newsfirstkannada.com

ಬೆಂಗಳೂರಲ್ಲಿ ಮತ್ತೊಂದು ಹಿಟ್ ಅಂಡ್ ರನ್‌.. ಬಸ್​ ನಿಲ್ದಾಣಕ್ಕೆ ಹೋಗುತ್ತಿದ್ದ ಮಹಿಳೆಗೆ ಗುದ್ದಿ ಪರಾರಿ

Share :

Published February 10, 2024 at 2:34pm

Update February 10, 2024 at 2:27pm

  ರಸ್ತೆ ದಾಟುವಾಗ ಹಿಂಬದಿಯಿಂದ ವಾಹನ ಡಿಕ್ಕಿಯಾಗಿ ಅಪಘಾತ

  ಬೆಳಗ್ಗೆ ಮನೆಯಿಂದ ಬಸ್​ ನಿಲ್ದಾಣಕ್ಕೆ ಹೋಗುವಾಗ ಆಕ್ಸಿಡೆಂಟ್

  ಮೆಟ್ರೋ ನಿಲ್ದಾಣದ ಬಳಿ ಅಪರಿಚಿತ ವಾಹನ ಡಿಕ್ಕಿ ವೃದ್ಧೆ ಸಾವು

ಬೆಂಗಳೂರು: ಹಿಟ್ ಅಂಡ್​​ ರನ್​ಗೆ ಪಾದಚಾರಿ ವೃದ್ಧೆ ಬಲಿಯಾಗಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಮಹಾಲಕ್ಷ್ಮಿ ಲೇಔಟ್ ನಿವಾಸಿ ಆಶಾರಾಣಿ (60) ಮೃತ ದುರ್ದೈವಿ. ಇಂದು ಬೆಳಗಿನ ಜಾವ 5:40ರ ಸುಮಾರಿಗೆ ಶ್ರೀರಂಗಪಟ್ಟಣಕ್ಕೆ ಹೋಗಲೆಂದು ವೃದ್ಧೆ ಮನೆಯಿಂದ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣ ಬಳಿ ರಸ್ತೆ ದಾಟುವಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಹಾಗೇ ಹೋಗಿದೆ.

ಇದನ್ನೂ ಓದಿ: VIDEO: 2 ಲಾರಿ 1 ಬಸ್​ ನಡುವೆ ಭಯಾನಕ ಅಪಘಾತ.. 7 ಮಂದಿ ಸಾವು, 15 ಜನರ ಸ್ಥಿತಿ ಗಂಭೀರ

ವಾಹನ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ವೃದ್ಧೆ ಮೃತಪಟ್ಟಿದ್ದಾರೆ. ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ತನಿಖೆಯಿಂದ ಡಿಕ್ಕಿಯಾದ ವಾಹನ ಯಾವುದೆಂದು ತಿಳಿದು ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮತ್ತೊಂದು ಹಿಟ್ ಅಂಡ್ ರನ್‌.. ಬಸ್​ ನಿಲ್ದಾಣಕ್ಕೆ ಹೋಗುತ್ತಿದ್ದ ಮಹಿಳೆಗೆ ಗುದ್ದಿ ಪರಾರಿ

https://newsfirstlive.com/wp-content/uploads/2024/02/BNG_OLD_WOMEN.jpg

Load More