ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ವಿಪಕ್ಷ ನಾಯಕ R. ಅಶೋಕ್
ಸಿಎಂ ಸಿದ್ದರಾಮಯ್ಯಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ ಮುಡಾ
ಇವತ್ತು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ
ಸಿಎಂ ಸಿದ್ದರಾಮಯ್ಯಗೆ ಮುಡಾ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ. ಇದೀಗ ಸಿಎಂ ಪತ್ನಿ ಸೈಟ್ ಹಿಂದಿರುಗಿಸಿರುವ ಬಗ್ಗೆ ಪತ್ರ ಬರೆದಿದ್ದು, ಇದು ಸಿಎಂಗೆ ವರವಾಗುತ್ತಾ, ಇಲ್ಲ ಕಂಟಕವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಸಿಎಂ ಸಿದ್ದರಾಮಯ್ಯಗೆ ಮುಡಾ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ. ಸಿಎಂ ಸ್ಥಾನಕ್ಕೆ ಆಪತ್ತು ತಂದಿದೆ. ನಾನು ತಪ್ಪು ಮಾಡಿಲ್ಲ, ಜಗ್ಗೋದಿಲ್ಲ, ಬಗ್ಗೋದಿಲ್ಲ, ಹೆದರುವುದಿಲ್ಲ ಎಂದು ಹೇಳ್ತಿದ್ದ ಸಿಎಂ, ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ತಪ್ಪು ಮಾಡೇ ಇಲ್ಲ ಎಂದ ಮೇಲೆ ಸೈಟ್ ವಾಪಸ್ ಮಾಡ್ತಿರೋದೇಕೆ. ದಿಢೀರ್ ನಿವೇಶನಗಳನ್ನು ಹಿಂದಿರುಗಿಸಲು ಕಾರಣವಾದ್ರೂ ಏನು ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು?
ಮೈಸೂರು ಲೋಕಾಯುಕ್ತ ತನಿಖೆಯ ನಡುವೆ, ಜಾರಿ ನಿರ್ದೇಶನಾಲಯ ಇಸಿಆರ್ ದಾಖಲಿಸಿಕೊಂಡಿರುವುದು ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಸೈಟ್ ವಾಪಸ್ ಕೊಡ್ಸಿದ್ರೆ ಮುಡಾ ಕೇಸ್‌ನಲ್ಲಿ ಕಾನೂನು ಕುಣಿಕೆಯಿಂದ ಪಾರಾಗುವುದು. ಸುಪ್ರೀಂಕೋರ್ಟ್‌ಗೆ ಹೋದಾಗ ನಿವೇಶನ ವಾಪಸ್ ಕೊಟ್ಟಿದ್ದೇವೆ ಎಂದು ವಾದಿಸಲು ಸಾಧ್ಯವಾಲಿದೆ.
ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ತಡರಾತ್ರಿ ಸಭೆ
ಸೈಟ್ ವಾಪಸ್ ನೀಡುತ್ತಿರುವ ಬಗ್ಗೆ ಪತ್ರ ರಿವೀಲ್ ಆಗ್ತಿದ್ದಂತೆ, ಅತ್ತ ಸಿಎಂ ಸಿದ್ದರಾಮಯ್ಯ ತಡರಾತ್ರಿಯೇ ಮುಂದಿನ ಕಾನೂನು ಹೋರಾಟದ ಬಗ್ಗೆ ಕೆಲವರ ಬಳಿ ಸಹಾಯ ಪಡೆದಿದ್ದಾರೆ ಎನ್ನಲಾಗಿದೆ. ತಡರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಬೈರತಿ ಸುರೇಶ್, ಎ.ಎಸ್. ಪೊನ್ನಣ್ಣ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಸಿಎಂ ವಿರುದ್ಧ ಮುಗಿಬಿದ್ದ ವಿಪಕ್ಷ ನಾಯಕ ಅಶೋಕ್
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾ ಸೈಟು ಹಿಂಪಡೆಯುತ್ತೇನೆ ಎಂದಿರುವುದರಿಂದ ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಸೈಟ್ ವಾಪಸ್ ನೀಡುವ ಮೂಲಕ ಜನತಾ ನ್ಯಾಯಾಲಯದ ಮುಂದೆ ಸಿದ್ದರಾಮಯ್ಯ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?
ಮುಡಾ ಕೇಸ್ ಇನ್ನು ಜಾಸ್ತಿ ಆಗುತ್ತದೆ. ತಪ್ಪು ಮಾಡೇ ಇಲ್ಲ ಎಂದರೆ ವಾಪಸ್ ಯಾಕೆ ಕೊಟ್ರಿ. ಈಗ ವಾಪಸ್ ಕೊಟ್ಟ ಮೇಲೆ ಇಡೀ ಕರ್ನಾಟಕದ ಜನರಿಗೆ ಸಿಎಂ ತಪ್ಪು ಮಾಡಿದ್ದಾರೆ ಎಂದು ಅನಿಸುತ್ತದೆ. ಜನತಾ ನ್ಯಾಯಾಲಯದ ಮುಂದೆ ವಾಪಸ್ ಕೊಟ್ಟು ತಪ್ಪಾಗಿದೆ ಎಂದು ಒಪ್ಪಿಕೊಂಡಂತೆ ಆಯಿತು.
ಆರ್.ಅಶೋಕ್, ವಿಪಕ್ಷ ನಾಯಕ
ಸಿಎಂ ರಾಜೀನಾಮೆಗೆ ಆಗ್ರಹಿಸಿದ ವಿಜಯೇಂದ್ರ
ಇನ್ನು ಸಿಎಂ ಪತ್ನಿ ಪತ್ರದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ. ರಾಜೀನಾಮೆಯೊಂದೇ ನಿಮಗೆ ಉಳಿದಿರುವ ದಾರಿ ಎಂದು ಕುಟುಕಿದ್ದಾರೆ. ಮುಡಾ ಭೂ ಸುಳಿಯಲ್ಲಿ ಸಿಲುಕಿರುವ ಸಿಎಂ ವಿರುದ್ಧ ಕಾನೂನಿನ ಹಿಡಿತ ಬಿಗಿಯಾಗ್ತಿದ್ದಂತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಮುಂದಾಗಿದ್ದಾರೆ. ಇವತ್ತು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ