newsfirstkannada.com

Heavy Rain: ಕೇರಳ, ಬೆಂಗಳೂರಲ್ಲಿ ಇಂದಿನಿಂದ ಧಾರಾಕಾರ ಮಳೆ; IMD ಮಹತ್ವದ ಎಚ್ಚರಿಕೆ!

Share :

Published May 16, 2024 at 5:25pm

    ಇಂದಿನಿಂದ 5 ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ

    ಕೇರಳ, ಬೆಂಗಳೂರಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಮನ್ಸೂಚನೆ

    ಕೊಡಗಿನಲ್ಲಿ ಮಳೆಯಾಗಿದ್ದರಿಂದ ಕೆಆರ್‌ಎಸ್‌ಗೆ ನೀರಿನ ಒಳಹರಿವು

ಬೆಂಗಳೂರು: ದಿನ ಕಳೆದಂತೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳ ಮತ್ತು ಬೆಂಗಳೂರಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಮನ್ಸೂಚನೆ ನೀಡಲಾಗಿದೆ. ಮೇ 17 ರಿಂದ 22 ರವರೆಗೂ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದಿನಿಂದ 5 ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಭಾರತೀಯ ಹವಮಾನ ಇಲಾಖೆ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಇಂದಿನಿಂದ ಮೇ 20ರವರೆಗೂ ಕರಾವಳಿ & ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕಳೆದ 10 ದಿನಗಳಿಂದಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇಂದಿನಿಂದ ಮೇ 20ರ ತನಕ ಮಳೆಯ ಮುನ್ಸೂಚನೆ ಇದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರಿನಲ್ಲಿ ಈ ಅವಧಿಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: 3 ಡೆತ್‌ನೋಟ್‌.. ಬಾತ್‌ರೂಮ್‌ನಲ್ಲಿ ಕತ್ತು ಕೊಯ್ದ ಶವ; ಬೆಂಗಳೂರು ಯುವತಿ ಸಾವಿನ ಸುತ್ತಾ ಹಲವು ಅನುಮಾನ! 

ಕೊಡಗು ಭಾಗದಲ್ಲಿ ಮಳೆಯಾಗಿದ್ದರಿಂದ ಕೆಆರ್‌ಎಸ್‌ಗೆ ನೀರಿನ ಒಳಹರಿವು ಹೆಚ್ಚಾಗಿದೆ. ಸದ್ಯ ಮಂಡ್ಯದ ಕೆಆರ್‌ಎಸ್ ಡ್ಯಾಮ್ ಗೆ 1771 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಕೆಆರ್‌ಎಸ್ ಡ್ಯಾಮ್‌ನಲ್ಲಿ ಸದ್ಯ 10 ಟಿಎಂಸಿ ನೀರು ಸಂಗ್ರಹವಾಗಿದೆ.

ಹೈದರಾಬಾದ್‌, ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಮಧುರೈ, ನಾಗಪಟ್ಟಣಂ, ತೂತುಕುಡಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟ ತಮಿಳುನಾಡಿನ ಜನರು ಪೂರ್ವ ಮುಂಗಾರು ಮಳೆಯಿಂದ ರಿಲೀಫ್ ಆಗಿದ್ದಾರೆ. ನಾಳೆಯಿಂದ ಇನ್ನೂ ನಾಲ್ಕು ಐದು ದಿನ ತಮಿಳುನಾಡಿನಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Heavy Rain: ಕೇರಳ, ಬೆಂಗಳೂರಲ್ಲಿ ಇಂದಿನಿಂದ ಧಾರಾಕಾರ ಮಳೆ; IMD ಮಹತ್ವದ ಎಚ್ಚರಿಕೆ!

https://newsfirstlive.com/wp-content/uploads/2024/05/RAIN-10.jpg

Load More