newsfirstkannada.com

×

ಮಾಡೋದು ಚಿಂದಿ ಆಯೋ ಕೆಲಸ.. ಮಗನಿಗೆ iphone 16 pro max ಗಿಫ್ಟ್ ಕೊಟ್ಟ ಬಡ ತಂದೆ!

Share :

Published October 2, 2024 at 6:58am

Update October 2, 2024 at 7:48am

    iphone 16 pro max ಎಷ್ಟು ಲಕ್ಷ ರೂಪಾಯಿಗಳು ಗೊತ್ತಾ?

    ಮಗ ಮಾಡಿದ ಸಾಧನೆಗೆ ತಂದೆ ಐಫೋನ್ ಗಿಫ್ಟ್ ಮಾಡಿದ್ರು

    ಮಗನಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟಿರುವುದು ಏಕೆ?

ಮಕ್ಕಳ ಮೇಲೆ ಅಪ್ಪ-ಅಮ್ಮನ ಕೋಪಕ್ಕಿಂತ ಪ್ರೀತಿನೇ ಜಾಸ್ತಿ ಇರುತ್ತೆ. ಆದ್ರೇ ಅವರು ತೋರಿಸಿಕೊಳ್ಳಲ್ಲ. ಆದ್ರೇ ಮಕ್ಕಳ ಮೇಲೆ ಅಪ್ಪ ಅಮ್ಮ ಯಾವ ರೀತಿ ಪ್ರೀತಿ ತೋರಿಸ್ತಾರೆ ಅನ್ನೋದನ್ನ ಎಕ್ಸ್​ಪೆಕ್ಟ್ ಮಾಡೋಕೆ ಸಾಧ್ಯ ಇಲ್ಲ. ಮಕ್ಕಳ ಚಿಕ್ಕ ಚಿಕ್ಕ ಸಾಧನೆ ಕೇಳಿದರೆ ಸಾಕು ಎಷ್ಟೊಂದು ಖುಷಿ, ಸಂಭ್ರಮ ಮಾಡಿ ಬಿಡ್ತಾರೆ. ಯಾಕಂದರೆ ನಾವಂತೂ ಹೀಗೆ ಮಾಡೋಕೆ ಆಗಿಲ್ಲ. ನನ್ನ ಮಕ್ಕಳಾದರೂ ಸಾಧನೆ ಮಾಡ್ತಿದ್ದಾರಲ್ವಾ ಅನ್ನೋ ಸಣ್ಣ ಖುಷಿ ಅವರ ಮನಸ್ಸಿಲ್ಲಿರುತ್ತೆ. ಮುಖ ಗೊತ್ತಾಗುತ್ತೆ. ಕೆಲ ಪೋಷಕರು ಮಕ್ಕಳ ಸಾಧನೆ ನೋಡಿ ಸಂಭ್ರಮಿಸುತ್ತಾ ಇರುವಾಗಲೇ ಕಷ್ಟಪಟ್ಟು ಸಾಲ ಮಾಡಿಯಾದ್ರೂ ಮಕ್ಕಳು ಕೇಳಿದ್ದನ್ನ ಕೊಡಿಸೋಣ, ಗಿಫ್ಟ್ ಮಾಡೋಣ ಅಂದು ಕೊಳ್ತಾರೆ. ಅದೇ ರೀತಿ ಇಲ್ಲೊಬ್ಬರು ಬಡ ತಂದೆ, ಕೂಡಿಟ್ಟ ಹಣವನ್ನೆಲ್ಲ ಹಾಕಿ, ನನ್ನ ಮಗ ಬೋರ್ಡ್‌ ಎಕ್ಸಾಂನಲ್ಲಿ ಟಾಪರ್ ಬಂದ ಅನ್ನೋ ಕಾರಣಕ್ಕೆ ದುಬಾರಿ ಬೆಲೆಯ ಗಿಫ್ಟ್​​ನ್ನ ಕೊಟ್ಟಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಮಗ ಬೋರ್ಡ್​ ಎಕ್ಸಾಂನಲ್ಲಿ ಟಾಪರ್

ಐಫೋನ್‌ 16 ಪ್ರೋ ಮ್ಯಾಕ್ಸ್‌ ಮೊಬೈಲ್​​​​ ಮಾರ್ಕೆಟ್​ಗೆ ಬಂದಿದ್ದೇ ತಡ ನನಗೆ ಬೇಕು. ನನಗೆ ಬೇಕು ಅಂತ ಖರೀದಿ ಮಾಡೋಕೆ ಅಂಗಡಿ ಮುಂದೆ ಜನ ಕಾಲಿಡುತ್ತಿದ್ದಾರೆ. ಈಗಿನ ಕಾಲದಲ್ಲಿ ಐಫೋನ್ ಇದ್ದರೇ ರಿಚ್.. ಸ್ಟೇಟಸ್.. ಪ್ರೆಸ್ಟೀಜ್ ಅಂತ ಅನ್ಕೊಳ್ಳೂರು ಇದಾರೆ. ಆದ್ರೇ ಅಷ್ಟೊಂದು ದುಡ್ಡು ಕೊಟ್ಟು, ಮೊಬೈಲ್ ಖರೀದಿ ಮಾಡೋದ್ಯಾಕೆ. ಅದು ನಮಗಲ್ಲ ಅನ್ನೋರು ಇದಾರೆ. ಆದ್ರೇ ತನ್ನ ಮಗ ಬೋರ್ಡ್​ ಎಕ್ಸಾಂನಲ್ಲಿ ಟಾಪರ್ ಬಂದ ಅನ್ನೋ ಕಾರಣಕ್ಕೆ ಖುಷಿಯಿಂದ ಬರೋಬ್ಬರಿ 1 ಲಕ್ಷ 80 ಸಾವಿರ ಬೆಲೆಯ ಐಫೋನ್‌ 16 ಪ್ರೋ ಮ್ಯಾಕ್ಸ್‌ ಮೊಬೈಲ್​​​ ಅನ್ನ ತಂದೆ ಗಿಫ್ಟ್ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ದಿನ ಚಿಂದಿ ಆಯ್ದು ಬಡ ಜೀವನ ನಡೆಸ್ತಾ ಇದ್ದ ತಂದೆಯೊಬ್ಬ ತನ್ನ ಹಣವನ್ನೆಲ್ಲ ಒಟ್ಟು ಮಾಡಿ 1 ಲಕ್ಷ 80 ಸಾವಿರ ಬೆಲೆಯ ಐಫೋನ್ ಮೊಬೈಲ್ ಖರೀದಿ ಮಾಡಿದ್ದಾರೆ. ಹರಿದು ಹೋಗಿರೋ ಶರ್ಟ್​ ಹಾಕಿದ್ದ ವ್ಯಕ್ತಿಯ ಕೈನಲ್ಲಿ ಐಫೋನ್ ನೋಡಿದ ಯಾರೋ ಒಬ್ಬರು ಆ ವ್ಯಕ್ತಿಯ ಹಿಂದೆ ಮುಂದೆ ವಿಚಾರಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾನು ದಿನ ಚಿಂದಿ ಆಯೋ ಕೆಲಸ ಮಾಡ್ತಾ ಇರ್ತೀನಿ. ನನ್ನ ಮಗನಿಗೆ ಈ ಐಫೋನ್ ಗಿಫ್ಟ್ ಮಾಡೋಕೆ ಖರೀದಿ ಮಾಡಿದ್ದೀನಿ ಅಂತ ಹೇಳಿದ್ದಾರೆ. ಮಗ ಬೋರ್ಡ್‌ ಎಕ್ಸಾಂನಲ್ಲಿ ಒಳ್ಳೇ ಅಂಕಗಳಿಂದ​ ಬಂದು ಪಾಸ್ ಆಗಿದ್ದಾನೆ. ಅವನಿಗೆ ಸಪೋರ್ಟ್​ ಮಾಡೋಕೆ ಈ ಐಫೋನ್ 16 ಪ್ರೋ ಮ್ಯಾಕ್ಸ್‌ ಗಿಫ್ಟ್‌ ಮಾಡುತ್ತಿದ್ದಿನಿ ಎಂದು ಹೇಳಿಕೊಂಡಿದ್ದಾರೆ.

ಮಗನ ಸಾಧನೆ ಬಗ್ಗೆ ತಂದೆಗೆ ಹೆಮ್ಮೆ

ಸೆಪ್ಟೆಂಬರ್‌ 27ನೇ ತಾರೀಖು ಎಕ್ಸ್ ಅಕೌಂಟ್​​ನಲ್ಲಿ ವಿಡಿಯೋ ಅಪ್​ಲೋಡ್ ಆಗಿದ್ದು, ಬರೋಬ್ಬರಿ 1.1 ಮಿಲಿಯನ್​ಗೂ ಹೆಚ್ಚಾಗಿ ವಿವ್ಯೂಸ್ ಹಾಗೂ ಸಾಕಷ್ಟು ಜನ ಕಾಮೆಂಟ್ಸ್ ಮಾಡ್ತಾ ಶೇರ್ ಆಗ್ತಾ ಇದೆ. ಮಗನ ಸಾಧನೆ ಬಗ್ಗೆ ಈ ತಂದೆ ಎಷ್ಟು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಈ ಖುಷಿ ಸಂತೋಷ ಐಫೋನ್‌ಗಿಂತಲೂ ದುಬಾರಿಯಾದದ್ದುʼ ಅಂತ ಎಕ್ಸ್ ಯೂಸರ್​ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಮತ್ತೊಬ್ಬ ಯೂಸರ್ ಒಬ್ರೂ, ಆ ತಂದೆ ಬಗ್ಗೆ ಹೆಮ್ಮೆ ಇದೆ. ಆದ್ರೆ ಐಫೋನ್‌ ಗಿಫ್ಟ್ ಕೊಡೋ ಬದಲು, ಮಗನ ಎಜುಕೇಷನ್​​ಗೆ ಯೂಸ್ ಆಗೋ ರೀತಿ ಏನಾದ್ರೂ ಬೇರೆ ಗಿಫ್ಟ್ ಕೊಡಬಹುದಿತ್ತು ಅಂತ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: ಪಾರ್ವತಿ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್​.. ಇದು CMಗೆ ವರವಾಗುತ್ತಾ, ಕಂಟಕವಾಗುತ್ತಾ?

ರಿಚ್.. ಸ್ಟೇಟಸ್.. ಪ್ರೆಸ್ಟೀಜ್ ಅಂತ ಐ ಫೋನ್ ಪರ್ಚೆಸ್ ಮಾಡಿ ಶ್ರೀಮಂತರೂ ದರ್ಪ ತೋರಿಸ್ತಾರೆ. ಇನ್ನು ಕೆಲವರು ನಮ್ ಕೈಯಲ್ಲಿ ಕಾಸ್ಟ್​​ಲೀ ಫೋನ್ ಇರಬೇಕು ಅಂತ ಅನ್ಕೊಳ್ಳೋರು ಇದಾರೆ. ಆದ್ರೇ ಬೀದಿ ಬದಿ ಚಿಂದಿ ಆಯೋ ಕೆಲಸ ಮಾಡುತ್ತಿದ್ದ ಗುಜರಿ ವ್ಯಾಪಾರಿ, ಮಗ ಕೇಳದೆ ಇದ್ರೂ 1 ಲಕ್ಷ 80 ಸಾವಿರ ಬೆಲೆಯ ಐಫೋನ್ ಗಿಫ್ಟ್ ಮಾಡಿದ್ದಾರೆ. ಇದು ದುಬಾರಿ ಫೋನ್​​ಗಿಂತ ಮಗನ ಸಾಧನೆ ದುಬಾರಿ ಅಂತ ತಿಳಿದುಕೊಂಡು ತಂದೆ ಗಿಫ್ಟ್ ಮಾಡಿದ್ದಾರೆ. ಇನ್ನು ಮುಂದಿನ ಬದುಕಲ್ಲಿ ಆ ಮಗನ ಸಾಧನೆ ಇನ್ನಷ್ಟೂ ಹೆಚ್ಚಾಗಲಿ, ತಂದೆಯ ಮುಖದಲ್ಲಿ ಮತ್ತಷ್ಟೂ ಖುಷಿ ಮತ್ತಷ್ಟು ದುಪ್ಪಟ್ಟಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಡೋದು ಚಿಂದಿ ಆಯೋ ಕೆಲಸ.. ಮಗನಿಗೆ iphone 16 pro max ಗಿಫ್ಟ್ ಕೊಟ್ಟ ಬಡ ತಂದೆ!

https://newsfirstlive.com/wp-content/uploads/2024/10/IPHON_15.jpg

Load More