/newsfirstlive-kannada/media/post_attachments/wp-content/uploads/2024/06/G-Parameshwar-1.jpg)
ಜೆಡಿಎಸ್​​ MLC ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರವಾಗಿ ಗೃಹ ಸಚಿವರು ಡಾ. ಜಿ.ಪರಮೇಶ್ವರ್​ ಹೇಳಿದ್ದಾರೆ. ಸಿಐಡಿ ತನಿಖೆಗೆ ಕೊಡೋದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?
ನಿನ್ನೆವರೆಗೂ ಕಂಪ್ಲೆಂಟ್ ಬಂದಿರಲಿಲ್ಲ. ಕಂಪ್ಲೇಂಟ್ ಬಂದ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ, ಅವರನ್ನು ಸೆಕ್ಯೂರ್​ ಮಾಡಿದ್ದಾರೆ. ಎಫ್​ಐಆರ್ ಆಗಿದೆ. ಈ ಕೇಸನ್ನ ಸಿಐಡಿ ತನಿಖೆಗೆ ಕೊಡ್ತೀವಿ. ಈ ರೀತಿಯ ಕೇಸ್​​ಗಳನ್ನ ಸಿಐಡಿಗೆ ಕೊಡಬೇಕಾಗುತ್ತೆ ಎಂದು ಡಾ. ಜಿ.ಪರಮೆಶ್ವರ್​ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/Suraj-revanna-2-1.jpg)
ಇದನ್ನೂ ಓದಿ: ತಮ್ಮ ಪ್ರಜ್ವಲ್​ ಬಳಿಕ ಅಣ್ಣ ಸೂರಜ್​ ಬಂಧನ.. ರೇವಣ್ಣ ಕುಟುಂಬದ ಮೇಲಿರುವ ಆರೋಪಗಳು ಹೀಗಿವೆ
ಬಳಿಕ ‘ನನಗೇನು ಗೊತ್ತೋ ಅಷ್ಟನ್ನೇ ನಾನು ಹೇಳ್ತೀನಿ. ಕಂಪ್ಲೇಂಟ್ ಬಂದಿದೆ. ಏನ್ ಕ್ರಮ ತಗೋಬೇಕೋ ಪೊಲೀಸರು ಕ್ರಮ ತಗೋತಾರೆ. ಅದನ್ನ ಬಿಟ್ಟು ರಾಜಕೀಯ ಪ್ರೇರಿತ ಅಂತ ಕೆಲವರು ಹೇಳಿದ್ದಾರೆ. ಆ ಥರಹದ್ದು ನನಗಂತೂ ಯಾವ್ದು ಏನೂ ಗೊತ್ತಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us