newsfirstkannada.com

ಕೆಜಿಗಟ್ಟಲೇ ಬಂಗಾರ, ಕೋಟಿ, ಕೋಟಿ ಸಾಲಗಾರ.. ಪ್ರಜ್ವಲ್ ರೇವಣ್ಣ ಆಸ್ತಿ ವಿವರ ಘೋಷಣೆ

Share :

Published March 28, 2024 at 8:33pm

Update March 28, 2024 at 8:36pm

    ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

    ಹೊಳೆನರಸೀಪುರ, ಬೆಂಗಳೂರು, ನೆಲಮಂಗಲ, ಮೈಸೂರಲ್ಲಿ ಪ್ರಜ್ವಲ್‌ ಆಸ್ತಿ

    31 ಹಸು, 4 ಎತ್ತು, ಒಂದು ಟ್ರ್ಯಾಕ್ಟರ್, 1.90 ಲಕ್ಷ ಮೌಲ್ಯದ ವಜ್ರದ ಆಭರಣ

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವುದರ ಜೊತೆಗೆ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು 40 ಕೋಟಿ, 94 ಲಕ್ಷ ಮೌಲ್ಯದ ಚರ ಹಾಗೂ ಸ್ಥಿರ ಆಸ್ಥಿ ಹೊಂದಿದ್ದಾರೆ. 9.29 ಲಕ್ಷ ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ರೂಪಾಯಿ ಕ್ಯಾಶ್ ಹೊಂದಿರೋದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಕಳೆದ ಐದು ವರ್ಷದಲ್ಲಿ ಕೃಷಿಯಿಂದ ಪ್ರಜ್ವಲ್ ರೇವಣ್ಣ ಅವರು 2.75 ಕೋಟಿ ರೂಪಾಯಿ, ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಸಿದ್ದಾರೆ. 31 ಹಸು, 4 ಎತ್ತು, ಒಂದು ಟ್ರ್ಯಾಕ್ಟರ್ ಅನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ. ಹೆಚ್‌.ಡಿ ರೇವಣ್ಣ ಅವರ ಕಿರಿಯ ಪುತ್ರ ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ, ಬೆಂಗಳೂರು ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ.

ಇದನ್ನೂ ಓದಿ: ಅಣ್ಣ ಡಿ.ಕೆ ಶಿವಕುಮಾರ್‌ಗೆ ₹30 ಕೋಟಿ, ಮಗಳು ಐಶ್ವರ್ಯಾಗೂ ಸಾಲ ಕೊಟ್ಟ ಡಿ.ಕೆ ಸುರೇಶ್‌!

ಕೆಜಿಗಟ್ಟಲೇ ಬಂಗಾರ, ಕೋಟಿ, ಕೋಟಿ ಸಾಲ!
ಪ್ರಜ್ವಲ್ ರೇವಣ್ಣ ಅವರು ಕೆಜಿಗಟ್ಟಲೆ ಚಿನ್ನ, ಬೆಳ್ಳಿಯನ್ನು ಹೊಂದಿದ್ದಾರೆ. 67 ಲಕ್ಷ ಮೌಲ್ಯದ 1kg 100 ಗ್ರಾಂ ಚಿನ್ನ, 17.48 ಲಕ್ಷ ಮೌಲ್ಯದ 23 ಕೆಜಿ ಬೆಳ್ಳಿ ಹಾಗು 1.90 ಲಕ್ಷ ಮೌಲ್ಯದ ವಜ್ರದ ಆಭರಣ ಹೊಂದಿದ್ದಾರೆ.
ಒಟ್ಟು 4.48 ಕೋಟಿ ಸಾಲ ಹೊಂದಿದ್ದಾರೆ. ತಂದೆ ರೇವಣ್ಣರಿಂದ 86 ಲಕ್ಷ ರೂಪಾಯಿ, ಸಹೋದರ ಡಾ.ಸೂರಜ್‌ರಿಂದ 1 ಕೋಟಿ, ಅತ್ತೆ ಅನುಸೂಯರಿಂದ 22 ಲಕ್ಷ, ಅತ್ತೆ ಶೈಲಜಾರಿಂದ 10 ಲಕ್ಷ ಸಾಲ, ಅಜ್ಜಿ ಚನ್ನಮ್ಮರಿಂದಲೂ 23 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಜಿಗಟ್ಟಲೇ ಬಂಗಾರ, ಕೋಟಿ, ಕೋಟಿ ಸಾಲಗಾರ.. ಪ್ರಜ್ವಲ್ ರೇವಣ್ಣ ಆಸ್ತಿ ವಿವರ ಘೋಷಣೆ

https://newsfirstlive.com/wp-content/uploads/2024/03/Prajwal-Revanna-1.jpg

Load More