newsfirstkannada.com

×

ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; KGF-3 ಬರೋದು ಫಿಕ್ಸ್‌; ಬಿಗ್‌ ಅಪ್ಡೇಟ್ ಕೊಟ್ಟ ಹೊಂಬಾಳೆ ಫಿಲಂಸ್‌

Share :

Published September 29, 2023 at 6:03pm

Update September 29, 2023 at 6:05pm

    ಸಲಾರ್ ಪಾರ್ಟ್ 1 ಸೀಸ್‍ಫೈರ್ ಚಿತ್ರದ ಪೋಸ್ಟರ್ ಸಹ ಬಿಡುಗಡೆ

    ಕಾಂತಾರ 2, ರಘು ತಥಾ, ಬಘೀರ, ಸಲಾರ್ ಪಾರ್ಟ್‍ 2, ಕೆಜಿಎಫ್‍ 3

    2025ರ ಹೊತ್ತಿಗೆ 8 ಸಿನಿಮಾಗಳ ಬಿಡುಗಡೆಗೆ ಹೊಂಬಾಳೆ ಬಿಗ್‌ ಪ್ಲಾನ್

ಬೆಂಗಳೂರು: ಕೆಜಿಎಫ್‌, ಕಾಂತಾರ ಅನ್ನೋ ಸೂಪರ್ ಹಿಟ್‌ ಸಿನಿಮಾಗಳ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದೆ. ಇದೇ ಹೊಂಬಾಳೆ ಫಿಲಂಸ್‌ ಇವತ್ತು ಒಂದಲ್ಲ, ಎರಡಲ್ಲ ಮುಂದಿನ 8 ಬಿಗ್‌ ಬಜೆಟ್‌ ಸಿನಿಮಾಗಳ ಬಗ್ಗೆ ಲೇಟೆಸ್ಟ್ ಅಪ್ಡೇಟ್‌ ಕೊಟ್ಟಿದೆ. ಬ್ಯಾಕ್‌ ಟು ಬ್ಯಾಕ್‌ ಸೂಪರ್ ಹಿಟ್‌ ಚಿತ್ರಗಳ ಮೂಲಕ ಹೆಸರುವಾಸಿಯಾದ ಹೊಂಬಾಳೆ ಫಿಲಂಸ್ 2025ರ ಹೊತ್ತಿಗೆ 8 ಸಿನಿಮಾಗಳನ್ನು ಬಿಡುಗಡೆ ಮಾಡೋ ಪ್ಲಾನ್ ಮಾಡಿದೆ.

ಡಿಸೆಂಬರ್ 22ಕ್ಕೆ ಸಲಾರ್ ಪಾರ್ಟ್‌-1 ರಿಲೀಸ್

ಡಾರ್ಲಿಂಗ್ ಪ್ರಭಾಸ್‍ ಅಭಿನಯದ ಸಲಾರ್ ಚಿತ್ರದ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಸಲಾರ್ ಪಾರ್ಟ್- 1, ಸೀಸ್‍ಫೈರ್’ ಚಿತ್ರವನ್ನು ಮುಂದಿನ ಡಿಸೆಂಬರ್‌ 22 ರಂದು ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್‍ ಪ್ರಕಟಿಸಿದೆ.

ಸಲಾರ್ ಪಾರ್ಟ್- 1 ಸೀಸ್‍ಫೈರ್ ಚಿತ್ರದ ಮೊದಲ ಟೀಸರ್ ಯಾವಾಗ ಬಿಡುಗಡೆಯಾಯಿತೋ ಅಂದಿನಿಂದಲೇ ಪ್ರಭಾಸ್‍ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ. ‘ಸಲಾರ್’ ಪ್ರಪಂಚವನ್ನು ಪರಿಚಯಿಸುವ ಈ ಟೀಸರ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುವುದರ ಜೊತೆಗೆ, ಅತೀ ಹೆಚ್ಚಿನ ವೀಕ್ಷಣೆಗೊಳಗಾಗಿತ್ತು. ಹೊಂಬಾಳೆ ಫಿಲಂಸ್‌ ನಿರ್ಮಾಣದ, ಕೆಜಿಎಫ್‌ ಮಾಂತ್ರಿಕ ಪ್ರಶಾಂತ್‍ ನೀಲ್‍ ನಿರ್ದೇ‍ಶನದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದ್ದು, ಡಿಸೆಂಬರ್ 22ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

‘ಕಾಂತಾರ 2’, ‘ಸಲಾರ್ ಪಾರ್ಟ್‍ 2’, ‘ಕೆಜಿಎಫ್‍ 3’

ಹೊಂಬಾಳೆ ಫಿಲಂಸ್‌ ಸಿನಿಮಾ ಪ್ರೇಕ್ಷಕರಿಗೆ ಗುಣಮಟ್ಟದ ಚಿತ್ರಗಳನ್ನು ನೀಡಬೇಕೆನ್ನುವ ಹೆಬ್ಬಯಕೆಯೊಂದಿಗೆ ಹಲವು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ‘ಯುವ’, ‘ಕಾಂತಾರ 2’, ‘ರಘು ತಥಾ’, ‘ಬಘೀರ’, ‘ಸಲಾರ್ ಪಾರ್ಟ್‍ 2’, ‘ಕೆಜಿಎಫ್‍ 3’, ‘ರಿಚರ್ಡ್‍ ಆಂಟೋನಿ’, ‘ಟೈಸನ್‍’ ಮುಂತಾದ ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈಗ ‘ಸಲಾರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಮೂಲಕ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.

ಸಲಾರ್ ಪಾರ್ಟ್ 1 ಸೀಸ್‍ಫೈರ್ ಚಿತ್ರದ ಬಿಡುಗಡೆ ದಿನಾಂಕದ ಜೊತೆಗೆ ಚಿತ್ರದ ಪೋಸ್ಟರ್ ಸಹ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಬಾಹುಬಲಿ ಖ್ಯಾತಿಯ ಪ್ರಭಾಸ್‍, ‘ಕೆಜಿಎಫ್‍ 1’ ಮತ್ತು ‘ಕೆಜಿಎಫ್‍ 2’ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಮತ್ತು ನಿರ್ದೇಶಕ ಪ್ರಶಾಂತ್‍ ನೀಲ್‍ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ಆ್ಯಕ್ಷನ್‍ ಚಿತ್ರಗಳಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜನಪ್ರಿಯವಾದ ಮೂವರು ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷ.

ಇದನ್ನೂ ಓದಿ: WATCH: ನಾವು ಆಗಲೇ ಮಾತಾಡಿ ಆಗಿದೆ.. ಒಂದೇ ಸಾಲಿನಲ್ಲಿ ಭಾಷಣ ಮುಗಿಸಿದ್ದೇಕೆ ನಟ ದರ್ಶನ್‌?

ಭಾರತದ ಅತಿ ದೊಡ್ಡ ಆ್ಯಕ್ಷನ್‍ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಇದುವರೆಗೂ ಕಂಡು ಕೇಳರಿಯದ ಬೃಹತ್ ಆ್ಯಕ್ಷನ್‍ ದೃಶ್ಯಗಳು ಈ ಚಿತ್ರದ ಹೈಲೈಟ್ಸ್‌ ಆಗಲಿದೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ. ಮುಂದಿನ ಕ್ರಿಸ್‌ಮಸ್ ಅಂಗವಾಗಿ ಡಿಸೆಂಬರ್ 22ರಂದು ಸಲಾರ್ ಪಾರ್ಟ್ 1 ಸೀಸ್‌ಫೈರ್‌ ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; KGF-3 ಬರೋದು ಫಿಕ್ಸ್‌; ಬಿಗ್‌ ಅಪ್ಡೇಟ್ ಕೊಟ್ಟ ಹೊಂಬಾಳೆ ಫಿಲಂಸ್‌

https://newsfirstlive.com/wp-content/uploads/2023/09/KGF-Salaar-1.jpg

Load More