newsfirstkannada.com

ಇರಾನ್ ಅಧ್ಯಕ್ಷ ರೈಸಿ ಇನ್ನಿಲ್ಲ.. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಸೇರಿ ಎಲ್ಲರೂ ಸಾವು

Share :

Published May 20, 2024 at 10:34am

    ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ

    ನಿಯಂತ್ರಣ ಕಳ್ಕೊಂಡು ಅನಾಹುತ, ಅಸಲಿಗೆ ಆಗಿದ್ದೇನು?

    17 ಗಂಟೆಗಳ ಬಳಿಕ ಪತನಗೊಂಡಿರುವ ಹೆಲಿಕಾಪ್ಟರ್​ ಪತ್ತೆಯಾಗಿದೆ

ಇರಾನ್‌ ಹೆಲಿಕಾಪ್ಟರ್ ದುರಂತದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ಅಲ್ಲಿನ ರಕ್ಷಣಾ ಪಡೆಗಳು ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆ ಮಾಡಿವೆ.

‘ಹಿಮದಿಂದ ಆವೃತವಾಗಿರುವ ಪರ್ವತ ಪ್ರದೇಶದಲ್ಲಿ ನಡೆದ ದುರ್ಘಟನೆಯಲ್ಲಿ.. ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರು ಜೀವಂತವಾಗಿದ್ದಾರೆ ಎಂಬ ಭರವಸೆ ಇಲ್ಲ’ ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:Helicopter crash: ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ.. ಭಾರೀ ದುರಂತದ ಆತಂಕ

ಯಾರೆಲ್ಲ ಇದ್ದರು?
ಅಧ್ಯಕ್ಷರ ಬೆಂಗಾವಲು ಪಡೆಯು ಮೂರು ಹೆಲಿಕಾಪ್ಟರ್‌ಗಳನ್ನು ಹೊಂದಿತ್ತು. ಅದರಲ್ಲಿ ಎರಡು ಸುರಕ್ಷಿತವಾಗಿ ಹಿಂದಿರುಗಿವೆ. ಆದರೆ ವಿದೇಶಾಂಗ ಸಚಿವ ಹುಸೇನ್ ಅಮೀರ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ ಮತ್ತು ಧಾರ್ಮಿಕ ಮುಖಂಡ ಮೊಹಮ್ಮದ್ ಅಲಿ ಜೊತೆಗೆ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನವಾಗಿದೆ. ಅಪಘಾತದಲ್ಲಿ ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಹೋಗಿದೆ. ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯುಎಸ್ ನಿರ್ಮಿತ ಬೆಲ್ 212 ಹೆಲಿಕಾಪ್ಟರ್‌ನಲ್ಲಿ ರೈಸಿ ಪ್ರಯಾಣಿಸುತ್ತಿದ್ದರು.

17 ಗಂಟೆಗಳ ಪ್ರಯತ್ನ
ಪತನಗೊಂಡ ಹೆಲಿಕಾಪ್ಟರ್​ನ ಅವಶೇಷ ತಲುಪಲು ರಕ್ಷಣಾ ತಂಡಗಳು ರಾತ್ರಿಯಿಡೀ ಹಿಮದಲ್ಲಿ ಹೆಣಗಾಡಿವೆ. ಅಪಘಾತ ಸಂಭವಿಸಿದ 17 ಗಂಟೆಗಳ ನಂತರ ರಕ್ಷಣಾ ತಂಡಗಳು ಅಪಘಾತ ನಡೆದ ಸ್ಥಳಕ್ಕೆ ತಲುಪಿವೆ. 63 ವರ್ಷದ ಇಬ್ರಾಹಿಂ ರೈಸಿ 2021ರಲ್ಲಿ ಇರಾನ್‌ನ ಅಧ್ಯಕ್ಷರಾದರು. ಅಧಿಕಾರ ವಹಿಸಿಕೊಂಡ ನಂತರ, ನೈತಿಕ ಕಾನೂನು ಬಿಗಿಗೊಳಿಸಲು ಆದೇಶಿಸಿದರು. ಅವರ ಅವಧಿಯಲ್ಲಿ ಭದ್ರತಾ ಪಡೆಗಳು, ಸರ್ಕಾರದ ವಿರೋಧಿ ಪ್ರತಿಭಟನೆಗಳ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಂಡವು. ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಪರಮಾಣು ಮಾತುಕತೆಯ ಸಂದರ್ಭದಲ್ಲಿ ಇರಾನ್ ಅನ್ನು ಪರಮಾಣು ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಿದರು.

ಇದನ್ನೂ ಓದಿ:ಆರ್​ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್​ನಲ್ಲಿ ಭಾರೀ ಆಕ್ರೋಶ..!

ರೈಸಿ ಅಜರ್‌ಬೈಜಾನ್‌ಗೆ ಏಕೆ ಹೋದರು?
ವಾಸ್ತವವಾಗಿ ಇರಾನ್ ಮತ್ತು ಅಜೆರ್ಬೈಜಾನ್ ತಮ್ಮ ಸಂಬಂಧ ಸುಧಾರಿಸಲು ಅಜೆರ್ಬೈಜಾನ್‌ನಲ್ಲಿ ಸಾಮೂಹಿಕ ಅಣೆಕಟ್ಟನ್ನು ನಿರ್ಮಿಸುತ್ತಿವೆ. ಮೂರನೇ ಅಣೆಕಟ್ಟು ಉದ್ಘಾಟನೆಗೆ ಇಬ್ರಾಹಿಂ ರೈಸಿ ಅಜೆರ್ಬೈಜಾನ್​ಗೆ ಹೋಗಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಲಾಮ್ ಅಲಿಯೇವ್ ಆಹ್ವಾನಿಸಿದ್ದರು.

ಅಪಘಾತಕ್ಕೆ ಕಾರಣವೇನು?
ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಈ ಅವಘಡಕ್ಕೆ ನಿಜವಾದ ಕಾರಣ ಗೊತ್ತಾಗಲಿದೆ. ಇರಾನ್ ಮಾಧ್ಯಮ ವರದಿಗಳ ಪ್ರಕಾರ.. ಪ್ರಾಥಮಿಕ ತನಿಕೆ ಪ್ರಕಾರ ಕೆಟ್ಟ ಹವಾಮಾನ ಎಂದು ಹೇಳಲಾಗುತ್ತದೆ. ದಟ್ಟ ಮಂಜಿನಿಂದಾಗಿ ಅಪಘಾತ ಸಂಭವಿಸಿದೆ. ಟೆಹ್ರಾನ್‌ನ ವಾಯುವ್ಯಕ್ಕೆ ಸುಮಾರು 600 ಕಿಲೋಮೀಟರ್ (375 ಮೈಲುಗಳು) ದೂರದಲ್ಲಿರುವ ಅಜರ್‌ಬೈಜಾನ್ ಪ್ರಾಂತ್ಯದ ಗಡಿಯಲ್ಲಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್​ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇರಾನ್ ಅಧ್ಯಕ್ಷ ರೈಸಿ ಇನ್ನಿಲ್ಲ.. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಸೇರಿ ಎಲ್ಲರೂ ಸಾವು

https://newsfirstlive.com/wp-content/uploads/2024/05/HELICPTOR.jpg

Load More