ಅದ್ಭುತ ಶಕ್ತಿಯನ್ನು ಹೊಂದಿದೆ ಜಾವಾದ ಹೊಸ ಬೈಕ್
ಎರಡು ರೂಪಾಂತರದಲ್ಲಿ ಮಾರುಕಟ್ಟೆಗೆ ಬಂದಿದೆ ನ್ಯೂ ಬೈಕ್
ರೆಟ್ರೋ ಥೀಮ್ನಲ್ಲಿ ಮಾರುಕಟ್ಟೆಗೆ ಬಂದ ಕಲರ್ಫುಲ್ ಬೈಕ್
ಜಾವಾ ಯೆಜ್ಡಿ ಮೋಟಾರ್ ಸೈಕಲ್ ಹೊಸ 42 FJ 350 ರೋಡ್ಸ್ಟರ್ ಮಾದರಿಯನ್ನು ಭಾರತೀಯರಿಗೆ ಪರಿಚಯಿಸಿದೆ. ನೂತನ ಬೈಕ್ ಆಕರ್ಷಕ ಲುಕ್ ಹೊಂದಿದ್ದು, ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿ ಖರೀದಿಸಬಹುದಾದ ಆಯ್ಕೆಯನ್ನು ಗ್ರಾಹಕರಿಗೆ ತೆರೆದಿಟ್ಟಿದೆ.
ಜಾವಾ 42ಎಫ್ಜೆ 350 ಬೈಕ್ ಮಾರಾಟ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಹಬ್ಬದ ಋತುವಿನಲ್ಲಿ ಖರೀದಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ರೆಟ್ರೋ-ಥೀಮ್ ಮಾಡೆಲ್ನಲ್ಲಿ ನೂತನ ಬೈಕ್ ಮಾರುಕಟ್ಟೆಗೆ ಬಂದಿದೆ.
ಜಾವಾ 42ಎಫ್ಜೆ 350 ಬೈಕನ್ನು ಸ್ಟ್ಯಾಂಡರ್ಡ್ ಜಾವಾ 42ಗೆ ಹೋಲಿಸಿದರೆ ಅದ್ಭುತ ವಿನ್ಯಾಸವನ್ನು ಹೊಂದಿದೆ. ಟಿಯರ್ ಡ್ರಾಪ್ ಫ್ಯುಯೆಲ್ ಹೊಂದಿದ್ದು, ಸೈಡ್ ಪ್ಯಾನೆಲ್ ಮತ್ತು ಫೆಂಡರ್ಗಳನ್ನು ಸ್ಟ್ಯಾಂಡರ್ಡ್ ಜಾವಾ 42ರಿಂದ ಒಯ್ಯಲಾಗಿದೆ. 350 ಸಿಸಿಯ ಈ ಬೈಕ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್ ಮೂಲಕ ಅದ್ಭುತ ಶಕ್ತಿಯನ್ನು ನೀಡುತ್ತದೆ. 28.7 ಬಿಹೆಚ್ಪಿ ಪೀಕ್ ಪವರ್ ಮತ್ತು 29.6 ಎನ್ಎಮ್ ಪೀಕ್ ಅನ್ನು ಹೊರಹಾಕುತ್ತದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಇದನ್ನೂ ಓದಿ: ಮಾಡೋದು ಚಿಂದಿ ಆಯೋ ಕೆಲಸ.. ಮಗನಿಗೆ iphone 16 pro max ಗಿಫ್ಟ್ ಕೊಟ್ಟ ಬಡ ತಂದೆ!
ನೂತನ ಬೈಕ್ನಲ್ಲಿ ಸೀಟ್ ವಿನ್ಯಾಸ ಮತ್ತು ಹ್ಯಾಂಡರ್ ಬಾರ್ ವಿನ್ಯಾಸ ಹೊಸದು. ಮಿಶ್ರಲೋಕದ ಚಕ್ರವನ್ನು ಹೊಂದಿರುವ ಈ ಬೈಕ್ನಲ್ಲಿ ಎಲ್ಇಡಿ ಹೆಡ್ಲ್ಯಾಂಪ್, ಸೆಮಿ ಡಿಜಿಟಲ್ ಇನ್ಟ್ರುಮೆಂಟ್ ಕನ್ಸೋಲ್, ಡ್ಯುಯೆಲ್ ಚಾನೆಲ್ ಎಬಿಎಸ್ ನೀಡಲಾಗಿದೆ. ಇದಲ್ಲದೆ ಅಪ್ಸ್ಟೆಪ್ಸ್ ಎಕ್ಸಾಸ್ಟ್ ಮತ್ತು ಅಫ್ ಸೆಟ್ ಇಂಧನ ಟ್ಯಾಂಕ್ ಕ್ಯಾಪ್ ನೀಡಲಾಗಿದೆ.
ಜಾವಾ 42ಎಫ್ಜೆ 350 ಎರಡು ರೂಪಾಂತರದಲ್ಲಿ ಮಾರುಕಟ್ಟೆಗೆ ಬಂದಿದೆ. ರೆಟ್ರೋ ಥೀಮ್ ಮೋಟಾರ್ ಸೈಕಲ್ ಮಿಸ್ಟಿಕ್ ಕಾಪರ್, ಡೀಪ್ ಬ್ಲ್ಯಾಕ್ ಮ್ಯಾಟ್ ಬ್ಲ್ಯಾಕ್ ಕಾರ್ಡ್, ಅರೋರಾ ಗ್ರೀನ್ ಮ್ಯಾಟ್, ಡೀಪ್ ಬ್ಲ್ಯಾಕ್ ಮ್ಯಾಟ್ ರೆಡ್ ಕ್ಲಾಡ್ ಮತ್ತು ಕಾಸ್ಮೋ ಬ್ಲೂ ಮ್ಯಾಟ್ ಹೊಂದಿದೆ.
ಇದನ್ನೂ ಓದಿ: iPhone ಆರ್ಡರ್ ಮಾಡಿದ ಗ್ರಾಹಕನಿಂದ ಕೊ*ಲೆಯಾದ ಡೆಲಿವರಿ ಬಾಯ್; ಗೋಣಿಯಲ್ಲಿ ತುಂಬಿಸಿ ಕಾಲುವೆಗೆ ಎಸೆದ
ನೂತನ ಬೈಕ್ ಬೆಲೆ 1.99 ಲಕ್ಷ ಮತ್ತು 2.22 ಲಕ್ಷದ ನಡುವೆ ಇದೆ. ಗ್ರಾಹಕರು 942 ರೂಪಾಯಿ ಪಾವತಿಸುವ ಮೂಲಕ ಕಂಪನಿಯ ಅಧಿಕೃತ ಮೋಟಾರ್ ಸೈಕಲ್ ಬುಕ್ಕಿಂಗ್ ಮಾಡಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ