ರಾಜ್ಯದ ಟಾಪ್​​ 5 ಲೋಕಸಭಾ ಕ್ಷೇತ್ರಗಳು ಇವು! ಗೆಲ್ಲೋದ್ಯಾರು? ನೀವು ಓದಲೇಬೇಕಾದ ಸ್ಟೋರಿ!

author-image
Ganesh Nachikethu
Updated On
ರಾಜ್ಯದ ಟಾಪ್​​ 5 ಲೋಕಸಭಾ ಕ್ಷೇತ್ರಗಳು ಇವು! ಗೆಲ್ಲೋದ್ಯಾರು? ನೀವು ಓದಲೇಬೇಕಾದ ಸ್ಟೋರಿ!
Advertisment
  • ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ
  • ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಜಿದ್ದಾಜಿದ್ದಿ ಪೈಪೋಟಿ!
  • ರಾಜ್ಯದ ಟಾಪ್​ 5 ಹೈವೋಲ್ಟೇಜ್​ ಕ್ಷೇತ್ರಗಳು ಯಾವುವು? ಗೆಲ್ಲೋದ್ಯಾರು?

ಬೆಂಗಳೂರು: ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಗ್ಯಾರಂಟಿಗಳು ಕೆಲಸ ಮಾಡಿವೆ, ಈ ಬಾರಿ ರಾಜ್ಯದಲ್ಲಿ ಅತೀ ಹೆಚ್ಚು ಸೀಟು ಗೆಲ್ಲೋದು ನಾವೇ ಎಂದು ಕಾಂಗ್ರೆಸ್​ ಹೇಳುತ್ತಿದೆ. ಇನ್ನೊಂದೆಡೆ ಬಿಜೆಪಿ, ಜೆಡಿಎಸ್‌ ಮೈತ್ರಿ ಮೂಲಕ ವಿಧಾನಸಭಾ ಚುನಾವಣೆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿವೆ. ಹೀಗಿರುವಾಗಲೇ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಪೈಪೋಟಿ ಟಾಪ್​ 5 ಹೈವೋಲ್ಟೇಜ್​ ಕ್ಷೇತ್ರಗಳು ಇಲ್ಲಿವೆ.

1. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಸದ್ದು ಮಾಡಿದ ಮೊದಲ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಇದಕ್ಕೆ ಕಾರಣ ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿಕೆ ಸುರೇಶ್‌ ಎದುರು ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ ಎನ್ ಮಂಜುನಾಥ್ ಸ್ಪರ್ಧೆ ಮಾಡಿರುವುದು. ಸತತ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡ ಡಿಕೆ ಸುರೇಶ್‌ ಅವರಿಗೆ ಡಾಕ್ಟರ್‌ ಮಂಜುನಾಥ್‌ ಸವಾಲು ಹಾಕಿದ್ದಾರೆ. ಹಾಗಾಗಿ ಇಲ್ಲಿ ಗೆಲ್ಲೋದ್ಯಾರು ಅನ್ನೋ ಕುತೂಹಲ ಎಲ್ಲರಿಗೂ ಇದೆ.

publive-image

2. ಮಂಡ್ಯ ಲೋಕಸಭಾ ಕ್ಷೇತ್ರ

ಬೆಂಗಳೂರು ಗ್ರಾಮಾಂತರ ನಂತರ ಭಾರೀ ಸೌಂಡ್​ ಮಾಡಿರೋ 2ನೇ ಲೋಕಸಭಾ ಕ್ಷೇತ್ರ ಮಂಡ್ಯ. ಮಂಡ್ಯ ಲೋಕಸಭಾ ಕ್ಷೇತ್ರ ಭಾರತದ ಗಮನ ಸೆಳೆದಿದೆ. ಇದಕ್ಕೆ ಕಾರಣ ಈ ಬಾರಿ ಮಂಡ್ಯದಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಕಣದಲ್ಲಿರುವುದು. ಕಾಂಗ್ರೆಸ್ಸಿನಿಂದ ಸ್ಟಾರ್ ಚಂದ್ರು ಎಂಬ ಉದ್ಯಮಿ ಸ್ಪರ್ಧೆ ಮಾಡಿದ್ದಾರೆ. ಈ ಎಲೆಕ್ಷನ್​​​ ಹೆಚ್​​ಡಿಕೆ ವರ್ಸಸ್​​ ಸಚಿವ ಚೆಲುವರಾಯಸ್ವಾಮಿ ಅನ್ನೋ ಟಾಕ್​ ಇದೆ.

publive-image

3. ದಾವಣಗೆರೆ ಲೋಕಸಭಾ ಕ್ಷೇತ್ರ

ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್‌ನಿಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ ಕಣಕ್ಕಿಳಿದ್ದಾರೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ ಮತ್ತು ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಯಾಗಿ ವಿನಯ್‌ ಕುಮಾರ್‌ ಇದ್ದಾರೆ. ಶಾಮನೂರು, ಸಿದ್ದೇಶ್ವರ ಕುಟುಂಬಗಳ ಮಧ್ಯೆ ವಿನಯ್‌ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.

publive-image

4. ಹಾಸನ ಲೋಕಸಭಾ ಕ್ಷೇತ್ರ

ರಾಜ್ಯದಲ್ಲಿ ಭಾರೀ ಸದ್ದು ಮಾಡಿರೋ ಮತ್ತೊಂದು ಕ್ಷೇತ್ರ ಹಾಸನ. ಇದಕ್ಕೆ ಕಾರಣ ಮಾಜಿ ಪ್ರಧಾನಿ ದೇವೇಗೌಡ್ರ ಮೊಮ್ಮಗ ಪ್ರಜ್ವಲ್​ ರೇವಣ್ಣ ಅಖಾಡದಲ್ಲಿರೋದು. ಇಲ್ಲಿ ಕಾಂಗ್ರೆಸ್‌ನಿಂದ ಶ್ರೇಯಸ್‌ ಪಟೇಲ್‌ ಇದ್ದಾರೆ. ಚುನಾವಣೆ ನಂತರ ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಶ್ರೇಯಸ್​ ರೇವಣ್ಣ ವಿರುದ್ಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 3 ಸಾವಿರ ವೋಟ್​ನಿಂದ ಸೋತಿದ್ದರು. ಹಾಗಾಗಿ ಇದು ಜಿದ್ದಾಜಿದ್ದಿನ ಕಣವಾಗಿದೆ.

publive-image

5. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಅವರನ್ನು ಮಣಿಸಲು ಕಾಂಗ್ರೆಸ್​​ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಿದೆ. ವಿಧಾನಸಭಾ ಚುನಾವನೆ ಸೋತ ಸುಧಾಕರ್‌ ಲೋಕಸಭೆ ಗೆಲ್ಲಲೇಬೇಕು ಎಂದಿದ್ದಾರೆ. ಇತ್ತ ಸ್ಥಳೀಯ ಶಾಸಕರ ಬೆಂಬಲದಿಂದ ಗೆಲ್ಲೋ ನಿರೀಕ್ಷೆಯಲ್ಲಿ ಕಾಂಗ್ರೆಸ್​ ಯುವ ಮುಖಂಡ ರಕ್ಷಾ ರಾಮಯ್ಯ ಇದ್ದಾರೆ.

publive-image

ಇದನ್ನೂ ಓದಿ:ಲಾಭದ ದಿನ.. ಕಹಿ ಮಾತುಗಳಿಂದ ದೂರವಿರಿ, ಹಣದ ವಿಷ್ಯದಲ್ಲಿ ಗಮನವಿರಲಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment