newsfirstkannada.com

ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?

Share :

Published June 23, 2024 at 9:16am

    ಸೂರಜ್ ರೇವಣ್ಣನ ಮೇಲೆ ಸಂತ್ರಸ್ತನ ಹಲವು ಆರೋಪಗಳು

    ತೋಟದ ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪ

    ದೌರ್ಜನ್ಯದ ಬಳಿಕ 2 ಕೋಟಿ ದುಡ್ಡು ಕೊಡುವ ಆಮಿಷ

ಅಸಹಜ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೆಡಿಎಸ್ ಎಂಎಲ್​ಸಿ ಸೂರಜ್ ರೇವಣ್ಣ ಅವರ ಬಂಧನವಾಗಿದೆ. ಹಾಸನದ ಸೆನ್ ಠಾಣೆಯಲ್ಲಿ ಸೂರಜ್​ ರೇವಣ್ಣ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಸಂತ್ರಸ್ತನ ದೂರು ಆಲಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಳಿಕ ಇಂದು ಸೂರಜ್ ರೇವಣ್ಣರವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಸಂತ್ರಸ್ತ ಸೂರಜ್​ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ..

ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಮಾಡಿರುವ ಆರೋಪ

ಸಂತ್ರಸ್ತ ಯುವಕ ಸೂರಜ್​ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಾರೆ. ಜೂ.16ರ ಸಂಜೆ ಗನ್ನಿಕಡದ ತೋಟದ ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಸೂರಜ್​ ರೇವಣ್ಣ ಅರೆಸ್ಟ್.. ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಕಲೆಗಳು ಪತ್ತೆ

ಲೈಫ್ ಸೆಟ್ಲ್ ಮಾಡ್ತೀನಿ

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತ ಯುವಕ ಮತ್ತು ಸೂರಜ್​ ರೇವಣ್ಣ ಭೇಟಿಯಾಗುತ್ತದೆ. ಬಳಿಕ ಸೂರಜ್​ ನಂಬರ್ ಕೊಡು ಲೈಫ್ ಸೆಟ್ಲ್ ಮಾಡ್ತೀನಿ ಎಂದು ಹೇಳಿದ್ದಾರಂತೆ. ಅದರಂತೆ ಸೂರಜ್​ ರೇವಣ್ಣ ನಂಬರ್ ಪಡೆದಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಇದನ್ನೂ ಓದಿ:  ಅನೈತಿಕ ಸಂಬಂಧ ಶಂಕೆ.. ತಂದೆಯೊಂದಿಗೆ ವಾಸವಿದ್ದ ದೊಡ್ಡಮ್ಮನ ಹತ್ಯೆ

ತೋಟದ ಮನೆಗೆ ಆಹ್ವಾನ

ನಂಬರ್​​ ಪಡೆದ ಬಳಿಕ ಗುಡ್ ಇವ್ನಿಂಗ್ ಕಣೋ ಅಂತ ಲವ್ ಸಿಂಬಲ್ ಜೊತೆ ಮೆಸೇಜ್ ಮಾಡಿದ್ದಾರೆ. ಅದಕ್ಕೆ ಸಂತ್ರಸ್ತ ಯುವಕ ವೆರಿ ಗುಡ್ ಇವನಿಂಗ್ ಅಣ್ಣ ಎಂದು ಮೆಸೇಜ್​ ಮಾಡಿದ್ದು, ಬಳಿಕ ಒಬ್ಬನನ್ನೇ ತೋಟದ ಮನೆಗೆ ಆಹ್ವಾನಿಸಿದ್ದಾರೆ.

2 ಕೋಟಿ ದುಡ್ಡಿನ ಆಮಿಷ

ಭಾನುವಾರ ಸಂಜೆ ಸಂತ್ರಸ್ತ ಸೂರಜ್​ ರೇವಣ್ಣನ್ನು ಭೇಟಿಯಾಗಲು ಹೋದಾಗ ಬಲವಂತವಾಗಿ ಅಸಹಜವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಮಾತ್ರವಲ್ಲದೆ ಇದನ್ನು ಯಾರಿಗಾದ್ರೂ ಹೇಳಿದ್ರೆ ನಿನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರಂತೆ. ಜೊತೆಗೆ 2 ಕೋಟಿ ದುಡ್ಡು ಕೊಡುವ ಆಮಿಷವೊಡ್ಡಿದ್ದಾರೆಂದು ಸಂತ್ರಸ್ತನ ಆರೋಪಿಸಿದ್ದಾರೆ.

ಇದನ್ನೂ ಓದಿ:  ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್​.. ನಟನಿಗೆ ನೀಡಿದ ಫೆಸಿಲಿಟಿ ಮಾತ್ರ..

ಕೊಲೆ ಮಾಡಲು ಸಂತ್ರಸ್ತನನ್ನು ಹುಡುಕಾಟ

ಒಪ್ಪದಿದ್ದಾಗ ಕೊಲೆ ಮಾಡಲು ಸಂತ್ರಸ್ತನನ್ನು ಹುಡುಕಾಟ ನಡೆದಿದೆ ಎನ್ನಲಾಗುತ್ತಿದೆ. ಕೊನೆಗೆ ಸಂತ್ರಸ್ತ ಬೆಂಗಳೂರಿಗೆ ಬಂದು ಡಿಜಿಗೆ ದೂರು ನೀಡಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯದ ವೈದ್ಯಕೀಯ ದಾಖಲಾತಿಯನ್ನೂ ಮಾಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?

https://newsfirstlive.com/wp-content/uploads/2024/06/Suraj-revanna-2-1.jpg

Load More