/newsfirstlive-kannada/media/post_attachments/wp-content/uploads/2024/09/DARSHAN_BALLARY_JAIL.jpg)
ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ಗೆ ಮುಳುವಾಗಿದೆ. ಪರಪ್ಪನ ಅಗ್ರಹಾರದಲ್ಲಿ ರಾಜ್ಯಾತಿಥ್ಯದ ತಪ್ಪಿಗೆ ಇದೀಗ ಬಳ್ಳಾರಿ ಜೈಲು ಸೇರಿದ್ದಾರೆ. ಬಳ್ಳಾರಿ ಜೈಲಿಗೆ ಹೋದ್ಮೇಲೆ ಸರಿಯಾಗಿ ನಿದ್ದೆ ಮಾಡ್ತಿಲ್ಲ, ಕುಗ್ಗಿ ಹೋಗಿದ್ದಾರೆ ಎಂಬ ಮಾಹಿತಿ ಇತ್ತು. ಮೊನ್ನೆ ಪೊಲೀಸರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದು ದರ್ಶನ್ಗೆ ಮತ್ತಷ್ಟು ನಡುಕ ಹುಟ್ಟುವಂತೆ ಮಾಡಿದೆ. ಚಾರ್ಜ್ಶೀಟ್ನಿಂದ ದರ್ಶನ್ಗೆ ಮತ್ತಷ್ಟು ಕಂಟಕ ಎದುರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!
ಚಾರ್ಜ್ ಶೀಟ್ನಿಂದ 10 ಕಂಟಕ..!
- ಕೇಶವಮೂರ್ತಿ ಹೇಳಿಕೆ: ಪೊಲೀಸರ ಎದುರು ಕೇಶವಮೂರ್ತಿ ಮೊದಲ ಹೇಳಿರುವ ಹೆಸರೇ ದರ್ಶನ್
- ದರ್ಶನ್ ಬಟ್ಟೆ ಹಾಗೂ ಶೂಗಳ ಮೇಲೆ ಸಿಕ್ಕಿರುವ ರೇಣುಕಾಸ್ವಾಮಿ ರಕ್ತದ ಕಲೆ
- ಆರೋಪಿ ರಾಘವೇಂದ್ರನ ಸ್ವ-ಇಚ್ಚಾ ಹೇಳಿಕೆ: ಕಿಡ್ನಾಪ್ನಿಂದ ಶವ ಬಿಸಾಕೋವರೆಗೂ ದರ್ಶನ್ ನೀಡಿದ ಅಷ್ಟು ಸೂಚನೆಗಳ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೆ
- ಪ್ರದೂಶ್ಗೆ ನೀಡಿದ್ದ ಹಣ ಹಾಗೂ ಆತನ ಜೊತೆ ನಿರಂತರ ಸಂಪರ್ಕದಲ್ಲಿರುವುದಕ್ಕೆ ಸಿಡಿಆರ್ ವರದಿ ಸಿಕ್ಕಿದೆ
- ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿಂದ ಹೊರಟ ದೃಶ್ಯಗಳು ಹಾಗೂ ಅಲ್ಲಿದ್ದವರ ಹೇಳಿಕೆ
- ಮೋಹನ್ ರಾಜ್ನಿಂದ ನಲವತ್ತು ಲಕ್ಷ ಹಣ ಪಡೆದುಕೊಂಡ ಬಗ್ಗೆ, ಮೋಹನ್ ರಾಜ್ ನೀಡಿರುವ ಹೇಳಿಕೆ
- ಪಟ್ಟಣಗೆರೆ ಶೆಡ್ಗೆ ಪವಿತ್ರಾ ಗೌಡ ಜೊತೆ ಬಂದಿರುವ ಸಿಸಿಟಿವಿ ದೃಶ್ಯಗಳು
- ಆರೋಪಿ ನಾಗರಾಜ್ ನೀಡಿರುವ ಸ್ವ-ಇಚ್ಚಾ ಹೇಳಿಕೆ
- ದರ್ಶನ್ ಶೂಗಳಲ್ಲಿ ಪತ್ತೆಯಾಗಿರುವ ಪಟ್ಟಣಗೆರೆ ಶೆಡ್ ಮಣ್ಣು
- ಪಟ್ಟಣಗೆರೆ ಶೆಡ್ನಲ್ಲಿ ಆರೋಪಿಯೊಬ್ಬನ ಜೊತೆ ತೆಗೆದುಕೊಂಡಿರುವ ಸೆಲ್ಫಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ