newsfirstkannada.com

Budget2024: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ವಿಸ್ತರಣೆ.. ಏನಿದು AB-PMJAY ಯೋಜನೆ?

Share :

Published February 1, 2024 at 12:53pm

Update February 1, 2024 at 1:38pm

    ಮಧ್ಯಮ ವರ್ಗ, ಕೊಳಗೇರಿ ನಿವಾಸಿಗಳಿಗೆ ವಸತಿ ನೆರವು ಘೋಷಣೆ

    ತೆರಿಗೆ ಹಾಗೂ ಆಮದು ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

    ಮೆಟ್ರೋ ರೈಲು, ವಂದೇ ಭಾರತ್ ಕೋಚ್‌ಗಳಿಗೆ 40 ಸಾವಿರ ಬೋಗಿಗಳು

2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು, ಇದೊಂದು ಸ್ವಾಗತಾರ್ಹ ಲೆಕ್ಕಾಚಾರ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಸತತ 6ನೇ ಬಾರಿ ಆಯವ್ಯಯ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಮಹತ್ವದ ಘೋಷಣೆಗಳನ್ನು ಮಾಡಿದರು.

ಆಯುಷ್ಮಾನ್ ಯೋಜನೆ ಎಂದರೇನು?
ಆಯುಷ್ಮಾನ್ ಯೋಜನೆಯಡಿ ಒಳಗೊಂಡಿರುವ ಕುಟುಂಬಗಳು ಪ್ರತಿ ವರ್ಷ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆಯುತ್ತಾರೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆ (AB-PMJAY) ವಿಶ್ವದ ಅತಿದೊಡ್ಡ ಸಾರ್ವಜನಿಕವಾಗಿ ನಿಧಿಯ ಆರೋಗ್ಯ ವಿಮಾ ಯೋಜನೆ ಆಗಿದೆ.

ಕಳೆದ ವರ್ಷ ಡಿಸೆಂಬರ್ 27 ರವರೆಗೆ 12 ಕೋಟಿ ಕುಟುಂಬಗಳ 55 ಕೋಟಿ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ದೇಶದ ಸರ್ಕಾರಿ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ರೋಗಿಯು ಆಸ್ಪತ್ರೆಗೆ ದಾಖಲಾದರೆ 5 ಲಕ್ಷದ ವರೆಗೆ ಚಿಕಿತ್ಸೆ ಸಂಪೂರ್ಣ ಉಚಿತ ಆಗಿರಲಿದೆ. ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲ ಒಂದು ವಾರ ಮತ್ತು ಡಿಸ್ಚಾರ್ಜ್ ಆದ ನಂತರ 10 ದಿನಗಳವರೆಗೆ ನಡೆಸಿರುವ ಎಲ್ಲಾ ಪರೀಕ್ಷೆಗಳ ವೆಚ್ಚವನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ. ಕ್ಯಾನ್ಸರ್, ಕಿಡ್ನಿ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ.

ಇದನ್ನೂ ಓದಿ: Budget Updates: 7 ಲಕ್ಷ ರೂಪಾಯಿ ಆದಾಯ ಇರೋರಿಗೆ ತೆರಿಗೆ ಇಲ್ಲ -ಸೀತಾರಾಮನ್ ಘೋಷಣೆ

ಟಾಪ್ 10 ಬಜೆಟ್‌ ಹೈಲೈಟ್ಸ್ ಏನು?
1. 2024ನೇ ಸಾಲಿನ ಆರ್ಥಿಕ ವರ್ಷದಲ್ಲಿ GDP 5.8% ಕ್ಕೆ ಪರಿಷ್ಕರಿಸಲಾಗಿದೆ
2. ನೇರ, ಪರೋಕ್ಷ ತೆರಿಗೆ ಹಾಗೂ ಆಮದು ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ
3. ಲಕ್ಷದ್ವೀಪ ಸೇರಿ ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಪ್ರಾಜೆಕ್ಟ್
4. ಮೆಟ್ರೋ ರೈಲು ಮತ್ತು ನಮೋ ಭಾರತ್‌ ವಿಸ್ತರಣೆ. ವಂದೇ ಭಾರತ್ ಕೋಚ್‌ಗಳಿಗೆ 40 ಸಾವಿರ ಬೋಗಿಗಳು.
5. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ವಿಸ್ತರಣೆ. ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯ ಯೋಜನೆ.
6. ರಕ್ಷಣಾ ವೆಚ್ಚವನ್ನು GDP ಯ 3.4% ಕ್ಕೆ ನಿಗದಿಪಡಿಸಲಾಗಿದೆ
7. ಮಧ್ಯಮ ವರ್ಗ, ಕೊಳಗೇರಿ ನಿವಾಸಿಗಳಿಗೆ ವಸತಿ ನೆರವು
8. ಜಾಗತಿಕವಾಗಿ ಸ್ಪರ್ಧೆಗಾಗಿ ಎಂಎಸ್‌ಎಂಇಗಳ ಬೆಳವಣಿಗೆಗೆ ಆದ್ಯತೆ
9. ದೇಶದ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಆರ್ಥಿಕ ನೀತಿಗಳು
10. ಮುಂದಿನ 5 ವರ್ಷಗಳಲ್ಲಿ 2047ಕ್ಕೆ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿಸುವ ದೃಷ್ಟಿಕೋನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget2024: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ವಿಸ್ತರಣೆ.. ಏನಿದು AB-PMJAY ಯೋಜನೆ?

https://newsfirstlive.com/wp-content/uploads/2024/02/PM-MODI-6.jpg

Load More