newsfirstkannada.com

‘ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳೋ ಚಾನ್ಸೇ ಇಲ್ಲ’- ಪೆನ್‌ಡ್ರೈವ್ ಕೇಸ್‌ಗೆ ಗೃಹ ಸಚಿವರಿಂದ ಹೊಸ ಟ್ವಿಸ್ಟ್; ಏನಂದ್ರು?

Share :

Published May 2, 2024 at 1:57pm

    ಹಾಸನ ಪೆನ್‌ಡ್ರೈವ್ ಪ್ರಕರಣ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ

    ಪ್ರಜ್ವಲ್ ರೇವಣ್ಣ ಅವರು ರಾತ್ರೋರಾತ್ರಿ ವಿದೇಶಕ್ಕೆ ಹೋಗಿದ್ದಾರೆ

    ಅವರು ಬರದೆ ಹೋದ್ರೆ ಕಾನೂನು ಪ್ರಕಾರ ಅರೆಸ್ಟ್ ಮಾಡಬೇಕಾಗುತ್ತೆ

ಹಾಸನ ಅಶ್ಲೀಲ ವಿಡಿಯೋ ವೈರಲ್‌ ಹಾಗೂ ಪೆನ್‌ಡ್ರೈವ್‌ ಪ್ರಕರಣಕ್ಕೆ ರಾಜ್ಯ ಸರ್ಕಾರ ಮತ್ತೊಂದು ಮೆಗಾ ಟ್ವಿಸ್ಟ್ ಕೊಟ್ಟಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಇದೂ ಬಹಳ ಗಂಭೀರವಾದ ವಿಷಯ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ ಎಂದಿದ್ದಾರೆ.

ಸಂತ್ರಸ್ತೆಯಿಂದ ದೂರು ಬಂದ ಕೂಡಲೇ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಿಐಡಿಗೆ ವಹಿಸಿ ಎಸ್‌ಐಟಿ ತನಿಖೆಗೆ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಅವರು ರಾತ್ರೋರಾತ್ರಿ ವಿದೇಶಕ್ಕೆ ಹೋಗಿದ್ದಾರೆ. ಸೆಕ್ಷನ್ 41(A) ಪ್ರಕಾರ ನೋಟಿಸ್ ನೀಡಿದ್ದು, 24 ಗಂಟೆ ಒಳಗಡೆ ವಿಚಾರಣೆಗೆ ಬರಕಾಗುತ್ತೆ. ಅವರು ಬರದೆ ಹೋದ್ರೆ ಕಾನೂನು ಪ್ರಕಾರ ಅರೆಸ್ಟ್ ಮಾಡಬೇಕಾಗುತ್ತೆ. ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೊಟೀಸ್ ಕೂಡ ಕೊಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಸೈಡ್ ಎಫೆಕ್ಟ್.. ಪುನೀತ್ ರಾಜ್ ಕುಮಾರ್ ವ್ಯಾಕ್ಸಿನ್‌ ಫೋಟೋ ವೈರಲ್‌; ತೀವ್ರ ಆಕ್ರೋಶ! 

ಇದೇ ವೇಳೆ, ಸಂತ್ರಸ್ತ ಮಹಿಳೆಯರ ಹೇಳಿಕೆಗಳನ್ನ ರೆಕಾರ್ಡ್ ಮಾಡಲಾಗಿದೆ. ನಿನ್ನೆ ಇನ್ನೊಬ್ಬ ಮಹಿಳೆ ಕೂಡ ದೂರು ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಸರ್ಕಾರ ರಕ್ಷಣೆ ಕೊಡುತ್ತೆ. ಇದರಲ್ಲಿ ಮಹಿಳೆಯರ ಭವಿಷ್ಯ, ಅವರು ಕುಟುಂಬಗಳ ಭವಿಷ್ಯ ಅಡಗಿದೆ. ಹೀಗಾಗಿ ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳೋ ಚಾನ್ಸೇ ಇಲ್ಲ’- ಪೆನ್‌ಡ್ರೈವ್ ಕೇಸ್‌ಗೆ ಗೃಹ ಸಚಿವರಿಂದ ಹೊಸ ಟ್ವಿಸ್ಟ್; ಏನಂದ್ರು?

https://newsfirstlive.com/wp-content/uploads/2024/05/Prajwal-Revanna-JDS-3.jpg

Load More