/newsfirstlive-kannada/media/post_attachments/wp-content/uploads/2024/08/BALAKRISHNAN-AND-SIDDAKI.jpg)
ತಿರುವಂತನಪುರಂ: ಕೆಲವು ದಿನಗಳ ಹಿಂದಷ್ಟೇ ಸರ್ಕಾರಕ್ಕೆ ಸಲ್ಲಿಕೆಯಾದ ಜಸ್ಟಿಸ್ ಹೇಮಾ ಕಮಿಟಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಹಾಗೂ ದೇಶದ ತುಂಬಾ ದೊಡ್ಡ ಚರ್ಚೆಗೆ ಗುರಿಯಾಗಿದೆ. ಮಾಲಿವುಡ್ ಅಂಗಳದಲ್ಲಿ ದೊಡ್ಡ ದೊಡ್ಡ ನಟ, ನಿರ್ದೇಶಕರಿಂದಲೇ ಉದಯೋನ್ಮುಖ ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ನಟಿಯರಿಗೆ ಲೈಂಗಿಕ ಕಿರುಕುಳಗಳು ನಡೆಯುತ್ತಿವೆ ಅನ್ನೋ ಸಂಶಯದ ಜಾಡು ಹಿಡಿದು ಹೊರಟಿದ್ದ ಕೇರಳ ಸರ್ಕಾರ, ಜಸ್ಟಿಸ್ ಹೇಮಾ ಅವರ ನೇತೃತ್ವದಲ್ಲಿ ಒಂದು ಕಮಿಟಿ ರಚನೆ ಮಾಡಿ ವರದಿ ಸಲ್ಲಿಸುವಂತೆ ಹೇಳಿತ್ತು. ಅದರನ್ವಯ ಜಸ್ಟಿಸ್ ಹೇಮಾ ಹಾಗೂ ತಂಡ ವಿವರವಾದ ಮಾಹಿತಿ ಕಲೆ ಹಾಕಿ, ಕೇಳಿ ಬಂದಿರುವ ಆರೋಪ ನೂರಕ್ಕೆ ನೂರು ಸತ್ಯ ಎಂಬ ಅಂಶವನ್ನೊಳಗೊಂಡ 290 ಪುಟಗಳ ವರದಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್​ ಗೆ ಸಲ್ಲಿಕೆ ಮಾಡಿತ್ತು.
/newsfirstlive-kannada/media/post_attachments/wp-content/uploads/2024/08/hema-commission-report-300x169.jpeg)
ನಿರ್ದೇಶಕ ರಂಜಿತ್, ನಟ ಸಿದ್ಧಿಕಿ ರಾಜೀನಾಮೆ
ಈ ಬೆಳವಣಿಗೆ ನಡೆದು ಹೆಚ್ಚು ಕಡಿಮೆ ನಾಲ್ಕೈದು ದಿನಗಳೇ ಕಳೆದಿವೆ. ಸದ್ಯ ಹೇಮಾ ಕಮಿಟಿ ಸಲ್ಲಿಸಿದ ವರದಿ ಈಗ ಮಾಲಿವುಡ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮಲಯಾಳಂ ಚಲನಚಿತ್ರ ಅಕಾಡೆಮಿಯಲ್ಲಿ ಇಬ್ಬರು ರಾಜೀನಾಮೆ ನೀಡುವ ಮೂಲಕ ಮಲೆಯಾಳಂ ಚಿತ್ರರಂಗದಲ್ಲಿ ದೊಡ್ಡ ಸಂಚಲನವೊಂದು ಸೃಷ್ಟಿಯಾಗಿದೆ. ನಿರ್ದೇಶಕ ರಂಜೀತ್ ಬಾಲಕೃಷ್ಣ ಹಾಗೂ ಚಿತ್ರನಟ ಸಿದ್ಧಿಕಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಆಚೆ ಬಂದಿದ್ದಾರೆ.
ರಂಜಿತ್ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನದಲ್ಲಿರದ್ದವರು. ಅವರ ಮೇಲೆ ಬಂಗಾಳಿ ನಟಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ , ಹೀಗಾಗಿ ರಂಜಿತ್ ಬಾಲಕೃಷ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಕಾಡೆಮಿಯಿಂದ ನಿರ್ಗಮಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಒಂದು ಸಿನಿಮಾ ಶೂಟಿಂಗ್ ವೇಳೆ ರಂಜಿತ್ ಬಾಲಕೃಷ್ಣನ್ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿಯೊಬ್ಬರು ಹೇಳಿಕೆ ನೀಡಿದ ಆರೋಪ ಅವರ ಮೇಲೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಬಾಲಕೃಷ್ಣ, ಕೆಲವು ನಿರ್ದಿಷ್ಟ ಗುಂಪಿನಿಂದ ನಾನು ಗುರಿಯಾಗುತ್ತಿದ್ದೇನೆ. ಯಾವಾಗ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾಗಿದ್ದೇನೋ ಅಂದಿನಿಂದಲೂ ನನ್ನನ್ನು ಗುರಿ ಮಾಡಿ ಹುನ್ನಾರ ಮಾಡುತ್ತಿದೆ ಒಂದು ಪಡೆ. ಈ ಎಲ್ಲಾ ಆರೋಪಗಳಿಗೂ ನಾನು ಕಾನೂನು ಹೋರಾಟದ ಮೂಲಕ ಉತ್ತರಿಸುತ್ತೇನೆ ಎಂದು ರಂಜಿತ್ ಹೇಳಿದ್ದಾರೆ.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಟ ಸಿದ್ಧಕಿ, ತಮ್ಮ ಮೇಲೆಯೂ ಲೈಂಗಿಕ ಕಿರುಕುಳ ಆರೋಪ ಬಂದಿದ್ದಕ್ಕೆ ಈ ಸ್ಥಾನದಿಂದ ಕೆಳಗಿಳಿದ್ದಾರೆ. ಸಿದ್ಧಕಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿಯೊಬ್ಬರು. ನಾನು 21 ವರ್ಷದವಳಿದ್ದಾಗ ಸ್ಕ್ರಿಪ್ಟ್​ ಡಿಸ್ಕಷನ್ ವೇಳೆ ಸಿದ್ಧಕಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಸಿದ್ಧಕಿ ರಾಜೀನಾಮೆ ನೀಡಿದ್ದಾರೆ. ಸದ್ಯ ಜಸ್ಟಿಸ್ ಹೇಮಾ ಕಮಿಟಿಯ ವರದಿ ಎರಡು ದೊಡ್ಡ ಕುಳಗಳ ರಾಜೀನಾಮೆಗೆ ಕಾರಣವಾಗಿದೆ. 290 ಪುಟಗಳ ಆ ವರದಿಯಲ್ಲಿ ಇನ್ನೂ ಏನೇನೂ ಅಡಗಿದೆಯೋ ಅನ್ನೋದು ಸದ್ಯದ ಎಲ್ಲರ ಕುತೂಹಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us