ನಾರಿಯ ಸೀರೆ ಇತಿಹಾಸ.. ಮೊದಲು ಧರಿಸಿದ್ಯಾರು? ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು ಹೇಗೆ?

author-image
AS Harshith
Updated On
ಹೆಣ್ಣುಮಕ್ಕಳ ವೋಟ್​ಗಾಗಿ ರಾಜಕೀಯ ಪಕ್ಷಗಳ ಸರ್ಕಸ್​; ಕಲರ್​ ಕಲರ್​ ಸೀರೆಗಳಿಗೆ ಸಖತ್​ ಡಿಮ್ಯಾಂಡ್​!
Advertisment
  • ಭಾರತದ ಸೀರೆಯ ಪರಂಪರೆ ಬಗ್ಗೆ ನಿಮಗೆಷ್ಟು ಗೊತ್ತು?
  • ಸೀರೆ ಯಾವ ಕಾಲಘಟ್ಟದಿಂದ ಇತ್ತು ಎಂಬುದು ಗೊತ್ತಿದ್ಯಾ?
  • ಸೀರೆ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು ಹೇಗೆ?

ಏನೇ ಹೇಳಿ ಸೀರೆ ಉಟ್ಟ ನಾರಿಯರನ್ನು ಕಂಡರೆ ಯುವಕರ ಕಣ್ಣು ಅತ್ತ ಸರಿಯುವುದಂತೂ ಸತ್ಯ. ಅಂತಹದೊಂದು ಶಕ್ತಿ ಸೀರೆಗಿದೆ ಮತ್ತು ಸೀರೆ ಉಟ್ಟ ನಾರಿಗಿದೆ. ಅಷ್ಟೇ ಏಕೆ ಸೀರೆಗಾಗಿ ಸಿನಿಮಾ ಹಾಡುಗಳು ಇವೆ. ಅದರಲ್ಲಿ ‘ಸೀರೆಲಿ ಹುಡುಗಿಯ ನೋಡಲೆ ಬಾರದು’ ಎಂಬ ಹಾಡು ಯುವಕರ ಮನಗೆದ್ದಿರೋದು ಸುಳ್ಳಲ್ಲ. ಇಷ್ಟೆಲ್ಲಾ ಹೊಗಳಿಸಿಕೊಳ್ಳುವ ಭಾರತದ ಸೀರೆಯ ಪರಂಪರೆ, ಇತಿಹಾಸದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅದರಲ್ಲೂ ಸೀರೆ ಯಾವ ಕಾಲಘಟ್ಟದಿಂದ ಇತ್ತು ಎಂಬ ಪ್ರಶ್ನೆಗೆ ಅನೇಕರಲ್ಲಿ ಉತ್ತರವಿಲ್ಲ. ಆದರೆ ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಧೋತಿ ಸೀರೆಯಾದಾಗ!

ಸೀರೆ ಎಂಬ ಮೂಲ ಪದ ಸಂಸ್ಕೃತದಿಂದ ಬಂದಿದೆ. ಸಂಸ್ಕೃತದ ಸತ್ತಕ ಎಂಬ ಪದ ಸೀರೆಯಾಗಿದೆ. ಹಿಂದಿನ ಕಾಲಘಟ್ಟದಲ್ಲಿ ಪುರುಷರು ಮತ್ತು ಮಹಿಳೆಯರು ದೇಹದ ಕೆಳಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಿದ್ದರು. ಅದನ್ನು ಧೋತಿ ಎಂದು ಕರೆಯಲಾಗುತ್ತಿತ್ತು. ಆ ಧೋತಿ ಬರುಬರುತ್ತಾ ಸೀರೆಯ ರೂಪ ಪಡೆಯುತ್ತದೆ. ಕೊನೆಗೆ 6 ಮೀಟರ್​ ಬಟ್ಟೆ ಸೀರೆಯ ರೂಪವಾಗಿ ಮಾರ್ಪಡುತ್ತದೆ.

publive-image

ವೇದಗಳಲ್ಲಿ ಸೀರೆಯ ಉಲ್ಲೇಖ

ವೇದಗಳಲ್ಲಿ ಸೀರೆಯ ಬಗ್ಗೆ ಉಲ್ಲೇಖವಿದೆ. ಯಜುರ್ವೇದದಲ್ಲಿ ಸೀರೆಯ ಬಗ್ಗೆ ಉಲ್ಲೇಖಿಸಲಾಗಿದೆ. ಯಾಗದ ಸಮಯದಲ್ಲಿ ಸೀರೆಯನ್ನು ಧರಿಸುವ ಪದ್ಧತಿ ಇತ್ತು. ಇದನ್ನು ಋಗ್ವೇದದದಲ್ಲೂ ಉಲ್ಲೇಖಿಸಲಾಗಿದೆ. ಹೀಗೆ ಬರು ಬರುತ್ತಾ ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕವಾಯಿತು.

publive-image

ಹರಪ್ಪ ಕಾಲದಲ್ಲೂ ಇತ್ತು ಸೀರೆ

ಹರಪ್ಪ ಪ್ರಾಚೀನ ನಾಗರೀಕತೆಗಳಲ್ಲಿ ಒಂದು. ಆ ಕಾಲಘಟ್ಟದ ಬಗ್ಗೆ ಸಂಶೋಧನೆ ನಡೆಸಿದಾಗ ವಿಗ್ರಹಗಳ ಮೆಲೆ ಸೀರೆ ಧರಿಸಿರುವಂತಹ ವಿನ್ಯಾಸಗಳು ತಜ್ಞರಿಗೆ ಸಿಕ್ಕಿದೆ. ಹಾಗಾಗಿ ಹಳೆಯ ಇತಿಹಾಸವನ್ನು ಸೀರೆ ಹೊಂದಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಮಹಾಭಾರತದಲ್ಲಿ ದ್ರೌಪದಿ ಧರಿಸಿದ್ದಳು ಸೀರೆ

ದುರ್ಯೋಧನನು ದ್ರೌಪದಿಯ ಸೀರೆಯನ್ನು ಎಳೆದ ಪ್ರಸಂಗ ಎಲ್ಲರಿಗು ಗೊತ್ತೇ ಇದೆ. ಹಾಗಾಗಿ ಸೀರೆಗೆ ಗತಕಾಲದ ಇತಿಹಾಸವಿದೆ.

publive-image

ಬ್ರಿಟಿಷ್​ ಕಾಲದಲ್ಲಿ ಸೀರೆ ಫೇಮಸ್ಸು

ಬ್ರಿಟಿಷ್​ ಕಾಲದಲ್ಲೂ ಸೀರೆ ಉಡುವ ಟ್ರೆಂಡ್​ ಇತ್ತು. ಹಳೆಯ ಕಾಲದ ಫೋಟೋವನ್ನು ಗಮನಿಸಿದಾಗ ಸೀರೆಯುಟ್ಟ ನಾರಿಯರು ಆಗಿನ ಕಾಲದಲ್ಲಿ ಇದ್ದರು ಎಂಬುದನ್ನು ತಿಳಿಸುತ್ತದೆ. ಆದರೆ ರವಿಕೆ ತೊಡುವ ಪ್ರಸಂಗ ಆಗಿನ ಕಾಲದಲ್ಲಿ ಇರಲಿಲ್ಲ. ಆದರೆ ಬರುಬರುತ್ತಾ ರವಿಕೆ ತೊಡಲು ಪ್ರಾರಂಭವಾಯಿತು.

publive-image

ಇದನ್ನೂ ಓದಿ: ವಾರೆವ್ಹಾ! ಒಂದು ಲೀಟರ್​ಗೆ 73 ಕಿಮೀ ಮೈಲೇಜ್​! ಸಖತ್ತಾಗಿದೆ ಹೀರೋ​ ಹೊಸ Splendor+XTEC ಬೈಕ್​

ಸದ್ಯ ಪ್ರಸ್ತುತ ಕಾಲಘಟ್ಟದಲ್ಲಿ ಸೀರೆ ಬೆಲೆ ಕೇಳಿದರೆ ಮಾರುದ್ದ ಓಡಿ ಹೋಗುವವರೇ ಜಾಸ್ತಿ. ಕಾರಣ ಮಾರುಕಟ್ಟೆಯಲ್ಲಿ ನಾನಾ ತರಹದ ದುಬಾರಿ ಬೆಲೆಯ ಸೀರೆಗಳಿವೆ. ಲಕ್ಷಾಂತರ ರೂಪಾಯಿ ಬೆಲೆಯ ಸೀರೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment