/newsfirstlive-kannada/media/post_attachments/wp-content/uploads/2024/06/kalki-prabas.jpg)
‘ಸಲಾರ್’​ ಸಿನಿಮಾದ ಬಳಿಕ ಪ್ರಭಾಸ್​ ಮತ್ತೆ ಅಬ್ಬರಿಸಲು ಮುಂದಾಗಿದ್ದಾರೆ. ಈ ಬಾರಿ ಬಿಗ್ ಬಜೆಟ್​ನಲ್ಲಿ Kalki 2898AD ಅವತಾರವೆತ್ತಿ ಬರುತ್ತಿದ್ದಾರೆ. ಅಂದಹಾಗೆಯೇ ಈ ಸಿನಿಮಾದ 2ನೇ ಟ್ರೇಲರ್​ ರಿಲೀಸ್​ ಆಗಿದ್ದು, ರಿಲೀಸ್​ ಆದ ಬೆನ್ನಲ್ಲೇ ಈ ಚಿತ್ರದ ಕುರಿತಾಗಿ ಹಾಲಿವುಡ್​ ಕಲಾವಿದರು ಮಾಡಿರುವ ಆಪಾದನೆಯೊಂದು ಬೆಳಕಿಗೆ ಬಂದಿದೆ!.
ಕಲ್ಕಿ ಪ್ರಭಾಸ್​ ನಟನೆಯ ಬಹು ನಿರೀಕ್ಷಿತ ಸಿನಿಮಾ. ‘ರಾಧೆ ಶ್ಯಾಮ್​’ ನಿರ್ದೇಶಿಸಿದ ನಿರ್ದೇಶಕ ನಾಗ್​ ಅಶ್ಚಿನ್​ ಕಲ್ಕಿ ಅವತಾರದಲ್ಲಿ ಪ್ರಭಾಸ್​ ಅವರನ್ನು ತೋರಿಸಲು ಮುಂದಾಗಿದ್ದಾರೆ. ಭೈರವನ ರೂಪದಲ್ಲಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ.
ಇಷ್ಟೆಲ್ಲಾ ಕುತೂಹಲ ಕೆರಳಿಸಿರುವ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಸುಮತಿ ರೂಪದಲ್ಲಿ ದೀಪಿಕಾ ನಟಿಸಿದ್ದಾರೆ. ಮಾತ್ರವಲ್ಲದೆ. ಬಾಲಿವುಡ್​ ಬಿಗ್​ ಬಿ ಅಮಿತಾ ಬಚ್ಚನ್​ ಅಶ್ವತ್ಥಾಮನಾಗಿ ಬಣ್ಣ ಹಚ್ಚಿದ್ದಾರೆ. ಇವಿಷ್ಟು ಮಾತ್ರವಲ್ಲ, ಕಮಲ್​ ಹಾಸನ್​, ದಿಶಾ ಪಟಾನಿ. ಶೋಭನಾ, ಬ್ರಹ್ಮಾನಂದಂ, ಅನ್ನಾ ಬೆನ್​ ಹೀಗೆ ಬಹುತಾರಗಣದ ಸಿನಿಮಾ ಇದಾಗಿದೆ.
ಇದನ್ನೂ ಓದಿ: Kalki 2898 AD 2ನೇ ಟ್ರೇಲರ್ ರಿಲೀಸ್.. ಪೌರಾಣಿಕ ಪಾತ್ರದಲ್ಲಿ ಗಮನ ಸೆಳೆದ ಮಾಳವಿಕಾ..!
Sad to see that some of the work I did for Star Trek: Prodigy got stolen by Vyjayanthi movies in their trailer:https://t.co/KWrFKJkksn
This is the matte painting I did for Star Trek under direction of Ben Hibon and Alessandro Taini and then as it appears in the trailer. pic.twitter.com/CYFP008Rd7
— Oliver Beck (@OliverBeckArt)
Sad to see that some of the work I did for Star Trek: Prodigy got stolen by Vyjayanthi movies in their trailer:https://t.co/KWrFKJkksn
This is the matte painting I did for Star Trek under direction of Ben Hibon and Alessandro Taini and then as it appears in the trailer. pic.twitter.com/CYFP008Rd7— Oliver Beck (@OliverBeckArt) June 13, 2024
">June 13, 2024
ಅಭಿಮಾನಿಗಳಿಗಂತೂ ಪ್ರಭಾಸ್​ ಅವತಾರವನ್ನು ಕಾಣಲು ಕಾತುರರಾಗಿದ್ದು, ಚಿತ್ರತಂಡ ಜೂನ್​ 10 ರಂದು ಕಲ್ಕಿ ಸಿನಿಮಾದ ಟ್ರೈಲರ್​ ಲಾಂಚ್​ ಮಾಡಿತ್ತು. ಇದಾದ ಬಳಿಕ ನಿನ್ನೆ ಸಿನಿಮಾದ ಮತ್ತೊಂದು ಟ್ರೇಲರ್ ಲಾಂಚ್​ ಮಾಡಿದೆ. ಆದರೆ ಮೊದಲ ಟ್ರೇಲರ್​ ಬಿಡುಗಡೆ ಗೊಂಡಂತೆ ಹಾಲಿವುಡ್​ ಕಲಾವಿದರಾದ ಆಲಿವರ್​ ಬೆಕ್​ ಮತ್ತು ಸುಂಗ್​ ಚೋಯ್​ ಈ ಸಿನಿಮಾದ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ.
ಆಲಿವರ್​ ಬೆಕ್​ ಮತ್ತು ಸುಂಗ್​ ಚೋಯ್​ ಇಬ್ಬರು ಟ್ರೇಲರ್​ನ ಫ್ರೇಮ್​ಗಳನ್ನು ಇಟ್ಟುಕೊಂಡು ಹೋಲಿಕೆ ಮಾಡಿದ್ದಾರೆ. ಮಾತ್ರವಲ್ಲದೆ ಈ ಸಂಗತಿಯನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ?
ಟ್ವಿಟ್ಟರ್​ನಲ್ಲಿ ಸುಂಗ್​ ಚೋಯ್​ ‘‘ಕಲ್ಕಿ ಟ್ರೇಲರ್​ನಲ್ಲಿ ತನ್ನ ಕೃತಿಯನ್ನು ಕದ್ದಿದ್ದಾರೆ. ನಾನು ಟ್ರೇಲರನ್ನು ಕ್ಲಿಕ್​ ಮಾಡಿದ್ದೇನೆ. ಅದು ನನ್ನ ಕೆಲಸದಿಂದ ಪ್ರೇರಿತವಾಗಿದೆ ಎಂದು ಗೊತ್ತಾಯ್ತು’’ ಎಂದು ಬರೆದುಕೊಂಡಿದ್ದಾರೆ.
ಸುಂಗ್​ ಚೋಯ್ ‘‘ನನ್ನ ಕಲಾಕೃತಿಯ ನೇರ ನಕಲು ಇಲ್ಲದೇ ಇರುವಾಗ ನಾನು ಕಾನೂನಿನ ಆಶ್ರಯ ಪಡುವುದು ಸವಾಲಾಗಬಹುದು’’ ಎಂದು ಹೇಳಿದ್ದಾರೆ.
ಆಲಿವರ್ ಕೂಡ ಈ ಬಗ್ಗೆ ಆಪಾದಿಸಿದ್ದು, ‘‘ ನನ್ನ ಕಲಾಕೃತಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲು ಮಾಡಿದ್ದು ಇದೇ ಮೊದಲು. ಭಾರತೀಯ ಸಿನಿಮಾವೊಂದು ನನ್ನ ಕೆಲಸ ನಕಲು ಮಾಡಿರುವುದು ಇದೇ ಫಸ್ಟ್’’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us