/newsfirstlive-kannada/media/post_attachments/wp-content/uploads/2024/06/PM_MODI_MELONI.jpg)
ನವದೆಹಲಿ: ಇಟಲಿಯಲ್ಲಿ ನಡೆಯುತ್ತಿರುವ 50ನೇ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸತತ 5ನೇ ಬಾರಿಗೆ ಪಾಲ್ಗೊಂಡಿದ್ದಾರೆ. ವಿಶೇಷವೆಂದರೆ ಕಳೆದ ವರ್ಷದಂತೆ ಈ ಬಾರಿಯು ಇಟಲಿಯ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿಯವರ ಜೊತೆ ಪ್ರಧಾನಿ ಮೋದಿಯವರು ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ಕಳೆದ ವರ್ಷದಂತೆ ಈ ಬಾರಿಯು G7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಜೊತೆ ಇಟಲಿಯ ಪ್ರಧಾನಿ ಮೆಲೋನಿ ಸೆಲ್ಫಿ ಫೋಟೋ ಹಾಗೂ ವಿಡಿಯೋವನ್ನು ಕ್ಲಿಕ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ‘Hello from the Melodi team’ (ಮೆಲೋಡಿ ತಂಡದಿಂದ ನಮಸ್ಕಾರ) ಎಂದು ಮೆಲೋನಿ ಹೇಳಿದ್ದಾರೆ. ಇದನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು ನೆಟ್ಟಿಗರು ವಿಧ ವಿಧವಾದ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ನಡೆಯಲ್ಲ ಬ್ಯಾಟ್ಸ್ಮನ್ ಆಟ.. ಬೂಮ್ರಾ ಅಬ್ಬರದ ಆತ್ಮವಿಶ್ವಾಸಕ್ಕೆ ಕಾರಣವೇನು..?
Hi friends, from #Melodipic.twitter.com/OslCnWlB86
— Giorgia Meloni (@GiorgiaMeloni)
Hi friends, from #Melodipic.twitter.com/OslCnWlB86
— Giorgia Meloni (@GiorgiaMeloni) June 15, 2024
">June 15, 2024
3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ನರೇಂದ್ರ ಮೋದಿಯವರ ಇದು ಮೊದಲ ವಿದೇಶಿ ಪ್ರವಾಸವಾಗಿದೆ. ನಿನ್ನೆ G7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರನ್ನು ಇಟಲಿಯ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿಯವರು ಸ್ವಾಗತ ಕೋರಿದರು. ಕಿಸ್, ಹಗ್ ಇಂತಹದ್ದನ್ನು ಮಾಡದೇ ಕೇವಲ ನಮಸ್ಕಾರ ಎಂದು ಕೈ ಮುಗಿಯುವ ಮೂಲಕ ಮೋದಿಯವರಿಗೆ ಸ್ವಾಗತ ಕೋರಿದ್ದರು.
ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನು ಕಳೆದ ವರ್ಷ G7 ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಮತ್ತು ಮೆಲೋನಿಯವರನ್ನು ಫೋಟೋ, ವಿಡಿಯೋಗಳಿಗೆ ಫೀಲಿಂಗ್ ಸಾಂಗ್ಸ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ