Advertisment

ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

author-image
admin
Updated On
RamojiRao: ‘ಅನ್ನದಾತ’ ಅಮರ್ ರಹೇ.. ರಾಮೋಜಿ ರಾವ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
Advertisment
  • ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಹುಟ್ಟಿದ ರಾಮೋಜಿ ರಾವ್
  • ಮಾಧ್ಯಮ ಲೋಕದ ಧೀಮಂತ ರಾಮೋಜಿ ರಾವ್ ನಿಧನಕ್ಕೆ ಶ್ರದ್ಧಾಂಜಲಿ
  • ರಾಮೋಜಿ ಫಿಲ್ಮ್‌ ಸಿಟಿ ಇಡೀ ವಿಶ್ವದಲ್ಲೇ ಚಿತ್ರ ನಿರ್ಮಾಣಕ್ಕೆ ಪ್ರಖ್ಯಾತಿ

ರಾಮೋಜಿ ಫಿಲ್ಮ್‌ ಸಿಟಿಯ ಸೃಷ್ಟಿಕರ್ತ, ಈನಾಡು ಸಮೂಹ ಸಂಸ್ಥೆಯ ಸಂಸ್ಥಾಪಕ, ಮಾರ್ಗದರ್ಶಿ ಚಿಟ್ ಫಂಡ್‌, ಪ್ರಿಯಾ ಫುಡ್ಸ್, ಡಾಲ್ಫಿನ್ ಹೋಟೆಲ್‌, ಈನಾಡು ಪತ್ರಿಕೆ, ಟಿವಿ ಚಾನೆಲ್‌ಗಳ ETV ನೆಟ್‌ವರ್ಕ್, ಚಲನಚಿತ್ರ ನಿರ್ಮಾಣಕ್ಕಾಗಿ ಉಷಾ ಕಿರಣ್ ಮೂವೀಸ್. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ರಾಮೋಜಿ ರಾವ್ ಕಾಲಿಡದ ಕ್ಷೇತ್ರವೇ ಇಲ್ಲ.

Advertisment

ಇದನ್ನೂ ಓದಿ:RamojiRao: ‘ಅನ್ನದಾತ’ ಅಮರ್ ರಹೇ.. ರಾಮೋಜಿ ರಾವ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ 

ರಾಮೋಜಿ ಫಿಲ್ಮ್‌ ಸಿಟಿಯ ನಿರ್ಮಾತೃ ಚೆರುಕುರಿ ರಾಮೋಜಿ ರಾವ್ ಅವರು ನಿಧನರಾಗಿದ್ದಾರೆ. ರಾಮೋಜಿ ರಾವ್ ಇಂದು ಇಹಲೋಕ ತ್ಯಜಿಸಿದ್ದರೂ ಅವರ ಸಾಧನೆ, ಅವರ ಬದುಕು ಸ್ಫೂರ್ತಿದಾಯಕವಾಗಿದೆ.

publive-image

ರಾಮೋಜಿ ರಾವ್‌ ಅವರು ಹುಟ್ಟಿದ್ದು 1936, ನವೆಂಬರ್ 16ರಂದು. ಮದ್ರಾಸ್‌ ಪ್ರೆಸಿಡೆನ್ಸಿಯ ಕೃಷ್ಣ ಜಿಲ್ಲೆಯ ಪೆದಪರುಪುಡಿಯ ಕೃಷಿ ಕುಟುಂಬದಲ್ಲಿ ಜನಿಸಿದ್ದರು. ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಹುಟ್ಟಿದ ಹುಡುಗ ಇಡೀ ದೇಶವೇ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದೇ ರೋಚಕ ಕಥೆ.

Advertisment

publive-image

ರಾಮೋಜಿ ರಾವ್ ಅವರ ಗುರಿ ಕೇವಲ ಸಾಧನೆ ಮಾಡುವುದಾಗಿರಲಿಲ್ಲ. ತನ್ನ ಬೆವರಿನ ಹನಿಗಳ ಮೂಲಕ ಪುಟ್ಟ ಇಟ್ಟಿಗೆಗಳನ್ನು ನಿಟ್ಟು ಸಾಮ್ರಾಜ್ಯವನ್ನೇ ಕಟ್ಟಿದ ಅನಭಿಶಕ್ತ ಅಧಿಪತಿಯಾದವರು. ರಾಮೋಜಿ ರಾವ್ ಅವರು ಕಟ್ಟಿದ ರಾಮೋಜಿ ಫಿಲ್ಮ್‌ ಸಿಟಿ ಇಡೀ ವಿಶ್ವದಲ್ಲೇ ಚಿತ್ರ ನಿರ್ಮಾಣಕ್ಕೆ ಪ್ರಖ್ಯಾತಿ ಪಡೆದಿದೆ.

ರಾಮೋಜಿ ರಾವ್ ಅವರ ಎದೆಗಾರಿಕೆ ಹೇಗಿತ್ತು ಅಂದ್ರೆ ಅವರ ಜೀವನದಲ್ಲಿ ಸಾಕಷ್ಟು ಏಳು, ಬೀಳನ್ನ ಕಂಡರೂ ಎದೆಗುಂದದೆ ಮುನ್ನಡೆದಿದ್ದರು. ಕಷ್ಟಪಟ್ಟು ಈನಾಡು, ಈಟಿವಿ ನೆಟ್‌ವರ್ಕ್‌ ಚಾನೆಲ್‌ಗಳನ್ನು ಕಟ್ಟಿದ್ದ ರಾಮೋಜಿ ರಾವ್ ಅವರು ಸಾವಿರಾರು ಜನರಿಗೆ ಪತ್ರಿಕೋದ್ಯಮದ ಅಕ್ಷರಾಭ್ಯಾಸ ಮಾಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್ ಕಡೆಯಿಂದ ಮಾಧ್ಯಮ ಲೋಕದ ಧೀಮಂತ ರಾಮೋಜಿ ರಾವ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

ಇದನ್ನೂ ಓದಿ: ‘ಅನ್ನದಾತ’ ರಾಮೋಜಿ ರಾವ್​.. ಕೃಷಿ ಕುಟುಂಬದಿಂದ ಬಂದು ಬಡವರ ಹಸಿವು ನೀಗಿಸಿದ ಪುಣ್ಯಾತ್ಮ 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment