/newsfirstlive-kannada/media/post_attachments/wp-content/uploads/2023/11/Rohit-sharma-2-1.jpg)
ಕ್ರಿಸ್ ಗೇಲ್ ವಿಧ್ವಂಸಕ ಬ್ಯಾಟ್ಸ್ಮನ್. ಸಿಡಿಲಬ್ಬರದ ಆಟಕ್ಕೆ ಫೇಮಸ್. ಇಷ್ಟು ದಿನ ಅಬ್ಬರದ ದಾಖಲೆಗಳ ಸಾಮ್ರಾಜ್ಯಕ್ಕೆ ಈತನೇ ದೊರೆಯಾಗಿದ್ದ. ಇಂತಾ ಯುನಿವರ್ಸಲ್ ಬಾಸ್ ಕಟ್ಟಿದ ಸಾಮ್ರಾಜ್ಯವನ್ನ ಇದೀಗ ಟೀಮ್ ಇಂಡಿಯಾದ ಮಹಾರಾಜ ಆಕ್ರಮಿಸಿಕೊಂಡಿದ್ದಾನೆ. ಅಷ್ಟಕ್ಕೂ ಗೇಲ್ ಸಾಮ್ರಾಜ್ಯವನ್ನ ಧ್ವಂಸ ಮಾಡಿ ಸಿಂಹಾಸನ ಏರಿದ ಆ ಅಧಿಪತಿ ಯಾರು? ಅನ್ನೋದರ ಕುರಿತು ಮಾಹಿತಿ ಇಲ್ಲಿದೆ.
ಕರೆಕ್ಟ್, ಹಂಡ್ರೆಡ್ ಪರ್ಸಂಟ್ ಕರೆಕ್ಟ್..! ಹೊಡೆದಾಟದಲ್ಲಿ ಯಾರು ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ. ಕೊನೆಗೆ ಯಾರು ಗೆದ್ದರು ಅನ್ನೋದಷ್ಟೇ ಲೆಕ್ಕಕ್ಕೆ ಬರೋದು. ಸದ್ಯ ಆ ಲೆಕ್ಕದಲ್ಲಿ ಕೊನೆಗೆ ಗೆದ್ದಿರೋದು ಡಿಸ್ಟ್ರಕ್ಟಿವ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ..!
ಹಿಟ್ಮ್ಯಾನ್ ಕ್ರಿಕೆಟ್ ದುನಿಯಾದ ನಯಾ 'ಸಿಕ್ಸ್ ಸರದಾರ'
ರೋಹಿತ್ ಶರ್ಮಾರದ್ದು ಇಲ್ಲಿ ತನಕ ಒಂದು ಲೆಕ್ಕವಾದ್ರೆ ಇನ್ಮೇಲೆ ಇನ್ನೊಂದು ಲೆಕ್ಕ. ಅದು ಸಾಮ್ರಾಜ್ಯಧಿಪತಿ ಲೆಕ್ಕ. ಒಂದೇ ಒಂದು ವಿಶ್ವಕಪ್ನಲ್ಲಿ ದಶಕಕ್ಕೂ ಅಧಿಕ ಕಾಲ ಭಯಾನಕ ಬ್ಯಾಟರ್ ಕ್ರೀಸ್ ಗೇಲ್ ಕಟ್ಟಿದ ಸಿಕ್ಸ್ ಸಾಮ್ರಾಜ್ಯವನ್ನ ಹಿಟ್ಮ್ಯಾನ್ ಧ್ವಂಸಗೊಳಿಸಿದ್ದಾರೆ. ಆ ಮೂಲಕ ನಯಾ ಸಿಕ್ಸರ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ರೋಹಿತ್, ಗೇಲ್ ಸಾಮ್ರಾಜ್ಯವನ್ನ ಹೇಗೆ ಉಡೀಸ್ ಮಾಡಿದ್ರು ಅನ್ನೋದನ್ನ ಒಂದೊಂದಾಗಿ ತೋರಿಸ್ತೀವಿ ನೋಡಿ.
Streets won't forget !!! NEVER ? #RohitSharma?pic.twitter.com/FmJnw48eFX
— Adi (@aditya_naik)
Streets won't forget !!! NEVER 😣 #RohitSharma𓃵pic.twitter.com/FmJnw48eFX
— Adi (@aditya_naik) November 15, 2023
">November 15, 2023
ಒಂದೇ ವಿಶ್ವಕಪ್ನಲ್ಲಿ ರೋಹಿತ್ ಅತ್ಯಧಿಕ ಸಿಕ್ಸ್..!
ವಿಶ್ವಕಪ್ನಂತಹ ಹೈ ಪ್ರೆಶರ್ ಟೂರ್ನಮೆಂಟ್ನಲ್ಲಿ ರನ್ಗಳಿಸೋದೇ ಒಂದು ಚಾಲೆಂಜ್.! ಅಂತ್ರದಲ್ಲಿ ಹಿಟ್ಮ್ಯಾನ್ ಒಂದೇ ವಿಶ್ವಕಪ್ನಲ್ಲಿ ಗರಿಷ್ಠ ಸಿಕ್ಸ್ ಸಿಡಿಸಿ ಕ್ರಿಸ್ ಗೇಲ್ ದಾಖಲೆಯನ್ನ ಅಳಿಸಿಹಾಕಿದ್ದಾರೆ.
ಏಕೈಕ ವಿಶ್ವಕಪ್ನಲ್ಲಿ ಹೆಚ್ಚು ಸಿಕ್ಸ್ (ಹೆಡ್ಡರ್)
ಆಟಗಾರ - ಸಿಕ್ಸ್ - ವರ್ಷ
ರೋಹಿತ್ ಶರ್ಮಾ - 28 - 2023
ಕ್ರಿಸ್ ಗೇಲ್ - 26 - 2015
ಇಯಾನ್ ಮಾರ್ಗನ್ - 22 - 2019
ಇದನ್ನು ಓದಿ: VIDEO: ಚಲಿಸುವಾಗ ಹೊತ್ತಿ ಉರಿದ ಡಬಲ್ ಡೆಕ್ಕರ್ AC ಬಸ್.. ಕಿಟಕಿ ಗ್ಲಾಸ್ ಹೊಡೆದು ಹಾರಿದ ಪ್ರಯಾಣಿಕರು
ಏಕೈಕ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದವರ ಪೈಕಿ ರೋಹಿತ್ 28 ಸಿಕ್ಸ್ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್ 2015ರ ವಿಶ್ವಕಪ್ನಲ್ಲಿ 26 ಹಾಗೂ ಇಯಾನ್ ಮಾರ್ಗನ್ 2019 ರಲ್ಲಿ 22 ಸಿಕ್ಸ್ ಸಿಡಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
Gautam Gambhir:
People talk about Dhoni, but Rohit Sharma is the real deal here. The way he has led this team is an example for all the captains out there.”#INDvsNZ#RohitSharma?pic.twitter.com/r17oq0WTE5
— Atul Tiwari (@iTiwariAtul)
Gautam Gambhir:
People talk about Dhoni, but Rohit Sharma is the real deal here. The way he has led this team is an example for all the captains out there.”#INDvsNZ#RohitSharma𓃵pic.twitter.com/r17oq0WTE5— Atul Tiwari (@iTiwariAtul)
Gautam Gambhir:
People talk about Dhoni, but Rohit Sharma is the real deal here. The way he has led this team is an example for all the captains out there.”#INDvsNZ#RohitSharma𓃵pic.twitter.com/r17oq0WTE5— Atul Tiwari (@iTiwariAtul) November 15, 2023
">November 15, 2023
">November 15, 2023
ಬರೀ ಏಕೈಕ ವಿಶ್ವಕಪ್ ಮಾತ್ರವಲ್ಲ... ಏಕದಿನ ವಿಶ್ವಕಪ್ ಟೂರ್ನಮೆಂಟ್ ಹಿಸ್ಟರಿಯಲ್ಲಿ ಅಧಿಕ ಸಿಕ್ಸ್ ಸಿಡಿಸಿದ ಲೆಕ್ಕಾಚಾರದಲ್ಲೂ ಕ್ರಿಸ್ ಗೇಲ್ ರನ್ನ ಹಿಂದಿಕ್ಕಿದ್ರು.
ವಿಶ್ವಕಪ್ ನಲ್ಲಿ ಅತ್ಯಧಿಕ ಸಿಕ್ಸ್ (ಹೆಡ್ಡರ್)
ಆಟಗಾರ - ಸಿಕ್ಸ್
ರೋಹಿತ್ ಶರ್ಮಾ - 51*
ಕ್ರಿಸ್ ಗೇಲ್ - 49
ಗ್ಲೆನ್ ಮ್ಯಾಕ್ಸ್ವೆಲ್ - 43
ಏಕದಿನ ವಿಶ್ವಕಪ್ನಲ್ಲಿ 51 ಸಿಕ್ಸ್ ಬಾರಿಸಿರುವ ರೋಹಿತ್ ಶರ್ಮಾ ಟಾಪರ್ ಅನ್ನಿಸಿಕೊಂಡಿದ್ದಾರೆ. 49 ಸಿಕ್ಸ್ ಹೊಡೆದಿರುವ ಕ್ರಿಸ್ಗೇಲ್ 2ನೇ ಸ್ಥಾನದಲ್ಲಿದ್ರೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ 43 ಸಿಕ್ಸರ್ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ: 4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ತೆಂಡುಲ್ಕರ್ ಮುಂದೇನೇ 50ನೇ ಶತಕ ಸಿಡಿಸಿದ ವಿರಾಟ್
ವಿಶ್ವಕಪ್ ಬಿಟ್ಟು ಬಿಡಿ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲೂ ರೋಹಿತ್ ಶರ್ಮಾ ಸಿಕ್ಸರ್ ಕಿಂಗ್ ಅನ್ನಿಸಿಕೊಂಡಿದ್ದಾರೆ. ಇದೇ ವಿಶ್ವಕಪ್ ಟೂರ್ನಿಯಲ್ಲಿ ಗೇಲ್ ದಾಖಲೆಯನ್ನ ರೋಹಿತ್ ಧೂಳಿಪಟ ಮಾಡಿದ್ದಾರೆ.
Gautam Gambhir:
People talk about Dhoni, but Rohit Sharma is the real deal here. The way he has led this team is an example for all the captains out there.”#INDvsNZ#RohitSharma?pic.twitter.com/r17oq0WTE5
— Atul Tiwari (@iTiwariAtul)
Gautam Gambhir:
People talk about Dhoni, but Rohit Sharma is the real deal here. The way he has led this team is an example for all the captains out there.”#INDvsNZ#RohitSharma𓃵pic.twitter.com/r17oq0WTE5— Atul Tiwari (@iTiwariAtul)
Gautam Gambhir:
People talk about Dhoni, but Rohit Sharma is the real deal here. The way he has led this team is an example for all the captains out there.”#INDvsNZ#RohitSharma𓃵pic.twitter.com/r17oq0WTE5— Atul Tiwari (@iTiwariAtul) November 15, 2023
">November 15, 2023
">November 15, 2023
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸ್ (ಹೆಡ್ಡರ್)
ಆಟಗಾರ - ಸಿಕ್ಸ್
ರೋಹಿತ್ ಶರ್ಮಾ - 575
ಕ್ರಿಸ್ ಗೇಲ್ - 553
ಶಾಹೀದ್ ಅಫ್ರಿದಿ - 476
ಅಂತರಾಷ್ಟ್ರೀಯ ಕ್ರಿಕೆಟ್ನ ಮೂರು ಮಾದರಿಯಲ್ಲಿ ರೋಹಿತ್ ಶರ್ಮಾ ಇಲ್ಲಿ ತನಕ 575 ಸಿಕ್ಸ್ ಹೊಡೆದು ಅಗ್ರಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 553 ಸಿಕ್ಸ್ ಸಿಡಿಸಿ 2ನೇ ಸ್ಥಾನದಲ್ಲಿದ್ರೆ, ಶಾಹೀದ್ ಅಫ್ರಿದಿ 476 ಸಿಕ್ಸರ್ನೊಂದಿಗೆ 3ನೇ ಸ್ಥಾನ ಸಂಪಾದಿಸಿದ್ದಾರೆ.
ಒಟ್ಟಿನಲ್ಲಿ, ಯುನಿವರ್ಸೆಲ್ ಬಾಸ್ ಕ್ರಿಸ್ಗೇಲ್ ಕಟ್ಟಿದ ಸಿಕ್ಸ್ ಸಾಮ್ರಾಜ್ಯವನ್ನ ಹಿಟ್ಮ್ಯಾನ್ ರೋಹಿತ್ ಶರ್ಮಾ ಒಂದೇ ಒಂದು ಟೂರ್ನಮೆಂಟ್.., ಅದೂ ಕೇವಲ 10 ಪಂದ್ಯಗಳಲ್ಲಿ ಆಕ್ರಮಿಸಿಕೊಂಡಿದ್ದಾರೆ. ರೋಹಿತ್ ಸಿಕ್ಸ್ ದರ್ಬಾರ್ ಹೀಗೆ ಕಂಟಿನ್ಯೂ ಆದ್ರೆ ಮತ್ತಷ್ಟು ದಾಖಲೆಗಳು ಖತಂ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ