newsfirstkannada.com

6,6,6,6,6,6,6; ಕೇವಲ 34 ಬಾಲ್​​ನಲ್ಲಿ 80 ರನ್​ ಚಚ್ಚಿದ ಹೆನ್ರಿಕ್​ ಕ್ಲಾಸೆನ್ ಯಾರು..?

Share :

Published March 27, 2024 at 10:31pm

Update March 27, 2024 at 10:35pm

    ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಪಂದ್ಯ

    ಮುಂಬೈ ಇಂಡಿಯನ್ಸ್​ಗೆ ಸನ್​​ರೈಸರ್ಸ್​ ಹೈದರಾಬಾದ್ 278 ರನ್​ ಬಿಗ್​ ಟಾರ್ಗೆಟ್​​

    ಸನ್​ರೈಸರ್ಸ್​ ತಂಡದ ಪರ ಅತೀ ಹೆಚ್ಚು ಸ್ಕೋರ್​ ಸಿಡಿಸಿದ ಕ್ಲಾಸೆನ್​ ಯಾರು ಗೊತ್ತಾ?

ಸದ್ಯ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ಗೆ ಸನ್​ರೈಸರ್ಸ್​ ಹೈದರಾಬಾದ್​​ ಟೀಮ್​​​​ ಬರೋಬ್ಬರಿ 278 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇನ್ನು, ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರ ಕೇವಲ ಟ್ರಾವೀಸ್ ಹೆಡ್​​ ಮತ್ತು ಅಭಿಶೇಕ್​ ಮಾತ್ರವಲ್ಲ ಹೆನ್ರಿಕ್​ ಕ್ಲಾಸೆನ್​​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 34 ಬಾಲ್​ನಲ್ಲಿ 7 ಭರ್ಜರಿ ಸಿಕ್ಸರ್​​, ಬರೋಬ್ಬರಿ 4 ಫೋರ್​ ಸಮೇತ 80 ರನ್​ ಗಳಿಸಿ ಅಜೇಯರಾಗಿ ಉಳಿದರು.

ಸನ್​ರೈಸರ್ಸ್​​​ ಹೈದರಾಬಾದ್​​ ತಂಡವು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ 263 ರನ್​ಗಳ ದಾಖಲೆ ಮುರಿದಿದೆ. ಈ ದಾಖಲೆ ಮುರಿಯಲು ಪ್ರಮುಖ ಕಾರಣವೇ ಕ್ಲಾಸೆನ್​​ ಕ್ಲಾಸಿಕ್​ ಬ್ಯಾಟಿಂಗ್​​.

ಯಾರು ಈ ಹೆನ್ರಿಕ್​ ಕ್ಲಾಸೆನ್?

ಹೆನ್ರಿಕ್​ ಕ್ಲಾಸೆನ್ ಸೌತ್​​ ಆಫ್ರಿಕಾದ ಸ್ಟಾರ್​ ವಿಕೆಟ್ ಕೀಪರ್​ ಬ್ಯಾಟರ್​. ಇತ್ತೀಚೆಗೆ ಕೆಕೆಆರ್​​ ವಿರುದ್ಧ ನಡೆದ ಪಂದ್ಯದಲ್ಲೂ ಎಸ್​ಆರ್​ಹೆಚ್ ಪರ ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ 29 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್​ ಜತೆಗೆ 63 ರನ್​ ಚಚ್ಚಿದ್ದರು. ವಿಶೇಷ ಎಂದರೆ ಕ್ಲಾಸೆನ್ ಅವರ ಈ ಇನಿಂಗ್ಸ್​ನಲ್ಲಿ ಒಂದೇ ಒಂದು ಫೋರ್ ಮೂಡಿಬಂದಿರಲಿಲ್ಲ.

ಇದನ್ನೂ ಓದಿ: RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,6,6,6,6,6; ಕೇವಲ 34 ಬಾಲ್​​ನಲ್ಲಿ 80 ರನ್​ ಚಚ್ಚಿದ ಹೆನ್ರಿಕ್​ ಕ್ಲಾಸೆನ್ ಯಾರು..?

https://newsfirstlive.com/wp-content/uploads/2024/03/Henrich-Klasen.jpg

Load More