/newsfirstlive-kannada/media/post_attachments/wp-content/uploads/2024/10/DARSHAN_BAIL.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಸದ್ಯ ಈ ಸಂಬಂಧ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರಿಗೆ ಬೆನ್ನು ನೋವು ಇದ್ದ ಕಾರಣ ಅವರಿಗೆ ಜಾಮೀನು ನೀಡಬೇಕೆಂದು ನಟನ ಪರ ವಕೀಲ ಸಿವಿ ನಾಗೇಶ್ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಹೈಕೋರ್ಟ್​​ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ ಇದೀಗ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಜಾಮೀನು ಕೇವಲ 6 ವಾರಗಳು ಮಾತ್ರ ಇದ್ದು ಇದಕ್ಕೆ ಷರತ್ತುಗಳನ್ನು ವಿಧಿಸಲಾಗಿದೆ.
/newsfirstlive-kannada/media/post_attachments/wp-content/uploads/2024/10/DARSHAN_BAIL_1.jpg)
ಈ ಹಿಂದೆ 57 ಸಿಸಿಎಚ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಬಗ್ಗೆ ಅರ್ಜಿ ವಿಚಾರಣೆ ಮಾಡಿದ್ದ ಕೋರ್ಟ್​ ಅರ್ಜಿ ವಜಾಗೊಳಿಸಿ ಜಾಮೀನು ನೀಡಿರಲಿಲ್ಲ. ಆದರೆ ಇದೀಗ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಸದ್ಯ ದರ್ಶನ್ ಅವರಿಗೆ ಬೇಲ್ ಸಿಗುತ್ತಿದ್ದಂತೆ ಅವರ ಅಭಿಮಾನಿಗಳಿಗೆ ದೀಪಾವಳಿಯ ದೊಡ್ಡ ಉಡುಗೊರೆ ಸಿಕ್ಕಂತೆ ಆಗಿದ್ದು ಫುಲ್ ಖುಷ್ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲರಾದ ಸಿ.ವಿ ನಾಗೇಶ್ ಅವರು ದರ್ಶನ್ ಪರ ಪ್ರಬಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ದರು. ಈ ಎರಡು ಕಡೆಯ ವಾದ ಆಲಿಸಿದ್ದ ಕೋರ್ಟ್​ ಆದೇಶ ಇಂದಿಗೆ ಕಾಯ್ದಿರಿಸಿತ್ತು. ಅದರಂತೆ ಇಂದು ಜಾಮೀನು ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us