Advertisment

ಊಟದ ಜೊತೆಗೆ Green Chilli ತಿನ್ನುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಹೇಗೆ ಗೊತ್ತಾ?

author-image
Veena Gangani
Updated On
ಊಟದ ಜೊತೆಗೆ Green Chilli ತಿನ್ನುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಹೇಗೆ ಗೊತ್ತಾ?
Advertisment
  • ನಿಮ್ಮ ಆರೋಗ್ಯಕ್ಕೆ ಬೇಕಾಗುವಷ್ಟು ಪ್ರಯೋಜನಗಳು ಸಿಗುತ್ತಾ?
  • ಹಸಿ ಮೆಣಸಿನಕಾಯಿ ತಿಂದಾಗ ನಮ್ಮ ದೇಹದಲ್ಲಿ ಏನಾಗುತ್ತೆ?
  • ಹಸಿ ಮೆಣಸಿನಕಾಯಿ ತಿನ್ನುವ ಎಲ್ಲರೂ ಈ ಸ್ಟೋರಿ ಓದಲೇಬೇಕು

ಹಸಿ ಮೆಣಸಿನಕಾಯಿ ಅಂತ ಅಂದ ಕೂಡಲೇ ಥಟ್​ ಅಂತ ನೆನಪಾಗುವುದೇ ಖಾರ. ಒಣ ಮೆಣಸಿನಕಾಯಿಗಿಂತ, ಹಸಿ ಮೆಣಸಿನಕಾಯಿ ತುಂಬಾನೇ ಖಾರವಾಗಿ ಇರುತ್ತೆ. ನೋಡಲು ಚಿಕ್ಕದಾಗಿ ಖಾರವಾಗಿದ್ದರು ತಿಂದರೆ ಕಣ್ಣಲ್ಲಿ ನೀರೇ ಬಂದು ಬಿಡುತ್ತೆ.

Advertisment

ಇದನ್ನೂ ಓದಿ: ​​‘ಮ್ಯಾರಿ ಮಿ ಚಿಕನ್’ ತಿಂದಿದ್ದೀರಾ? ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ನೋಡಿ

publive-image

ಎಲ್ಲರ ಮನೆಯಲ್ಲಿ ತಯಾರು ಮಾಡುವ ವಿವಿಧ ಬಗೆಯ ತಿಂಡಿಗಳಿಗೆ ಹಸಿ ಮೆಣಸಿನಕಾಯಿ ಉಪಯೋಗಕ್ಕೆ ಬರುತ್ತದೆ. ಆದರೆ ಸಾಕಷ್ಟು ಮಂದಿ ಹಸಿ ಮೆಣಸಿನ ಕಾಯಿಂದ ಕೊಂಚ ದೂರವೇ ಉಳಿದು ಬಿಡುತ್ತಾರೆ. ಅದು ಖಾರ, ಆಮೇಲೆ ತಿಂದು ಬಿಟ್ಟರೆ ಬಾಯಿ ಹುರಿಯುತ್ತದೆ ಅಂತ ದೂರ ಇಟ್ಟಿರುತ್ತಾರೆ.

publive-image

ಆದರೆ ಮನೆಯಲ್ಲಿ ಹಿರಿಯರು ಈ ಹಸಿಮೆಣಸಿನಕಾಯಿಯನ್ನು ಸುಲಭವಾಗಿ ಹಾಗೇ ಊಟದ ಜೊತೆಗೆ ತಿಂದು ಬಿಡುತ್ತಾರೆ. ಆದರೆ ಈ ವಿಚಾರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಗಾಢ ಹಸಿರು ಬಣ್ಣದ ಹಸಿಮೆಣಸಿನಕಾಯಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವಷ್ಟು ಪ್ರಯೋಜನಗಳು ಇದೆ. ಜೊತೆಗೆ ಮಿತವಾಗಿ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ ನಮ್ಮಲ್ಲಿರುವ ಬಹುತೇಕ ಕಾಯಿಲೆಗಳು ನಿಮ್ಮಿಂದ ದೂರವಾಗುತ್ತವೆ.

Advertisment

publive-image

ಹಸಿಮೆಣಸಿನಕಾಯಿ ಅಗತ್ಯವಾದ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿದೆ. ಕಬ್ಬಿಣ, ಪೊಟಾಸಿಯಂ, ವಿಟಮಿನ್ ಸಿ, ವಿಟಮಿನ್ ಎ ಇತ್ಯಾದಿ ಅಂಶವನ್ನು ಒಳಗೊಂಡಿದೆ. ಇವುಗಳು ನಮ್ಮ ದೇಹದ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತವೆ. ಹೀಗಾಗಿ ಹಸಿ ಮೆಣಸಿನಕಾಯಿ ಆಹಾರಕ್ಕೆ ಮಸಾಲೆ ಸ್ವಾದವನ್ನು ಉಂಟು ಮಾಡುವುದರ ಜೊತೆಗೆ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಹಸಿಮೆಣಸಿನಕಾಯಿ ತಿಂದಾಗ ನಮ್ಮ ದೇಹ ಉಷ್ಣ ಪ್ರಭಾವಕ್ಕೆ ಒಳಗಾಗುತ್ತದೆ.

publive-image

ಅಷ್ಟೇ ಅಲ್ಲದೇ ಹಸಿ ಮೆಣಸಿನಕಾಯಿಯಲ್ಲಿ ನಮ್ಮ ಚರ್ಮದ ಮೇಲಿನ ಗೆರೆಗಳು, ಮೊಡವೆಗಳು ಅಷ್ಟೇ ಯಾಕೆ ದದ್ದುಗಳನ್ನು ಸಹ ಹೋಗಲಾಡಿಸುತ್ತದೆ. ಪ್ರಮುಖವಾಗಿ ವಿಟಮಿನ್ ಇ ಹೆಚ್ಚಾಗಿರುವ ಹಸಿಮೆಣಸಿನಕಾಯಿ ಸೇವನೆಯಿಂದ ನಮ್ಮ ತ್ವಚೆಯ ಆರೋಗ್ಯ ಮತ್ತು ಕಾಂತಿ ಹೆಚ್ಚಾಗುತ್ತದೆ.​ ಇಷ್ಟೆಲ್ಲಾ ಅಂಶಗಳಿರುವ ಹಸಿಮೆಣಸಿನಕಾಯಿಯನ್ನು ನಿಯಮಿತವಾಗಿ ತಿಂದರೆ ದೇಹಕ್ಕೆ ಉಪಯುಕ್ತವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment