Advertisment

ಶೀತ, ಕೆಮ್ಮು ಮತ್ತು ಕಫ: ಈ ಮೂರು ಸಮಸ್ಯೆಗಳಿಗೆ ಮನೆಯಲ್ಲಿಯೇ ಇವೆ ರಾಮಬಾಣ

author-image
Gopal Kulkarni
Updated On
ಶೀತ, ಕೆಮ್ಮು ಮತ್ತು ಕಫ: ಈ ಮೂರು ಸಮಸ್ಯೆಗಳಿಗೆ ಮನೆಯಲ್ಲಿಯೇ ಇವೆ ರಾಮಬಾಣ
Advertisment
  • ಅಕಾಲಿಕ ಮಳೆ, ತಂಪು ವಾತಾವರಣ ತರಲಿವೆ ಹಲವು ಸಮಸ್ಯೆಗಳು
  • ಕೆಮ್ಮು, ಕಫ ಮತ್ತು ನೆಗಡಿಗೆ ಮನೆಯಲ್ಲಿಯೇ ಮದ್ದುಗಳನ್ನು ತಯಾರಿಸಿ
  • ಇಂತಹ ಸಮಸ್ಯೆಗಳನ್ನು ನಿಜಕ್ಕೂ ಮನೆಮದ್ದುಗಳು ಗುಣಪಡಿಸುತ್ತವಾ?

ವಾತಾವರಣದಲ್ಲಿ ಈಗ ತುಂಬಾ ಬದಲಾವಣೆ ಕಾಣುತ್ತಿದೆ. ಅಕಾಲಿಕ ಮಳೆಯಿಂದಾಗಿ ಅಲರ್ಜಿಯಂತ ಸಮಸ್ಯೆಗಳು ಬೇಕಾಬಿಟ್ಟಿ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಈ ವಾತಾವರಣದಲ್ಲಿ ತಾಪಮಾನ ಕಡಿಮೆಯಾಗಿ ತಂಪು ಹವಾಮಾನ ನಿರ್ಮಾಣವಾಗಿರುವುದರಿಂದ ನೆಗಡಿ, ಕೆಮ್ಮು ಮತ್ತು ಕಫದಿಂದ ದೊಡ್ಡವರಿಂದ ಚಿಕ್ಕಮಕ್ಕಳು ಕೂಡ ಇಂತಹ ಸಮಸ್ಯೆಗಳಿಂದ ಬಳಲು ಶುರು ಮಾಡುತ್ತಾರೆ. ಕೇವಲ ಇದಿಷ್ಟೇ ಅಲ್ಲ ಅಲರ್ಜಿಯಿಂದಾಗಿ ಜ್ವರದಂತಹ ಸಮಸ್ಯೆಗಳು ಶುರುವಾಗುತ್ತವೆ. ಇಂತಹ ಸಮಯದಲ್ಲಿ ನಾವು ವೈದ್ಯರ ಬಳಿ ಓಡಿ ಹೋಗುವುದು ಸಾಮಾನ್ಯ. ಆದ್ರೆ ನೀವು ಮನೆಯಲ್ಲಿಯೇ ಇರುವ ಅಡುಗೆ ಸಾಮಾನುಗಳಿಂದಲೇ ನಾವು ಇವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.

Advertisment

publive-image

ಜೇನು ತುಪ್ಪ ಹಾಗೂ ಲಿಂಬೆ ಹಣ್ಣು: ಗಂಟಲು ನೋವು ಹಾಗೂ ಕೆಮ್ಮಿಗೆ ದೊಡ್ಡ ರಾಮಬಾಣ ಅಂದ್ರೆ ಅದು ಜೇನುತುಪ್ಪ ಹಾಗೂ ಲಿಂಬೆ ಹಣ್ಣು. ಇವೆರಡು ಈ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತವೆ. ಜೇನುತುಪ್ಪದಲ್ಲಿ ನೈಸರ್ಗಿಕವಾದ ಆ್ಯಂಟಿಬ್ಯಾಕ್ಟಿರಿಯಾ ಅಂಶವಿರುತ್ತದೆ ಹೀಗಾಗಿ ಗಂಟಲು ನೋವು ಸಮಸ್ಯೆ ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಕೆಮ್ಮು ಕಫ ಹಾಗೂ ಗಂಟಲು ನೋವಿನ ಸಮಸ್ಯೆಯನ್ನು ನೀಗಿಸುತ್ತದೆ.

ಇದನ್ನೂ ಓದಿ: ಬೂದುಗುಂಬಳಕಾಯಿ ಬರೀ ಸಾಂಬಾರ್​ಗೆ ಮಾತ್ರವಲ್ಲ : ಜ್ಯೂಸ್ ಮಾಡಿ ಕುಡಿದರೆ ಇದೆ ಹಲವು ಲಾಭ..!

publive-image

ಶುಂಠಿ ಚಹಾ: ಶುಂಠಿ ಚಹಾ ಹಾಗೂ ಶುಂಠಿ ಕಾಫಿಯನ್ನು ಸೇವಿಸುವುದರಿಂದ ಶೀತ ಮತ್ತು ಕಫದಂತಹ ಸಮಸ್ಯೆಗಳು ಅತ್ಯುತ್ತಮ ಆರಾಮವಾಗಿ ಪರಿಹಾರವಾಗುತ್ತವೆ. ಹಸಿಶುಂಠಿಯಲ್ಲಿ ಆಂಟಿಆಕ್ಸಿಡೆಂಟ್ಸ್​​ನಂತಹ ಅಂಶಗಳು ಇರುವುದರಿಂದ ಇದು ಕೆಮ್ಮು ಹಾಗೂ ಕಫಕ್ಕೆ ಒಳ್ಳೆಯ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.

Advertisment

publive-image

ಅರಿಷಿಣ ಮತ್ತು ಹಾಲು: ಅರಿಷಿಣ ಹಲವಾರು ಸಮಸ್ಯೆಗಳಿಗೆ ಮದ್ದು ಎಂದು ನಾವು ಪುರಾತನ ಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ. ನೋಡುತ್ತಾ ಬಂದಿದ್ದೇವೆ. ಇದು ಆಂಟಿ ಮೈಕ್ರೋಬಿಯಾ ಹಾಗೂ ಆಂಟಿ ಇನ್​ಫ್ಲೆಮೆಂಟರಿಯಾಗಿ ಕಾರ್ಯನಿರ್ವಹಿಸುವುದರಿಂದ ಇದು ದೇಹದಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನುಂಟು ಮಾಡುತ್ತದೆ.ಹೀಗಾಗಿ ಹಾಲಿನ ಜೊತೆ ಅರಿಷಿಣ ಹಾಕಿಕೊಂಡು ಕುಡಿಯುವುದರಿಂದ ಅನೇಕ ಲಾಭಗಳಿವೆ, ಇದನ್ನು ಚಿನ್ನದ ಹಾಲು ಎಂದೇ ಪುರಾತನ ಕಾಲದಿಂದಲೂ ಹೇಳುತ್ತಾ ಬರಲಾಗಿದೆ.

ಇದನ್ನೂ ಓದಿ:ಹದಿ ಹರೆಯದಲ್ಲಾಗುವ ಮಾನಸಿಕ ಆಘಾತ; ಇದು ಟೀನೇಜ್​ನ ಮತ್ತೊಂದು ಮುಖದ ಅನಾವರಣ

publive-image

ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸಿ: ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ಬಾಯಿ ಮುಕ್ಕಳಿಸುವುದರಿಂದ ಅನೇಕ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಪ್ರಮುಖವಾಗಿ ಚಳಿಗಾಲ ಹಾಗೂ ಮಳೆಗಾಲದಲ್ಲಿ ಉಂಟಾಗುವ ಗಂಟಲು ನೋವು, ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ದೂರವಾಗುತ್ತವೆ.
ಆವಿಯನ್ನು ತೆಗೆದುಕೊಳ್ಳುವುದು: ಮೂಗು ಬ್ಲಾಕ್ ಆದಾಗ, ಬಿಸಿನೀರಿನ ಆವಿಯನ್ನು ತೆಗೆದುಕೊಳ್ಳುವುದರಿಂದ ಮೂಗಿನ ಸಮಸ್ಯೆಗಳು ಸರಳವಾಗುತ್ತವೆ. ಉಸಿರಾಟದ ಸಮಸ್ಯೆಯನ್ನು ಕೂಡ ಈ ಬಿಸಿನೀರಿನ ಆವಿ ಸರಳಗೊಳಿಸುತ್ತದೆ.

Advertisment

ಹೀಗೆ ಹಲವಾರು ಮನೆಮದ್ದುಗಳು ಶೀತ, ಕೆಮ್ಮು ಕಫದಂತಹ ಸಮಸ್ಯೆಗಳಿಗೆ ರಾಮಬಾಣವಾಗಿವೆ. ಆದ್ರೆ ಪ್ರತಿಬಾರಿಯೂ ಅಲ್ಲ. ಹವಾಮಾನ ಬದಲಾದಂತೆ ಆರೋಗ್ಯದಲ್ಲಿ ಏರುಪೇರು ಕಂಡಾಗ ಈ ರೀತಿಯ ಮನೆಮದ್ದುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ನಿರಾಳತೆಯನ್ನು ತಂದುಕೊಡುತ್ತವೆಯೇ ಹೊರತು. ಸಂಪೂರ್ಣವಾಗಿ ಗುಣಮುಖವಾಗುವುದು ಕಡಿಮೆ ಸಾಧ್ಯತೆ ಇದೆ. ಹೀಗಾಗಿ ಆರಂಭಿಕ ಹಂತದಲ್ಲಿ ಸಮಸ್ಯೆಗಳು ಕಂಡು ಬಂದಾಗ ನೀವು ಈ ಮನೆಮದ್ದುಗಳನ್ನು ಟ್ರೈ ಮಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment