಾಗುತ್ತಿದೆ.

ಒಂದೆಡೆ ಭಾರೀ ಮಳೆಗೆ ತತ್ತರಿಸಿದ ದುಬೈ. ಇನ್ನೊಂದೆಡೆ ಪರಿಹಾರ ಕಾರ್ಯ ಭರದಿಂದ ಸಾಗಿದ್ರೂ ಸುಧಾರಿಸದ ದುಬೈ ನಗರ. ಇಡೀ ದಿನ ಸುರಿದ ಮಳೆಗೆ ದುಬೈ ನಗರ ಅಕ್ಷರಶಃ ನಲುಗಿ ಹೋಗಿದೆ. ಹೀಗಾಗಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ 1 ವಾರಗಳ ಕಾಲ ರಜೆ ಘೋಷಿಸಲಾಗಿದೆ.

ಇನ್ನು, ಮಳೆಗೆ ನಗರಗಳಲ್ಲಿನ ರಸ್ತೆಗಳು, ಫುಟ್ ಪಾತ್​ಗಳು, ಹೈವೇಗಳು ಎಲ್ಲವೂ ಜಲಾವೃತ ಆಗಿದ್ದು ಮಾತ್ರವಲ್ಲದೆ ಕಾರುಗಳು, ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಇಂದು ಕೂಡ ದುಬೈನಲ್ಲಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಇದುವರೆಗೂ ದುಬೈನಲ್ಲಿ ಮಳೆಗೆ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​.. ಅಂಥದ್ದೇನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment