newsfirstkannada.com

ಈ ಕೇಸ್​ನಲ್ಲಿ HD ರೇವಣ್ಣಗೆ ಮತ್ತಷ್ಟು ಸಂಕಟ ಎದುರಾಗುವ ಸಾಧ್ಯತೆ

Share :

Published June 1, 2024 at 6:02am

    ಎಸ್​ಐಟಿ ಪರ ಎಸ್​​ಪಿಪಿ ರವಿವರ್ಮಕುಮಾರ್ ವಾದ ಮಂಡಿಸಿದ್ರು

    HD ರೇವಣ್ಣಗೆ ಪ್ರಕರಣದಲ್ಲಿ ಜಾಮೀನು ನೀಡಿರೋದು ಸರಿ ಅಲ್ವಾ?

    ಜಾಮೀನು ಪಡೆದು ನಿರಾಳರಾಗಿದ್ದ ಮಾಜಿ ಸಚಿವ ರೇವಣ್ಣಗೆ ಸಂಕಷ್ಟ

ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದೆ ಸರಿ. ಆದ್ರೆ ಜಾಮೀನು ರದ್ದು ಕೋರಿ ಎಸ್‌ಐಟಿ ಮೇಲ್ಮನವಿ ಸಲ್ಲಿಸಿದೆ. ಅರ್ಜಿಯನ್ನ ಹೈಕೋರ್ಟ್ ವಿಚಾರಣೆ ಮಾಡ್ತು. ಇದೇ ವೇಳೆ ಮಹಿಳೆಯ ಅಪಹರಣ ಕೇಸ್ ರದ್ದು ಕೋರಿ ಹೆಚ್​.ಡಿ.ರೇವಣ್ಣ ಕೂಡ ಸಲ್ಲಿಸಿದ್ದ ಅರ್ಜಿ ಸೇರಿ ಎರಡೂ ಅರ್ಜಿಗಳ ವಿಚಾರಣೆ ನಡೆಸ್ತಿರುವ ಹೈಕೋರ್ಟ್​​ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.

ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಕೇಸ್‌ನಲ್ಲಿ ಜಾಮೀನು ಪಡೆದು ನಿರಾಳರಾಗಿದ್ದ ಮಾಜಿ ಸಚಿವ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾಮೀನಿನ ಮೇಲೆ ಹೊರಗೆ ಬಂದರೂ ಕೂಡ ತೂಗುಗತ್ತಿ ತೂಗುತ್ತಲೇ ಇದೆ.

ಹೈಕೋರ್ಟ್​​ನಲ್ಲಿ ರೇವಣ್ಣ ಜಾಮೀನು ರದ್ದು ಅರ್ಜಿ ವಿಚಾರಣೆ

ತಮ್ಮ ಮನೆಯಲ್ಲಿ ಮನೆಗೆಲಸಕ್ಕಿದ್ದ ಸಂತ್ರಸ್ತ ಮಹಿಳೆಯ ಅಪಹರಣ ಕೇಸ್​​​ನಲ್ಲಿ ಹೆಚ್.ಡಿ.ರೇವಣ್ಣಗೆ ಮತ್ತಷ್ಟ ಸಂಕಟ ಎದುರಾಗುವ ಸಾಧ್ಯತೆ ಇದೆ. ಮೇ 13ರಂದು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಹೆಚ್​​ಡಿ. ರೇವಣ್ಣ ನಿರಾಳರಾಗಿದ್ದರು.. ಈ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್​​ಗೆ​ ಅರ್ಜಿ ಸಲ್ಲಿಸಿದ್ದು ರೇವಣ್ಣಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಲಾಗಿತ್ತು. ಮತ್ತೊಂದೆಡೆ ಇದೇ ಕೇಸ್ ರದ್ದು ಮಾಡುವಂತೆ ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್​.ದೀಕ್ಷಿತ್ ಪೀಠದಲ್ಲಿ ನಡೀತು. ಹೆಚ್​.ಡಿ.ರೇವಣ್ಣ ಪರ ಸಿನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್ ವಾದ ಮಂಡಿಸಿದ್ರು. ಎಸ್​ಐಟಿ ಪರವಾಗಿ ಎಸ್​​ಪಿಪಿ ರವಿವರ್ಮಕುಮಾರ್ ಪ್ರತಿವಾದ ಮಂಡಿಸಿದ್ರು. ರೇವಣ್ಣಗೆ ಈ ಪ್ರಕರಣದಲ್ಲಿ ಜಾಮೀನು ನೀಡಿರೋದು ಸರಿಯಲ್ಲ. ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ರು. ಎಸ್ಐಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಕೋರ್ಟ್​ನಲ್ಲಿ ನಡೆದ ವಾದ-ಪ್ರತಿವಾದ

ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್: ಪ್ರಕರಣದಲ್ಲಿ ಸೆಕ್ಷನ್ 364A ಹೇಗೆ ಹಾಕಿದ್ರು? ಇದು ಅನ್ಯಾಯ, ಸೆಕ್ಷನ್ 362ರ ಅಡಿಯಲ್ಲಿ ಕಿಡ್ನಾಪ್ ಪ್ರಕರಣಕ್ಕೆ ಬೇರೆ ವ್ಯಾಖ್ಯಾನ ಇದೆ, ಬಲವಂತವಾಗಿ ಅಥವಾ ವಂಚಿಸಿ ಕರೆದೊಯ್ದಿದ್ದರೆ ಅದು ಅಪಹರಣ.

ನ್ಯಾ.ಕೃಷ್ಣ ಎಸ್​.ದೀಕ್ಷಿತ್: ಇದನ್ನ ನಾವು ಪ್ರಾಸಿಕ್ಯೂಷನ್‌ ಕೇಳೋಣ

ಎಸ್​ಪಿಪಿ ರವಿವರ್ಮಕುಮಾರ್: ಕೇಸ್​ನಲ್ಲಿ ರೇವಣ್ಣ ವಿರುದ್ಧ ಹಾಕಿರುವ ಸೆಕ್ಷನ್ ಸರಿಯಿದ್ದರೂ ಜಾಮೀನು ಮಂಜೂರಾಗಿದೆ. ಸೆಕ್ಷನ್‌ 364A ಹಾಕಿದ್ದು ಇದು ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ನೀಡುವ ಸೆಕ್ಷನ್ ಆಗಿದೆ. ಹೀಗಿದ್ದಾಗ ಆರೋಪಿಗೆ ಜಾಮೀನು ನೀಡಿರೋದು ಸರಿಯಲ್ಲ.

ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್: ಇಲ್ಲಿ ಅಪಹರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಹಿಳೆ 10 ವರ್ಷದಿಂದ ಮನೆಗೆಲಸ ಮಾಡ್ತಿದ್ದರಿಂದ ಅವರಿಗೆ ಪರಿಚಯ ಇತ್ತು. ರೇವಣ್ಣ ಸಾಹೇಬ್ರು ಕರೆದ್ರು ಅಂತಾ ಸತೀಶ್ ಬಾಬಣ್ಣ ಕರೆದೊಯ್ದಿದ್ದಾರೆ, ಗೊತ್ತಿರುವ ವ್ಯಕ್ತಿ ಆಗಿರುವಾಗ ಅಪಹರಣ ಎನ್ನಲು ಆಗಲ್ಲ.

ನ್ಯಾ.ಕೃಷ್ಣ ಎಸ್​.ದೀಕ್ಷಿತ್: ದಾವೂದ್‌ ಇಬ್ರಾಹಿಂ ಕರೆದಿದ್ದಾನೆ ಬಾ ಎಂದು ಕರೆದರೆ, ಅದೇ ರೀತಿ ಆಕೆ ಬರೆದಿದ್ದರೆ ಪರಿಸ್ಥಿತಿ ಏನಾಗುತ್ತದೆ. ಇದನ್ನ ಸಹ ನ್ಯಾಯಾಲಯದ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ, ಇದನ್ನು ನೋಟಿಸ್ ಮಾಡೋಣ.

ಎಸ್​ಪಿಪಿ ರವಿವರ್ಮಕುಮಾರ್: ದಿನಾಂಕ ಸಹಿತ ಕೇಸ್​ನ ಬೆಳವಣಿಗೆಗಳನ್ನು ನೀಡುತ್ತೇನೆ. ತನಿಖೆಯ ಅಂಶಗಳನ್ನು ಸಲ್ಲಿಸಲಾಗುವುದು, ಪ್ರಕರಣದ ಕ್ರೋನಾಲಜಿಯನ್ನ ನೀಡುತ್ತೇವೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್​ ಮಾಡುವಾಗ ಸಾವು

ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್ : ಇಲ್ಲಿ ಯಾವುದೇ ಚಾನೆಲ್ ಹಾಕಿದ್ರೂ ಇದೇ ಇದೆ, ಬೇರೆ ವಿಚಾರವೇ ಇಲ್ಲ ಸ್ವಾಮಿ.

ನ್ಯಾ.ಕೃಷ್ಣ ಎಸ್​.ದೀಕ್ಷಿತ್: ಹಾಗಿದ್ರೆ, ಸರಿ ಸೋಮವಾರ ಇತ್ಯರ್ಥಪಡಿಸೋಣ.

ಎಸ್​ಪಿಪಿ ರವಿವರ್ಮಕುಮಾರ್: ಜಾಮೀನು ವಿರೋಧಿಸಿರುವ ಅರ್ಜಿ ಹಾಗೂ ಮತ್ತು ಅಪಹರಣ ರದ್ದು ಕೋರಿರುವ ಅರ್ಜಿ ಎರಡನ್ನೂ ಒಟ್ಟಿಗೆ ವಿಚಾರಣೆ ನಡೆಸಬೇಕು. ನ್ಯಾಯಾಲಯದ ಸಮಯ ಉಳಿಸುವುದಕ್ಕಾಗಿ ಹಾಗೆ ಮಾಡುವುದು ಒಳಿತು, ಎರಡೂ ಪ್ರಕರಣವನ್ನು ಒಟ್ಟಿಗೆ ತೆಗೆದುಕೊಳ್ಳಲು ನಮ್ಮ ತಕರಾರು ಇಲ್ಲ.

ನ್ಯಾ.ಕೃಷ್ಣ ಎಸ್​.ದೀಕ್ಷಿತ್: ಇಡೀ ಕುಟುಂಬ ಪ್ರಾಸಿಕ್ಯೂಷನ್‌ ಕಸ್ಟಡಿಯಲ್ಲಿಯೇ ಇದೆ, ಅಪ್ಪ-ಅಮ್ಮ, ಮಗ ಎಲ್ಲರೂ ಅಲ್ಲೇ ಇದ್ದಾರೆ

ಹೈಕೋರ್ಟ್​ ಜೂನ್ 3ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ್ದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಸಂಕಷ್ಟ ತರುತ್ತಾ, ಅಥವಾ ರಿಲೀಫ್ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಕೇಸ್​ನಲ್ಲಿ HD ರೇವಣ್ಣಗೆ ಮತ್ತಷ್ಟು ಸಂಕಟ ಎದುರಾಗುವ ಸಾಧ್ಯತೆ

https://newsfirstlive.com/wp-content/uploads/2024/05/REVANNA.jpg

Load More