newsfirstkannada.com

ಹೈಕೋರ್ಟ್‌ನಲ್ಲಿ ನಿತ್ಯಾನಂದನ ಕೈಲಾಸದ ಬಗ್ಗೆ ಪ್ರಸ್ತಾಪ.. ಕಿಂಗ್ ಆಫ್ ಕಿಂಗ್ ಎಂದು ಕಿಚಾಯಿಸಿದ ಜಡ್ಜ್‌

Share :

Published February 19, 2024 at 6:25pm

Update February 19, 2024 at 6:29pm

    ಕೈಲಾಸ ದೇಶದಲ್ಲಿ ನಿತ್ಯಾನಂದ ಕಿಂಗ್‌ ಆಫ್‌ ಕಿಂಗ್ ಎಂದ ಹೈಕೋರ್ಟ್ ಜಡ್ಜ್

    ಜಾರ್ಖಂಡ್‌ ರಾಂಚಿಯ ದಯಾಶಂಕರ್‌ ಪಾಲ್‌ ಎಂಬುವರಿಂದ ದೂರು ದಾಖಲು

    ಮಾರ್ಚ್‌ 4ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದ ಹೈಕೋರ್ಟ್ ಪೀಠ

ಬೆಂಗಳೂರು: ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗೋ ಬಿಡದಿಯ ನಿತ್ಯಾನಂದ ಸ್ವಾಮೀಜಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಜಾರ್ಖಂಡ್‌ ರಾಜ್ಯದ ರಾಂಚಿಯ ದಯಾಶಂಕರ್‌ ಪಾಲ್‌ ಎಂಬುವವರು ನಿತ್ಯಾನಂದ ಸ್ವಾಮಿ ವಿರುದ್ಧ ದೂರು ನೀಡಿದ್ದಾರೆ. ದಯಾಶಂಕರ್‌ ಪಾಲ್‌ ಅವರ ಪುತ್ರ ಕೃಷ್ಣಕುಮಾರ್‌ ಪಾಲ್‌ ಕಾಣೆಯಾಗಿದ್ದಾರೆ. ಹೀಗಾಗಿ ನಿತ್ಯಾನಂದ ಸ್ವಾಮಿ ವಿರುದ್ಧ ದೂರು ದಾಖಲಿಸಲಾಗಿದೆ.

ಇದನ್ನು ಓದಿ: ಮತ್ತೆ ಮುನ್ನೆಲೆಗೆ ಬಂದ ನಿತ್ಯಾನಂದ ಪ್ರಕರಣ, ಸ್ಪಷ್ಟನೆ ಕೇಳಿದ ಇಂಟರ್ ಪೊಲ್; ಅರೆಸ್ಟ್​ ಆಗ್ತಾರಾ ಕೈಲಾಸ ಅಧಿಪತಿ?

ಈ ಕೇಸ್​ಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಕೆ. ಸೋಮಶೇಖರ್‌ ಹಾಗೂ ನ್ಯಾಯಮೂರ್ತಿ ಉಮೇಶ್‌ ಎಂ. ಅಡಿಗರ ಪೀಠದಲ್ಲಿ ವಿಚಾರಣೆ ನಡೆದಿದ್ದು, ಈ ವೇಳೆ ಮಾತಾಡಿದ ಎಸ್ಪಿ ಬಿ.ಎ ಬೆಳ್ಳಿಯಪ್ಪ, ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಕೃಷ್ಣ ಕುಮಾರ್‌ ಇರುವ ಬಗ್ಗೆ ತನಿಖೆ ಆಗಿದೆ. ಆದರೆ ಅವರು ಅಲ್ಲಿ ಪತ್ತೆಯಾಗಿಲ್ಲ. ಅಲ್ಲದೇ ನಿತ್ಯಾನಂದ ಧ್ಯಾನ ಪೀಠದಿಂದ ಇ-ಮೇಲ್ ಬಂದಿದೆ. ನಿತ್ಯಾನಂದ ಅವರು ಈಗಾಗಲೇ ಪ್ರಪಂಚ ತ್ಯಜಿಸಿದ್ದಾರೆ ಎನ್ನಲಾಗಿದೆ. ಮಠದವರಿಗೂ ನಿತ್ಯಾನಂದ ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ ಎಂಬ ಹೇಳಿಕೆ ಆಲಿಸಿದ ಪೀಠ ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ನಡುವೆ ಅರ್ಜಿದಾರರ ಪರ ವಕೀಲ ರಾಜಕುಮಾರ್‌ ಅವರು ನಿತ್ಯಾನಂದ ಕೈಲಾಸದಲ್ಲಿದ್ದಾರೆ ಎಂದು ಹೇಳುತ್ತಾರೆ. ಆಗ ಹೈಕೋರ್ಟ್ ಪೀಠ​ ನಿತ್ಯಾನಂದ ಎಲ್ಲಿದ್ದಾರೆ ಎಂಬ ಮಾಹಿತಿ ಕೊಟ್ಟರೆ ನಾನು ಅಲ್ಲಿಗೆ ಪ್ರೊಸೆಸ್‌ ಕೊಡುತ್ತೇನೆ. ಕೈಲಾಸದಲ್ಲಿ ನಿತ್ಯಾನಂದ ಮಹಾಸ್ವಾಮಿ ಇದ್ದಾನೆ ಎಂದು ನೀವು ಹೇಳಿದ ಮೇಲೆ ಅದರ ಮಾಹಿತಿ ಕೊಡಿ. ನ್ಯಾಯಾಲಯಕ್ಕೆ ಸಹಾಯ ಮಾಡುವುದು ಎಂದರೆ ನಿತ್ಯಾನಂದನ ಬಗ್ಗೆ ಮಾಹಿತಿ ನೀಡುವುದಾಗಿದೆ. ನೀವು ಅದರ ಮಾಹಿತಿ ನೀಡಿದರೆ ರಾಯಭಾರಿ ಮೂಲಕ ನಾನು ಪ್ರೊಸೆಸ್‌ ಕೊಡುತ್ತೇನೆ. ಇಲ್ಲವಾದರೆ ಕಮಿಷನರೇಟ್‌ ಮೂಲಕ ಅಥವಾ ರಾಯಭಾರಿಗಳ ಮೂಲಕ ಪ್ರೊಸೆಸ್‌ ಮಾಡುತ್ತೇನೆ. ನೀವು ಮಾಹಿತಿ ನೀಡಿದರೆ ನಾನು ರಾಯಭಾರಿ ಮೂಲಕ ಹೋಗುವೆ. ಎಕ್ಸಿಕ್ಯೂಟ್‌ ಮಾಡಲು ನಿಮ್ಮನ್ನೇ ಕಳುಹಿಸುವೆ. ನೀವು ಕೈಲಾಸ ದೇಶದಲ್ಲೂ ಎಂಜಾಯ್‌ ಮಾಡಬೇಕು ಎಂದು ಪೀಠ ಹೇಳಿದೆ. ಇದೇ ವೇಳೆ ಜಡ್ಜ್ ನಿತ್ಯಾನಂದ ಕೈಲಾಸ ದೇಶದಲ್ಲಿ ಕಿಂಗ್‌ ಆಫ್‌ ಕಿಂಗ್ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಬಳಿಕ ಹೈಕೋರ್ಟ್ ಪೀಠ​ ಈ ಕೇಸ್‌ ವಿಚಾರಣೆ​ಯನ್ನು ಮಾರ್ಚ್‌ 4ಕ್ಕೆ ಅರ್ಜಿ ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಕೋರ್ಟ್‌ನಲ್ಲಿ ನಿತ್ಯಾನಂದನ ಕೈಲಾಸದ ಬಗ್ಗೆ ಪ್ರಸ್ತಾಪ.. ಕಿಂಗ್ ಆಫ್ ಕಿಂಗ್ ಎಂದು ಕಿಚಾಯಿಸಿದ ಜಡ್ಜ್‌

https://newsfirstlive.com/wp-content/uploads/2024/02/nithyananda-1.jpg

Load More