newsfirstkannada.com

ಹಾರ್ದಿಕ್ ಪಾಂಡ್ಯ ಬಳಿಯಿರೋ ಒಟ್ಟು ಆಸ್ತಿ ಎಷ್ಟು ಕೋಟಿ? 70% ನತಾಶಾಗೆ ಕೊಟ್ರೆ ಉಳಿಯೋದೆಷ್ಟು?

Share :

Published May 26, 2024 at 6:19pm

Update May 26, 2024 at 7:35pm

  ಸರ್ಬಿಯಾ ದೇಶದಿಂದ ಭಾರತಕ್ಕೆ ಬಂದ ನತಾಶಾ ಬದುಕಿನಲ್ಲಿ ಬಿರುಗಾಳಿ

  ದುನಿಯಾ ವಿಜಯ್ ದನ ಕಾಯೋನು ಚಿತ್ರದಲ್ಲಿ ಅಭಿನಯಿಸಿರುವ ನತಾಶಾ

  ಹಾರ್ದಿಕ್-ನತಾಶಾ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದ್ದು ಯಾರು ಗೊತ್ತಾ?

ಸರ್ಬಿಯಾ ದೇಶದಿಂದ ಭಾರತಕ್ಕೆ ಬಂದು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ತಿದ್ದ ನತಾಶಾ ಹಾರ್ದಿಕ್ ಪಾಂಡ್ಯ ಜೊತೆ ಪ್ರೀತಿಯಲ್ಲಿ ಮುಳುಗಿ ಮದುವೆಗೂ ಮೊದಲೇ ಮಗುವನ್ನು ಮಾಡಿಕೊಂಡಿದ್ದಳು. ಬೊಂಬಾಟ್ ಸಂಸಾರ ಸಾಗಿಸುತ್ತಾ ಬಂದಿದ್ರು. ಹಾರ್ದಿಕ್ ಮತ್ತು ನತಾಶಾ ಜೋಡಿಯನ್ನು ಕಂಡು ಇದ್ರೆ ಹೀಗೆ ಇರ್ಬೇಕು ಅಂತ ಆಸೆಪಟ್ಟ ಜೋಡಿಗಳು ಅದೆಷ್ಟೋ. ಆದ್ರಿಂದು ಅದೇ ಜೋಡಿಯ ಬಾಳಲ್ಲಿ ಕಂದಕ ಸೃಷ್ಟಿಯಾಗಿದೆ ಎಂಬ ಸುದ್ದಿಗಳು ಅಪ್ಪಳಿಸಿವೆ. ಆ ಗಾಸಿಪ್‌ಗಳು ನಿಜವೇ ಎಂದುಕೊಳ್ಳೋದಾದ್ರೆ ಈ ಸಂಸಾರದಲ್ಲಿ ಕಲಹ ಮೂಡಲು ಕಾರಣವೇನು ಎಂಬ ಪ್ರಶ್ನೆ ಹುಟ್ಟುತ್ತೆ.

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಾಂಸಾರಿಕ ಜೀವನದಲ್ಲಿ ಕಾರ್ಮೋಡ ಕವಿದಿರೋ ಬಗ್ಗೆ ಗಾಸಿಪ್‌ಗಳು ಶುರುವಾಗಿವೆ. ನಾಲ್ಕು ವರ್ಷಗಳ ಹಿಂದೆ ಸರ್ಬಿಯಾ ಮೂಲದ ಮಾಡೆಲ್‌ ನತಾಶಾ ಸ್ಟಾಂಕೋವಿಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಹಾರ್ದಿಕ್ ಪಾಂಡ್ಯಗೆ ಕ್ರಿಕೆಟ್ ಕೆರಿಯರ್‌ನ ಸಂಕಷ್ಟದ ಕಾಲದಲ್ಲೇ ದಾಂಪತ್ಯದಲ್ಲೂ ಬಿರುಕು ಮೂಡಿದೆ ಎನ್ನಲಾಗ್ತಿದೆ. ಅಲ್ಲದೆ, ಇದಾಗಲೇ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಪರಸ್ಪರ ಮಾತುಕತೆ ನಡೆಸಿ ವಿಚ್ಛೇದನಕ್ಕೂ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ವಿಚ್ಛೇದನದ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾಗೆ ತಮ್ಮ ಆಸ್ತಿಯ ಶೇಕಡ 70 ರಷ್ಟನ್ನು ನೀಡಬೇಕಾಗಬಹುದು ಎನ್ನಲಾಗುತ್ತಿದೆ. ಅಂದರೆ, ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾಗೆ ವಿಚ್ಛೇದನ ಪರಿಹಾರವಾಗಿ 60 ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತೆ.

ಒಂದೊಮ್ಮೆ ಸದ್ಯದ ಗಾಸಿಪ್‌ ನಿಜ ಎಂದುಕೊಳ್ಳೋದಾದ್ರೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ಬಿರುಕು ಮೂಡಿದ್ಯಾಕೆ? ಸುಂದರ ಸಂಸಾರ ಛಿದ್ರವಾಗುವಂತೆ ಮಾಡಿದ್ದೇನು ಎಂಬ ಪ್ರಶ್ನೆ ಹುಟ್ಟಿದೆ. ಈ ಸಂಬಂಧಪಟ್ಟಂತೆ ಹಲವು ಚರ್ಚೆಗಳು ಶುರುವಾಗಿವೆ. ಕ್ರಿಕೆಟರ್ ಹಾರ್ದಿಕ್ ಮತ್ತು ನತಾಶಾ ದಂಪತಿಯ ಬಾಳಲ್ಲಿ ಕಲಹ ಹುಟ್ಟಲು ಹತ್ತಾರು ಕಾರಣಗಳನ್ನು ಪಟ್ಟಿ ಮಾಡಲಾಗ್ತಿದೆ.

ಇದನ್ನೂ ಓದಿ: ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಹಾರ್ದಿಕ್​​ ಪಾಂಡ್ಯ; ಆಗಿದ್ದೇನು..? 

ದಾಪಂತ್ಯದ ಮೇಲೆ ಪ್ರಭಾವ ಬೀರಿತಾ ಹಾರ್ದಿಕ್ ಕ್ರಿಕೆಟ್ ಕೆರಿಯರ್‌?
ನಾಯಕತ್ವದಲ್ಲಿ ಹಿನ್ನಡೆ.. ಟೀಕೆ.. ದೂರವಾಗೋ ನಿರ್ಧಾರ ಮಾಡಿದ್ಳಾ ಪತ್ನಿ? 

ಸೆಲೆಬ್ರಿಟಿಗಳ ವೈವಾಹಿಕ ಜೀವನ ತುಂಬಾ ಡಿಫರೆಂಟ್. ಇಬ್ಬರು ಸೆಲೆಬ್ರಿಟಿಗಳು ದಾಂಪತ್ಯಕ್ಕೆ ಕಾಲಿಡ್ತಾರೆ ಅಂದ್ರೆ ಅದರ ಹಿಂದೆ ಪ್ರೀತಿಯನ್ನೂ ಮೀರಿದ ಹಲವಾರು ಲೆಕ್ಕಾಚಾರಗಳು ಇರುತ್ತವೆ. ಎಲ್ಲಾ ಸೆಲೆಬ್ರಿಟಿಗಳಿಗೂ ಇದು ಅನ್ವಯ ಆಗದಿದ್ರೂ ಬಹುತೇಕ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಸಾಗೋದು ಇದೇ ರೀತಿಯಲ್ಲಿ. ಅಸಲಿಗೆ, ಸರ್ಬಿಯಾ ದೇಶದ ಮಾಡೆಲ್ ನತಾಶಾಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಕೆರಿಯರ್ ಅದ್ಭುತವಾಗಿತ್ತು. ಅವರ ಕೆರಿಯರ್ ಮೇಲ್ಗತಿಯಲ್ಲಿ ಸಾಗಿತ್ತು. ಹಾರ್ದಿಕ್ ಪಾಂಡ್ಯಗೆ ಅತಿದೊಡ್ಡ ಅಭಿಮಾನಿಗಳ ಬಳಗ ಹುಟ್ಟಿಕೊಂಡಿತ್ತು. ಮುಂಬೈ ಮತ್ತು ಇಂಡಿಯಾ ತಂಡದಲ್ಲಿ ಹಾರ್ದಿಕ್ ಆಲ್‌ರೌಂಡರ್ ಆಟ ಅವರ ಪಾಪ್ಯುಲಾರಿಟಿಯನ್ನು ಉತ್ತುಂಗಕ್ಕೆ ಏರಿಸಿತ್ತು. ಅದೇ ಸಂದರ್ಭದಲ್ಲಿ ಮಾಡೆಲ್ ನತಾಶಾಗೆ ಹಾರ್ದಿಕ್ ಲವ್ ಪ್ರಪೋಸ್ ಮಾಡಿದ್ರು. ಫೇಮಸ್ ಕ್ರಿಕೆಟರ್, ನೋಡೋಕೆ ಹ್ಯಾಂಡ್‌ಸಮ್ ಆಗಿದ್ದಾನೆ. ಹಾರ್ದಿಕ್‌ನ ಪ್ರಪೋಸಲ್ ಒಪ್ಪದಿರೋಕೆ ನತಾಶಾ ಬಳಿ ಕಾರಣಗಳೇ ಇರ್ಲಿಲ್ಲ. ಅಂತೆಯೇ ನತಾಶಾ ಮತ್ತು ಹಾರ್ದಿಕ್ ಲವ್ ಜರ್ನಿ ಶುರು ಮಾಡಿದ್ದರು. ಮದುವೆಗೂ ಮೊದಲೇ ಮಗು ಮಾಡ್ಕೊಂಡು ಎಲ್ಲರ ಕಣ್ಣರಳುವಂತೆ ಮಾಡಿದ್ರು. ನಂತರ ಅದ್ಧೂರಿಯಾಗಿ ಮದುವೆಯಾಗಿ ಸುಖ ಸಂಸಾರ ಸಾಗಿಸುವತ್ತ ಹೆಜ್ಜೆ ಹಾಕಲಾರಂಭಿಸಿದ್ದರು.

ಈ ವರ್ಷದ ಪ್ರಾರಂಭದವರೆಗೆ ಹಾರ್ದಿಕ್ ಕ್ರಿಕೆಟ್ ಕೆರಿಯರ್‌ನಲ್ಲಿ ಎಲ್ಲವೂ ಚೆನ್ನಾಗಿತ್ತು. ಮುಂದೆ ಭಾರತದ ತಂಡಕ್ಕೂ ಕ್ಯಾಪ್ಟನ್ ಆಗ್ತಾರೆ ಎಂದು ಚರ್ಚೆಗಳು ಶುರುವಾಗಿದ್ದವು. ಅದೇ ವೇಳೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್‌ರನ್ನು ತಮ್ಮ ಟೀಮ್‌ಗೆ ವಾಪಸ್ ಕರೆಸಿಕೊಂಡಿತು. ಗುಜರಾತ್‌ ತಂಡದ ಕ್ಯಾಪ್ಟನ್ ಆಗಿದ್ದ ಹಾರ್ದಿಕ್‌ರನ್ನು ವಾಪಸ್ ಕರೆಸಿಕೊಂಡು ಮುಂಬೈನ ಕ್ಯಾಪ್ಟನ್ ಪಟ್ಟ ಕಟ್ಟಲಾಯ್ತು. ಅಲ್ಲಿಂದ ಶುರುವಾಗಿದ್ದು ಹಾರ್ದಿಕ್ ಪಾಲಿನ ಕೇಡುಗಾಲ.

ಹೌದು.. ಅದಾಗಲೇ ಮುಂಬೈ ತಂಡವನ್ನು ಮುನ್ನಡೆಸುತ್ತಾ ಕಪ್‌ಗಳ ಮೇಲೆ ಕಪ್‌ಗನ್ನು ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾರನ್ನು ಕೆಳಗೆ ಇಳಿಸಿ ಹಾರ್ದಿಕ್ ಪಾಂಡ್ಯರಿಗೆ ನಾಯಕತ್ವ ನೀಡಿದ್ದು ಮುಂಬೈ ಅಭಿಮಾನಿಗಳಲ್ಲಿ ತೀವ್ರ ಕೋಪ ತರಿಸಿತ್ತು. ಹಾಗಾಗಿ, ಹಾರ್ದಿಕ್ ಪಾಂಡ್ಯ ಸ್ಟೇಡಿಯಂಗೆ ಕಾಲಿಟ್ಟಾಗ ಮುಂಬೈ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ರೋಹಿತ್ ಶರ್ಮಾರನ್ನು ಕೆಳಗೆ ಇಳಿಸೋದಕ್ಕೆ ಹಾರ್ದಿಕ್ ಪಾಂಡ್ಯನೇ ಕಾರ ಎಂಬಂತೆ ಟೀಕಿಸಲು ಆರಂಭಿಸಿದ್ದರು. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡದ ಒಳಗೂ ಕೂಡ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದು ಹಲವು ಕೋಲ್ಡ್ ವಾರ್‌ಗಳನ್ನ ಸೃಷ್ಟಿಸಿತ್ತು. ಇದೆಲ್ಲದರ ಪರಿಣಾಮ ಹಾರ್ದಿಕ್ ಪಾಂಡ್ಯ ಸರಿಯಾಗಿ ನಾಯಕತ್ವ ನಿಭಾಯಿಸಲು ಸಾಧ್ಯವೇ ಆಗಲಿಲ್ಲ. ಕೊನೆಗೆ ಮುಂಬೈ ತಂಡ ಪೈಪೋಟಿಯನ್ನೇ ಕೊಡದೆ ಐಪಿಎಲ್‌ನಿಂದ ಹೊರಬಿತ್ತು. ಎಲ್ಲಕ್ಕೂ ಕಾರಣ ಹಾರ್ದಿಕ್ ಪಾಂಡ್ಯ ಎಂಬಂತೆ ಚರ್ಚೆಗಳು ಶುರುವಾದವು. ಫ್ಯಾನ್ಸ್‌ಗಳ ಪಾಲಿಗೆ ಹಾರ್ದಿಕ್ ಅಕ್ಷರಶಃ ವಿಲನ್‌ನಂತಾದ್ರು.

ಈ ಎಲ್ಲಾ ಬೆಳವಣಿಗೆಗಳಿಂದಾಗಿ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ತೀವ್ರ ಮುಜುಗರ ಅನುಭವಿಸಿ ಕೊನೆಗೆ ಹಾರ್ದಿಕ್ ಪಾಂಡ್ಯರಿಂದ ದೂರವಾಗೋ ನಿರ್ಧಾರ ಮಾಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿದೆ. ಅಸಲಿಗೆ, ಹಾರ್ದಿಕ್ ಪಾಂಡ್ಯ ಆಗ್ಲಿ ನತಾಶಾ ಆಗ್ಲಿ ತಮ್ಮ ದಾಂಪತ್ಯ ಜೀವನದ ಗಾಸಿಪ್‌ಗಳಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದಾಗ್ಯೂ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿವೆ. ಅಂಥಾ ಮತ್ತೊಂದು ಚರ್ಚೆ ಅಂದ್ರೆ ನತಾಶಾಳ ಮಾಜಿ ಬಾಯ್‌ಫ್ರೆಂಡ್‌ನದ್ದು.

ಮದುವೆ ಬಳಿಕವೂ ಮಾಜಿ ಬಾಯ್‌ಫ್ರೆಂಡ್ ಜೊತೆ ನತಾಶಾ ನಂಟು?
ಹಾರ್ದಿಕ್-ನತಾಶಾ ದಾಪಂತ್ಯದಲ್ಲಿ ಹುಳಿ ಹಿಂಡಿದನಾ ಮಾಜಿ ಪ್ರಿಯಕರ?
ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಸರ್ಬಿಯಾ ದೇಶದವರು. ಮಾಡೆಲಿಂಗ್ ಮೂಲಕ ಹೆಸರು ಮಾಡಿದ್ದ ನತಾಶಾ ನಟಿಯಾಗಿ ಬಾಲಿವುಡ್‌ಗೆ ಎಂಟ್ರಿಯಾಗಿದ್ದರು. ಅಲ್ಲದೆ, 2014 ರಲ್ಲಿ ಹಿಂದಿಯ ಬಿಗ್‌ಬಾಸ್ 8 ರಲ್ಲಿ ಕಾಣಿಸಿಕೊಂಡ ಬಳಿಕವಂತೂ ನತಾಶಾ ಪಾಪ್ಯುಲಾರಿಟಿ ಮತ್ತಷ್ಟು ಹೆಚ್ಚಾಗಿತ್ತು. ಅದಾದ ಬಳಿಕ ಹಲವಾರು ಬಾಲಿವುಡ್‌ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ನತಾಶಾ ಕನ್ನಡದ ದುನಿಯಾ ವಿಜಯ್ ನಟನೆಯ ದನ ಕಾಯೋನು ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಅದಾದ ಬಳಿಕ ನಚ್ ಬಲಿಯೇ ಹೆಸರಿನ ರಿಯಾಲಿಟಿ ಶೋನಲ್ಲೂ ನತಾಶಾ ಮಿಂಚಿದ್ದಳು. ಆ ರಿಯಾಲಿಟಿ ಶೋನಲ್ಲಿ ನತಾಶಾ ಜೊತೆ ಸ್ಪರ್ಧಿಯಾಗಿದ್ದವ ಈ ಅಲಿ ಗೋನಿ. ನಟ, ಮಾಡೆಲ್ ಆಗಿರೋ ಅಲಿ ಗೋನಿ ಈ ನತಾಶಾಳ ಜೊತೆ ಆತ್ಮೀಯನಾಗುತ್ತಾನೆ. ಇಬ್ಬರ ನಡುವೆ ಲವ್ವಿಡವ್ವಿ ಶುರುವಾಗಿ ನಂತರದಲ್ಲಿ ನತಾಶಾ ಅಲಿ ಗೋನಿಯ ಜೊತೆ ಬ್ರೇಕಪ್ ಮಾಡಿಕೊಂಡಳು ಎಂಬ ಸುದ್ದಿಗಳಿವೆ. ಹಾರ್ದಿಕ್ ಮತ್ತು ನತಾಶಾ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸೋದಕ್ಕೆ ಈತನೂ ಕಾರಣ ಇರಬಹುದು ಎನ್ನಲಾಗುತ್ತಿದೆ. ಯಾಕಂದ್ರೆ, ಮದುವೆ ಬಳಿಕವೂ ನತಾಶಾ ತನ್ನ ಮಾಜಿ ಬಾಯ್‌ಫ್ರೆಂಡ್ ಅಲಿ ಗೋನಿಯೊಟ್ಟಿಗೆ ಸಂಪರ್ಕದಲ್ಲಿ ಇದ್ದಾಳೆಂದು ಹೇಳಲಾಗುತ್ತಿದೆ. ನತಾಶಾ ತನ್ನ ಮಾಜಿ ಪ್ರಿಯಕರನ ಜೊತೆ ಸಂಪರ್ಕದಲ್ಲಿದ್ದದ್ದೇ ಸಂಸಾರದಲ್ಲಿ ಕಲಹ ಮೂಡಲು ಕಾರಣವಾಯ್ತು ಎಂಬ ಮಾತುಗಳಿವೆ. ಆದ್ರೆ, ಈ ಗಾಸಿಪ್‌ಗಳು ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಮಾತ್ರ ನಿಗೂಢ.

ಪತ್ನಿಗೆ ಹಾರ್ದಿಕ್ ₹60 ಕೋಟಿ ರೂಪಾಯಿ ಜೀವನಾಂಶ ಕೊಡ್ಬೇಕಾಗುತ್ತಾ?
ಗಾಸಿಪ್‌ಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಅವರು ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶ ರೂಪದಲ್ಲಿ ತಮ್ಮ 70% ಆಸ್ತಿಯನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗುತ್ತಿದೆ. ಹಾರ್ದಿಕ್‌ ಪಾಂಡ್ಯ ಒಟ್ಟಾರೆ 165 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರಂತೆ. ಮುಂಬೈನಲ್ಲಿ 30 ಕೋಟಿ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದು, ಇದರೊಂದಿಗೆ ಅವರು ವಡೋದರಾದಲ್ಲಿ ದುಬಾರಿ ಬೆಲೆಯ ವಿಲ್ಲಾ ಹೊಂದಿದ್ದಾರೆ. ಹಾಗಾಗಿ, ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಗೆ ವಿಚ್ಛೇದನ ನೀಡಿದರೆ ಕನಿಷ್ಟ ಅಂದರೂ 60 ಕೋಟಿ ರೂಪಾಯಿ ಜೀವನಾಂಶ ಕೊಡಬೇಕಾಗುತ್ತೆ ಎಂಬ ಚರ್ಚೆಗಳು ಶುರುವಾಗಿವೆ. ಆದ್ರೆ ಅಧಿಕೃತ ಮಾಹಿತಿ ಹೊರಬೀಳೋವರೆಗೂ ಎಲ್ಲವೂ ಗಾಸಿಪ್‌ಗಳಷ್ಟೇ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ವಿಚಾರದಲ್ಲಿ ಕಟು ಟೀಕೆಗಳನ್ನು ಅನುಭವಿಸಿರೋ ಹಾರ್ದಿಕ್ ಪಾಂಡ್ಯಗೆ ಈಗ ಸಾಂಸಾರಿಕ ಜೀವನದಲ್ಲೂ ಸಂಕಷ್ಟ ಶುರುವಾಗಿದೆ. ಗಂಡ ಹೆಂಡತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗ್ತಿದೆ. ಆದ್ರೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ ಈ ಕ್ಷಣಕ್ಕೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್ ಪಾಂಡ್ಯ ಬಳಿಯಿರೋ ಒಟ್ಟು ಆಸ್ತಿ ಎಷ್ಟು ಕೋಟಿ? 70% ನತಾಶಾಗೆ ಕೊಟ್ರೆ ಉಳಿಯೋದೆಷ್ಟು?

https://newsfirstlive.com/wp-content/uploads/2024/05/HARDIK_PANDYA-1.jpg

Load More