ದೂರು ದಾಖಲಾಗುವ ಮುಂಚೆ ನಾಲ್ಕು ರಾಜ್ಯಗಳಲ್ಲಿ ಓಡಾಡಿದ ಆರೋಪ
ಹಾಕಿ ಪ್ಲೇಯರ್ ಬಳಸುತ್ತಿದ್ದ 3 ಮೊಬೈಲ್ ನಂಬರ್ಗಳೂ ಸ್ವಿಚ್ಆಫ್
ಮೂರು ದಿನಗಳಿಂದ ಹುಡುಕಾಡುತ್ತಿರುವ ಬೆಂಗಳೂರು ಪೊಲೀಸರು
ಬೆಂಗಳೂರ: ಭಾರತೀಯ ಹಾಕಿ ಪ್ಲೇಯರ್ ವರುಣ್ ಕುಮಾರ್ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ಈ ಸಂಬಂಧ ಎರಡು ವಿಶೇಷ ತಂಡಗಳ ರಚಿಸಿ 4 ರಾಜ್ಯಗಳಲ್ಲಿ ತಲಾಶ್ ಮಾಡಲಾಗುತ್ತಿದೆ.
ಹಾಕಿ ಪ್ಲೇಯರ್ ವರುಣ್ ಕುಮಾರ್ ಮೇಲೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಈ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರು ವರುಣ್ ಪತ್ತೆಗಾಗಿ 2 ವಿಶೇಷ ತಂಡಗಳನ್ನು ರಚನೆ ಮಾಡಿದ್ದು 4 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಒಡಿಶಾ, ಅಸ್ಸಾಂ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್ನಲ್ಲಿ ಪೊಲೀಸರ ತಂಡಗಳು ಮೂರು ದಿನದಿಂದ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೂ ವರುಣ್ ಕುಮಾರ್ ಪತ್ತೆಯಾಗಿಲ್ಲ. ಈ ಸಂಬಂಧ ಯಾವುದೇ ಸುಳಿಳು ಕೂಡ ಪೊಲೀಸರಿಗೆ ಸಿಕ್ಕಿಲ್ಲ. ದೂರು ದಾಖಲಾಗುವ ಮೊದಲೇ ವರುಣ್ 4 ರಾಜ್ಯಗಳಲ್ಲಿ ಓಡಾಡಿರುವುದರ ಬಗ್ಗೆ ಮಾಹಿತಿ ಇದೆ. ಆದರೆ ನಿರ್ಧಿಷ್ಟವಾಗಿ ಯಾವ ಪ್ರದೇಶದಲ್ಲಿ ಇದ್ದಾನೆ ಎಂಬುದು ನಿಗೂಢವಾಗಿದೆ. ಏಕೆಂದರೆ ಆತನ ಬಳಿಯಿದ್ದ 3 ಮೊಬೈಲ್ ನಂಬರ್ಗಳು ಸ್ವಿಚ್ ಆಪ್ ಆಗಿವೆ.
ಹೀಗಾಗಿ ಮೂರು ಮೊಬೈಲ್ ನಂಬರ್ಗಳ ಸಿಡಿಆರ್ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ. ಈ ನಂಬರ್ಗಳಿಂದ ಕೊನೆಯದಾಗಿ ಯಾರಿಗೆ ಫೋನ್ ಮಾಡಿದ್ದ ಎಂಬುದನ್ನು ತಿಳಿದುಕೊಂಡು ಬಳಿಕ ಕೊನೆ ಕಾಲ್ ಮಾತನಾಡಿದವರ ಮೂಲಕ ಹಾಕಿ ಪ್ಲೇಯರ್ನನ್ನ ಪತ್ತೆ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ