newsfirstkannada.com

ಬಂಡಾಯಕ್ಕೆ ಥಂಡಾ ಹೊಡೆದ ಬಿಜೆಪಿ; ರಾಜ್ಯ ನಾಯಕರಿಗೆ ಹೈಕಮಾಂಡ್​ ಕೊಟ್ಟ ಸೂಚನೆಯೇನು?

Share :

Published March 29, 2024 at 6:10am

    ರೆಬೆಲ್ಸ್​ ನಾಯಕರ ಮುನಿಸಿಗೆ ತಂಡಾ ಹೊಡೆದ ಬಿಜೆಪಿ

    ಬಿಜೆಪಿಗೆ ಅನಂತ್​ ಕುಮಾರ್ ಹೆಗಡೆ​ ಹೊಸ ತಲೆನೋವು

    ಹರತಾಳು ಹಾಲಪ್ಪಗೆ ಕರೆ ಮಾಡಿ ಹೈಕಮಾಂಡ್ ಸೂಚನೆ

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಅನ್ನೋ ಹಾಗೆ ರೆಬೆಲ್ಸ್​ ನಾಯಕರು ಬೀಸಿದ್ದ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕೇಸರಿ ಪಾಳಯ ಕಸರತ್ತು ಮಾಡ್ತಿದೆ. ಈ ಹೊತ್ತಲ್ಲೇ ಉತ್ತರ ಕನ್ನಡದ ಲೋಕ ಟಿಕೆಟ್​ ಮಿಸ್​ ಮಾಡಿಕೊಂಡಿರೋ ಅನಂತ್​ ಕುಮಾರ್ ಹೆಗಡೆ​ ಬಿಜೆಪಿಗೆ ಹೊಸ ತಲೆನೋವಾಗಿದ್ದಾರೆ. ಹೈಕಮಾಂಡ್​ ಸೂಚನೆ ಮೇರೆಗೆ ಮನವೊಲಿಕೆಗೆ ಮುಂದಾದ ನಾಯಕರ ಮೇಲೆ ಫುಲ್ ಗರಂ ಆಗಿದ್ದಾರೆ.

ಟಿಕೆಟ್ ಮಿಸ್ ಆದ ಬೆನ್ನಲ್ಲೇ ಅನಂತ್ ಕುಮಾರ್​ ಹೆಗಡೆ ಕೆಂಡ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್​ ಮಿಸ್​ ಆಗ್ತಿದ್ದಂತೆ ಅನಂತ್ ಕುಮಾರ್​ ಹೆಗಡೆ ನಿಗಿ ನಿಗಿ ಕೆಂಡವಾಗಿದ್ದಾರೆ.. ಟಿಕೆಟ್​ ಕೈಪ್ಪಿದ ವಿಚಾರ ತಿಳಿಯುತ್ತಿದ್ದಂತೆ ಹೆಗಡೆ ಸ್ವಪಕ್ಷದ ವಿರುದ್ಧವೇ ತಿರುಗಿ ಬೀಳೋ ಸಂದೇಶ ರವಾನಿಸಿದ್ದಾರೆ. ಅನಂತ್​ ಕುಮಾರ್​ ಹೆಗಡೆ ಮುನಿಸು ಕೇಸರಿ ಪಾಳಯಕ್ಕೆ ಮತ್ತೊಂದು ಮಗ್ಗುಲ ಮುಳ್ಳಾಗುವ ಪರಿಸ್ಥಿತಿ ಎದುರಾಗಿದೆ. ಹೆಗಡೆ ಮುನಿಸಿಗೆ ಮುಲಾಮು ಹಚ್ಚುವ ಕೆಲಸಕ್ಕೂ ಬಿಜೆಪಿ ಹೈಕಮಾಂಡ್​ ಕೈಹಾಕಿದೆ. ಉತ್ತರ ಕನ್ನಡ ಲೋಕಸಭೆ ಟಿಕೆಟ್​ ಮಿಸ್​ ಆಗಿದ್ದಕ್ಕೆ ಅನಂತ್​ಕುಮಾರ್ ಹೆಗಡೆ ರಾಂಗ್ ಆಗಿದ್ದಾರೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿತ್ತು.

ಇದನ್ನೂ ಓದಿ: ಕೆಜಿಗಟ್ಟಲೇ ಬಂಗಾರ, ಕೋಟಿ, ಕೋಟಿ ಸಾಲಗಾರ.. ಪ್ರಜ್ವಲ್ ರೇವಣ್ಣ ಆಸ್ತಿ ವಿವರ ಘೋಷಣೆ

‘ಅನಂತ’ ಕೋಪ!

ಅನಂತ್​ ಕುಮಾರ್ ಹೆಗಡೆ ಮನವೊಲಿಸಿ ಅಂತ ಹರತಾಳು ಹಾಲಪ್ಪಗೆ ಬಿಜೆಪಿ ಹೈಕಮಾಂಡ್ ಕರೆ ಮೂಲಕ ಸಂದೇಶ ರವಾನಿಸಿತ್ತು. ಹೈಕಮಾಂಡ್ ಸೂಚನೆಯಂತೆ ಹೆಗಡೆ ಮನೆಗೆ ಹಾಲಪ್ಪ ಭೇಟಿ ನೀಡಿದ್ರು. ಈ ವೇಳೆ ಹಾಲಪ್ಪ ಮೇಲೆ ಅನಂತ್ ಕುಮಾರ್ ಹೆಗಡೆ ಇರಿಸುಮುರಿಸುಗೊಂಡಿದ್ರು. ಬಂದಿದ್ದೇನು ಅಂತ ಹಾಲಪ್ಪಗೆ ಹೆಗಡೆ ಪ್ರಶ್ನೆ ಮಾಡಿದ್ರು. ನಿಮ್ಮನ್ನು ನೋಡಲು ಬಂದೆ ಎಂದು ಹೇಳಿದ್ದ ಹರತಾಳು ಹಾಲಪ್ಪಗೆ, ನೋಡಿದ್ದು ಆಯ್ತಲ್ಲ ಹೊರಡಿ ಎಂದು ಅನಂತ್‌ಕುಮಾರ್ ಗರಂ ಆಗಿಯೇ ಪ್ರತ್ಯುತ್ತರ ನೀಡಿದ್ರು. ಅಲ್ಲದೇ ಹೆಗಡೆ ಜೊತೆಗಿನ ಹರತಾಳು ಹಾಲಪ್ಪ ಫೋಟೋವನ್ನ ಹಾಲಪ್ಪ ಆಪ್ತ ಸಹಾಯಕ ಕ್ಲಿಕ್ಕಿಸಿದ್ರು. ಇದಕ್ಕೆ ಸಿಟ್ಟಿಗೆದ್ದ ಹೆಗಡೆ, ಹಾಲಪ್ಪ ಆಪ್ತ ಸಹಾಯಕನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡ ತಮ್ಮ ಆಪ್ತ ಸಹಾಯಕನಿಗೆ ಕೊಟ್ಟು, ಫೋಟೋ ಡಿಲೀಟ್ ಮಾಡುವಂತೆ ಸೂಚಿಸಿದ್ರು.

ವಿಶ್ವೇಶ್ವರ ಹೆಗಡೆ ಕಾಗೇರಿಯಿಂದಲೂ ಹೆಗಡೆ ಮನೆಗೆ ಭೇಟಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಒಲಿಸಿಕೊಂಡಿರೋ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಹೆಗಡೆ ಮನವೊಲಿಕೆಗೆ ಮುಂದಾಗಿದ್ರು. ಆದ್ರೆ ಕಾಗೇರಿ ಬಂದು ಅರ್ಧ ಗಂಟೆ ಬಾಗಿಲು ಕಾದ್ರೂ ಹೆಗಡೆ ಬಾಗಿಲು ತೆರೆಯದೇ ಹಾಗೆ ಇದ್ರು. ಹಲವು ಬಿಜೆಪಿ ನಾಯಕರು ಹೆಗಡೆ ಮನೆಗೆ ಭೇಟಿ ನೀಡಿ ಮುಚ್ಚಿದ ಕದದ ದರ್ಶನ ಪಡೆದು ವಾಪಸ್ಸಾದ್ರೂ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅಂತ ರಬೆಲ್ಸ್​ ನಾಯಕರ ಮುನಿಸಿಗೆ ಮುಲಾಮು ಹಚ್ಚುತ್ತಿದ್ದ ಬಿಜೆಪಿಗೆ ಹೆಗಡೆ ಮುನಿಸು ಸವಾಲಾಗಿದೆ. ಅನಂತ್​ ಕುಮಾರ್​ ಹೆಗಡೆ ಟಿಕೆಟ್​ ಕಿಚ್ಚು ಜ್ವಾಲೆಯಾಗಿ ಬದಲಗೋ ಭೀತಿ ಬಿಜೆಪಿಗೆ ಎದುರಾಗಿದೆ. ಈ ಮಧ್ಯೆ ಹಿಂದೂ ಫೈರ್ ಬ್ರ್ಯಾಂಡ್​ ನಾಯಕನ ಮುಂದಿನ ನಡೆ ಏನು ಅನ್ನೋದು ಸಹ ಕೂತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂಡಾಯಕ್ಕೆ ಥಂಡಾ ಹೊಡೆದ ಬಿಜೆಪಿ; ರಾಜ್ಯ ನಾಯಕರಿಗೆ ಹೈಕಮಾಂಡ್​ ಕೊಟ್ಟ ಸೂಚನೆಯೇನು?

https://newsfirstlive.com/wp-content/uploads/2023/11/R-Ashok-Bjp-2.jpg

Load More