ಇಸ್ರೇಲ್​ ಮತ್ತು ಇರಾನ್​ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು

author-image
AS Harshith
Updated On
ಇಸ್ರೇಲ್​ ಮತ್ತು ಇರಾನ್​ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು
Advertisment
  • ಇರಾನ್​ ದಾಳಿಗೆ ​​​ಕೆಂಡಮಂಡಲವಾದ ಇಸ್ರೇಲ್
  • ಬಾಂಬ್‌ ಶೆಲ್ಟರ್‌ಗಳಿಗೆ ಶಿಫ್ಟ್‌ ಆದ ಸಾವಿರಾರು ಜನರು
  • ಮನಬಂದಂತೆ ಗುಂಡಿನ ದಾಳಿ.. ಸಿಕ್ಕ ಸಿಕ್ಕವರ ಕೊಲೆ

ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಜೋರಾಗಿದೆ. ಇಸ್ರೇಲ್ ಮೇಲೆ ಇರಾನ್ ಭೀಕರ ದಾಳಿ ನಡೆಸಿದ್ದು, ಯುದ್ಧ ಭೀತಿ ನಿರ್ಮಾಣವಾಗಿದೆ. ತನ್ನ ದೇಶದ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್​​ನಿಂದ ಇಸ್ರೇಲ್‌ ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ.

ಇಸ್ರೇಲ್‌ ಮೇಲೆ ಇರಾನ್‌ನಿಂದ ಏಕಕಾಲದಲ್ಲಿ 200ಕ್ಕೂ ಹೆಚ್ಚಿನ ಮಿಸೈಲ್‌ಗಳ ದಾಳಿ ನಡೆಸಲಾಗಿದ್ದು, ಇರಾನ್‌ ದಾಳಿಗೆ 8 ಮಂದಿ ಇಸ್ರೇಲಿಗರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನ ಜೆರುಸಲೇಮ್​, ಟೆಲ್​ಅವೀವ್​ ಸೇರಿದಂತೆ ಹಲವೆಡೆ ಕ್ಷಿಪಣಿ ಸೈರನ್‌ಗಳ ಸದ್ದು ಕೇಳಿ ಬರ್ತಿದ್ದಂತೆ ಸಾವಿರಾರು ಜನರು ಬಾಂಬ್‌ ಶೆಲ್ಟರ್‌ಗಳಿಗೆ ಶಿಫ್ಟ್‌ ಆಗಿದ್ದಾರೆ.

publive-image

ಟೆಲ್ ಅವೀವ್‌ನಲ್ಲಿ ಉಗ್ರರ ಅಟ್ಟಹಾಸ.. ಮನಬಂದಂತೆ ಗುಂಡಿನ ದಾಳಿ

ಇಸ್ರೇಲ್‌ನ ಟೆಲ್ ಅವೀವ್‌ನಲ್ಲೂ ಉಗ್ರರ ಅಟ್ಟಹಾಸಕ್ಕೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಗನ್ ಹಿಡಿದು ಬಂದ ಇಬ್ಬರು ಉಗ್ರರು ಸಾರ್ವಜನಿಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಉಗ್ರರ ಪೈರಿಂಗ್​ಗೆ ರಸ್ತೆಯಲ್ಲಿ ಸಾಲು ಸಾಲು ಹೆಣಗಳ ರಾಶಿ ಬಿದ್ದಿದೆ.

ಇದನ್ನೂ ಓದಿ: ಇಂದಿನಿಂದ ಮಾರಾಟ ಪ್ರಾರಂಭಿಸಿದ Jawa 42 FJ 350​.. ಅದ್ಭುತ ಫೀಚರ್​, ಯುವಕರ ನಿದ್ದೆ ಕೆಡಿಸಿದ ರೆಟ್ರೋ ಶೈಲಿಯ ಬೈಕ್​​​

publive-image

ಮೊನ್ನೆಯಷ್ಟೇ ಹಿಜ್ಬುಲ್ಲಾ ಪರಮೋಚ್ಚ ನಾಯಕ ಹಸನ್‌ ನಸ್ರಲ್ಲಾನನ್ನ ಇಸ್ರೇಲ್ ಹುಡುಕಿ ಹೊಡೆದಿತ್ತು. ನೆಲಮಟ್ಟದಿಂದ 60 ಅಡಿ ಆಳದ ಬಂಕರ್‌ನಲ್ಲಿದ್ದ ನಸ್ರಲ್ಲಾ ಮತ್ತು ಆತನ ಸಂಗಡಿಗರಿದ್ದ ಸ್ಥಳದ ಮೇಲೆ ಇಸ್ರೇಲ್‌ ವಿಮಾನಗಳು 80 ಟನ್‌ ಬಾಂಬ್‌ ಹೊತ್ತ ಕ್ಷಿಪಣಿ ಮೂಲಕ ದಾಳಿ ಮಾಡಿತ್ತು. ಒಂದೇ ಏಟಿಗೆ 20ಕ್ಕೂ ಹೆಚ್ಚು ನಾಯಕರನ್ನು ಕೊಂದು ಮುಗಿಸಿತ್ತು. ಇದಕ್ಕೆ ಪರ್ಯಾಯವಾಗಿ ಇರಾನ್ ಸದ್ಯ ದಾಳಿ ಮಾಡಿದೆ.

ಇದನ್ನೂ ಓದಿ: ಯಾವ್ಯಾವ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ ಸೂರ್ಯ ಗ್ರಹಣ? ಭಾರತದ ಮೇಲೆ ಬೀರೋ ಪ್ರಭಾವವೇನು?

ಒಟ್ಟಾರೆ, ಮುಸ್ಲಿಂ, ಕ್ರಿಶ್ಚಿಯನ್​​​, ಯಹೂದಿ ಮೂರು ಧರ್ಮಗಳ ಪವಿತ್ರ ಭೂಮಿ ಎಂದೇ ಪ್ರಖ್ಯಾತಿ ಪಡೆದಿರೋ ಜೆರುಸೆಲಮ್​​​​​​​ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸಿದೆ. ಪವಿತ್ರ ಭೂಮಿ ಮೇಲಿನ ಇರಾನ್​ ದಾಳಿಗೆ ಇಸ್ರೇಲ್​​​ ಕೆಂಡಮಂಡಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment