ಬಾಂಗ್ಲಾದೇಶದಲ್ಲಿ ಹಿಂದೂಗಳೇ ಟಾರ್ಗೆಟ್‌.. ಬರೋಬ್ಬರಿ 54 ಕಡೆ ಚಿತ್ರಹಿಂಸೆ ಕೊಟ್ಟು ಕೊಲೆ; ಏನೇನಾಯ್ತು?

author-image
Gopal Kulkarni
Updated On
ಬಾಂಗ್ಲಾದೇಶದಲ್ಲಿ ಹಿಂದೂಗಳೇ ಟಾರ್ಗೆಟ್‌.. ಬರೋಬ್ಬರಿ 54 ಕಡೆ ಚಿತ್ರಹಿಂಸೆ ಕೊಟ್ಟು ಕೊಲೆ; ಏನೇನಾಯ್ತು?
Advertisment
  • ಹಿಂದೂಗಳಿಗೆ ಪಾಲಿಗೆ ನರಕ ಸದೃಶ್ಯವಾಗಿರುವ ಬಾಂಗ್ಲಾದೇಶದ ಹಿಂಸಾಚಾರ
  • ಉದ್ರಿಕ್ತರಿಂದ 54 ಕಡೆ ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ಭೀಕರ ದಾಳಿ
  • ಮನೆ ಲೂಟಿ, ಮಂದಿರಗಳಿಗೆ ಬೆಂಕಿ, ಇಬ್ಬರು ಕೌನ್ಸಲರ್​ಗಳ ಭಯಾನಕ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಸದ್ಯ ಅರಾಜಕತೆ ಅನ್ನೋದು ಅಕ್ಷರಶಃ ಹಾಸಿ ಹೊದ್ದುಕೊಂಡು ಮಲಗಿದೆ. ಆರಂಭದಲ್ಲಿ ಮೀಸಲಾತಿ ವಿರುದ್ಧ ಶುರುವಾದ ವಿದ್ಯಾರ್ಥಿಗಳ ಪ್ರತಿಭಟನೆ ಈಗ ದಿನಕ್ಕೊಂದು ಮಗ್ಗಲು ಬದಲಿಸುತ್ತಿದೆ. ಮೀಸಲಾತಿಯಿಂದ ಹಸೀನಾ ಕ್ಷಮೆವರೆಗೆ ಹಸೀನಾ ಕ್ಷಮೆಯಿಂದ ರಾಜೀನಾಮೆವರೆಗೆ, ರಾಜೀನಾಮೆಯಿಂದ ಪ್ಯಾಲೆಸ್ ಲೂಟಿ, ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಬೀರ್ ರೆಹಮಾನ್ ಪ್ರತಿಮೆಯ ಮೇಲೆ ಮೂತ್ರ ವಿಸರ್ಜನೆ ಮಾಡುವವರೆಗೆ ಸಾಗಿ ಈ ಬೇರೆ ರೂಪಕ್ಕೆ ತಿರುಗಿದೆ.

ಅಲ್ಲಿಂದ ಈಗ ಪ್ರತಿಭಟನೆಯ ದಿಕ್ಕು ಮತ್ತೊಂದು ಮಜಲಿಗೆ ಸರಿದಿದೆ. ಹಕ್ಕಿಗಾಗಿ, ಮೀಸಲಾತಿಗಾಗಿ ಶುರುವಾಗಿದ್ದ ಬೆಂಕಿ ಕಿಡಿ ಬಾಂಗ್ಲಾವನ್ನು ಸುಡುತ್ತಾ ಸುಡುತ್ತಾ, ಈಗ ಕೋಮುದಳ್ಳುರಿಯಾಗಿ ಪರಿವರ್ತಿತಗೊಂಡಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಹುಡುಕಿ ಹುಡುಕಿ ಹಿಂಸೆ ನೀಡಲಾಗುತ್ತಿದೆ. ಹಿಂದೂ ದೇವಸ್ಥಾನಗಳು ಬೆಂಕಿಗೆ ಆಹುತಿಯಾಗುತ್ತಿವೆ. ಹಿಂದೂಗಳು ಕಣ್ಣೀರಿಟ್ಟು ಕಾಪಾಡಿ ಎಂದು ಗೋಳಾಡುವ ವಿಡಿಯೋಗಳು ಈಗ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ:ನೇಪಾಳದಲ್ಲಿ ಮತ್ತೊಂದು ಭಯಾನಕ ದುರಂತ.. ಹೆಲಿಕಾಪ್ಟರ್‌ ಪತನ; ನಾಲ್ವರ ದಾರುಣ ಸಾವು; ಆಗಿದ್ದೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನ, ಹಿಂದೂ ದೇವಸ್ಥಾನಗಳನ್ನ ಹುಡುಕಿ ಹುಡುಕಿ ದಾಳಿ ಮಾಡಲಾಗುತ್ತಿದೆ. ನೆರೆರಾಷ್ಟ್ರದಲ್ಲಿ ಅಲ್ಪಸಂಖ್ಯಾತರಾಗಿ ಜೀವನ ಸಾಗಿಸುತ್ತಿರುವವರ ಬಾಳಿಗೆ ಈಗ ಸುರಕ್ಷತೆ ಇಲ್ಲದಂತಾಗಿದೆ. ಮಧ್ಯಂತರ ಸರ್ಕಾರ ಜವಾಬ್ದಾರಿಯನ್ನು ತೆಗೆದುಕೊಂಡಿರು ಸೇನೆಯೂ ಕೂಡ ನಿಸ್ಸಾಹಯಕವಾಗಿ, ಈ ದಾಳಿಯ ಭಾಗದ ಒಂದು ಕೊಂಡಿಯೇ ಇರಬಹುದೇನೋ ಅಂತ ಸಂಶಯ ಬರುವಹಾಗಿ ಕೈಕಟ್ಟಿ ಕೂತಿದೆ

ಇಬ್ಬರ ಹಿಂದೂ ಕೌನ್ಸಲರ್​ಗಳ ಹತ್ಯೆ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸದ್ಯ ಇಬ್ಬರು ಹಿಂದೂ ಕೌನ್ಸಲರ್​ಗಳ ಹತ್ಯೆಯಾಗಿದೆ. ಪರಶುರಾಮ್ ಥಾನಾ ಆವಾಮಿ ಲೀಗ್​ನ ಕೌನ್ಸಲರ್ ಹರಧನ್ ರಾವ್​ ಅವರನ್ನು ಬಾಂಗ್ಲಾದ ರಂಗಪುರ್​ ಜಿಲ್ಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಅದೇ ಜಿಲ್ಲೆಯಲ್ಲಿನ ಮತ್ತೊಬ್ಬ ಕೌನ್ಸಲರ್ ಕಾಜಲ್ ರಾಯ್ ಅನ್ನೋರನ್ನು ಕೂಡ ಹೀಗೆಯೇ ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದ ಚುಕ್ಕಾಣಿ ಹಿಡಿದ ನೊಬೆಲ್ ಪುರಸ್ಕೃತ.. ಮೊಹಮ್ಮದ್ ಯೂನಸ್ ಹಿನ್ನೆಲೆ ಗೊತ್ತಾ?

ಗಾಯಕ ರಾಹುಲ್ ಆನಂದ್​ ಮನೆ ಮೇಲೆ ದಾಳಿ

publive-image
ಢಾಕಾದಲ್ಲಿ ವಾಸವಿರುವ ಖ್ಯಾತ ಜಾನಪದ ಹಾಡುಗಾರ ರಾಹುಲ್ ಆನಂದ್​ ಅವರ ಮನೆ ಮೇಲೆಯೂ ದಾಳಿಯಾಗಿದೆ. ಮನೆಯಲ್ಲಿದ್ದವರನ್ನು ಹಿಂಸಿಸಲಾಗಿದೆ. ಮನೆಯನ್ನು ಲೂಟಿ ಮಾಡಿದ್ದಲ್ಲದೇ, ಮನೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ. ಗಾಯಕ ರಾಹುಲ್ ಆನಂದ್ ಅವರ ಮನೆಗೆ 140 ವರ್ಷಗಳ ಇತಿಹಾಸವಿದೆ ಇದನ್ನು ದೇಶದ ಸಾಂಸ್ಕೃತಿಕ ಕೇಂದ್ರವೆಂದೇ ಬಣ್ಣಿಸಲಾಗುತ್ತಿತ್ತು. ಕಳೆದ ವರ್ಷವಷ್ಟೇ ಈ ಮನೆಗೆ ಫ್ರಾನ್ಸ್​ನ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರೋನ್ ಬಂದು ಭೇಟಿ ನೀಡಿದ್ದರು.
ಇಂಥಹ ಇತಿಹಾಸವಿರುವ ಮನೆಗೆ ನುಗ್ಗಿದ ಕಿಡಿಗೇಡಿಗಳು ಅವರ ಮನೆಯ ಗೇಟ್​ ಮುರಿದು ಹಾಕಿದ್ದಾರೆ. ಕೈಯಲ್ಲಿ ಏನು ಸಿಗುತ್ತದೆಯೋ ಅದನ್ನು ಹೊತ್ತುಕೊಂಡು ಓಡಿ ಹೋಗಿದ್ದಾರೆ. ಕೊನೆಗೆ ಇಡೀ ಮನೆಗೆ ಬೆಂಕಿಯಿಟ್ಟಿದ್ದಾರೆ. ಅದೃಷ್ಟವಶಾತ್ ರಾಹುಲ್ ಆನಂದ್ ತಮ್ಮ ಕುಟುಂಬದೊಂದಿಗೆ ಮನೆಯನ್ನು ತೊರೆದು ಬೇರೆಕಡೆಗೆ ಹಾರಿದ್ದರಿಂದ ಬಚಾವ್ ಆಗಿದ್ದಾರೆ. ಆದ್ರೆ 140 ವರ್ಷದಿಂದ ಈ ಮಣ್ಣಿನ ಕಥೆ ಹೇಳುತ್ತಿದ್ದ ಆ ನೆಲದ ಸಾಂಸ್ಕೃತಿಕ ಗುರುತೊಂದು ಬೆಂಕಿಯಲ್ಲಿ ಬೆಂದು ಹೋಗಿದೆ.

ಇಸ್ಕಾನ್ ಮಂದಿರದ ಮೇಲೆ ದಾಳಿ

publive-image
ಇತ್ತ ಬಾಂಗ್ಲಾದೇಶದ ಕುಲ್ವಾನ್ ಭಾಗದಲ್ಲಿಯೂ ಕೂಡ ಹಿಂಸಾಚಾರ ಮಿತಿಮೀರಿದೆ. ಅಲ್ಲಿಯೂ ಕೂಡ ಹಿಂದೂಗಳ ದೇವಸ್ಥಾನವೇ ಟಾರ್ಗೆಟ್ ಆಗಿದೆ. ನಗರದಲ್ಲಿರುವ ಇಸ್ಕಾನ್ ಮಂದಿರಕ್ಕೆ ನುಗ್ಗಿದ ಹಿಂಸಾವಿನೋದಿಗಳು, ಮಂದಿರಕ್ಕೆ ಬೆಂಕಿಯಿಟ್ಟಿದ್ದಾರೆ. ಮಂದಿರದಲ್ಲಿದ್ದ ಮೂರ್ತಿಗಳನ್ನು ಪುಡಿ ಪುಡಿ ಮಾಡಿ ಹಾಕಿದ್ದಾರೆ, ಈ ಬಗ್ಗೆ ಮಾಹಿತಿ ನೀಡಿರುವ ಇಸ್ಕಾನ್​ನ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ, ನನಗೆ ಈಗಾಗಲೇ ಮಂದಿರಕ್ಕೆ ಬೆಂಕಿಯಿಟ್ಟ ಸುದ್ದಿ ಬಂದಿದೆ, ಭಗವಾನ್ ಜಗನ್ನಾಥನ ಮೂರ್ತಿಯನ್ನು ಕೂಡ ಧ್ವಂಸಗೊಳಿಸಲಾಗಿದೆ. ಬಲದೇವ ಹಾಗೂ ಸುಭದ್ರಾ ಮೂರ್ತಿಗಳನ್ನೂ ಕೂಡ ಸುಡಲಾಗಿದೆ, ಅಲ್ಲಿದ್ದ ಮೂವರು ಭಕ್ತರು ಅದೃಷ್ಟವಶಾತ್ ಹೇಗೋ ಪಾರಾಗಿದ್ದಾರೆ, ಬಾಂಗ್ಲಾದಲ್ಲಿ ಸದ್ಯ ಹಿಂದೂಗಳಿಗೆ ದೊಡ್ಡ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂಸಾಚಾರ ನಡೆದ ಪಟ್ಟಿ ಬಿಡುಗಡೆ ಮಾಡಿದ ಬಾಂಗ್ಲಾ ಹಿಂದೂಸ್
ಇನ್ನೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ, ಹಿಂದೂ ದೇವಾಲಯಗಳ ಮೇಲೆ ನಡೆದ ಭೀಕರ ದಾಳಿಯ ಪಟ್ಟಿಯನ್ನು ವಾಯ್ಸ್ ಆಫ್​ ಬಾಂಗ್ಲಾದೇಶದ ಹಿಂದೂಸ್ ಅನ್ನೋ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ ಕೇವಲ ಐದೇ ಗಂಟೆಗಳಲ್ಲಿ 54 ಕಡೆ ಭೀಕರ ದಾಳಿಗಳು ನಡೆದಿವೆ, ಈ ಹತ್ಯಾಕಾಂಡ ಇನ್ನೂ ಮುಂದುವರಿದಿದೆ ಎಂದು ಎಕ್ಸ್ ಖಾತೆಯಲ್ಲಿ ಬಾಂಗ್ಲಾ ಹಿಂದೂಸ್​ ಅಳುವು ತೋಡಿಕೊಂಡಿದೆ. ಅವರು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ದಾಳಿಗೊಳಗಾದ ಪ್ರಮುಖ ಕುಟುಂಬಗಳು ಹೀಗಿವೆ.

ಕುಲ್ನಾದ ಶ್ಯಾಮ್ ಕುಮಾರ್ ದಾಸ್, ಸ್ವಜನ್ ಕುಮಾರ್ ದಾಸ್, ಬೀಮನ್ ಬಿಹಾರಿ ಅಮಿತ್, ಯುತ್​ ಯುನಿಟಿ ಅಧ್ಯಕ್ಷರಾದ ಸರ್ಕಾರ್ ರಿಂಕು ಮನೆ, ಜಯಂತ್ ಗೇನ್ ಅಮ್ತಾಲಿ ಬನಿಸಂತಾ ಹೀಗೆ ಹಲವಾರು ಮನೆಗಳಿಗೆ ನುಗ್ಗಿ ದಾಳಿ ನಡೆಸಿ ಅಲ್ಲಿದ್ದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಾಕಲಾಗಿದೆ ಎಂದು ವಾಯ್ಸ್ ಆಫ್ ಬಾಂಗ್ಲಾದೇಶ ಹಿಂದೂಸ್​ಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದೆ.

publive-image

ಕೈ ಮುಗಿದು ಕಾಪಾಡಿ ಎನ್ನುತ್ತಿರು ಹಿಂದೂಗಳು


">August 5, 2024

ಪಿರಜೋಪುರಿ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಯುವತಿಯೊಬ್ಬಳು ಕಣ್ಣೀರುಡುತ್ತಲೇ ವಿವರಿಸಿದ್ದಾಳೆ. ರಾಜು ದಾಸ್ ಅನ್ನೋ ಬಾಂಗ್ಲಾದಲ್ಲಿ ನೆಲಿಸಿರುವ ಹಿಂದೂ ಒಬ್ಬರು ಅದನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.


">August 5, 2024


ಬೋಗ್ರಾ ಜಿಲ್ಲೆಯಲ್ಲಿ ಹಿಂದೂಗಳ ಮನೆಗೆ ಬೆಂಕಿ
ಇನ್ನು ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿದೆ ಬೋಗ್ರಾ ಜಿಲ್ಲೆಯ ಗಬ್ತಿಲ್ಲಾ ಉಪ್ಜಿಲ್ಲಾ ಅನ್ನುವಲ್ಲಿ ಹಿಂದೂಗಳಿದ್ದ ಮನೆಗೆ ಬೆಂಬಿ ಇಡಲಾಗಿದೆ.

ಚಿತ್ತಗೊಂಗದಲ್ಲಿ ಶನಿದೇವರ ಮಂದಿರಕ್ಕೆ ಬೆಂಕಿ
ಬಾಂಗ್ಲಾದೇಶದ ಚಿತ್ತಗೊಂಗದಲ್ಲಿರುವ ಶನಿದೇವರ ಮಂದಿರಕ್ಕೆ ಕಿರಾತಕರು ಬೆಂಕಿಯಿಟ್ಟು ವಿಕೃತ ಆನಂದವನ್ನು ಅನುಭವಿಸಿದ್ದಾರೆ. ಮೂರ್ತಿ ಭಂಜನೆ ಮಂದಿರಕ್ಕೆ ಬೆಂಕಯಿಡುವುದು ಈಗ ಬಾಂಗ್ಲಾದೇಶದಲ್ಲಿ ಎಲ್ಲೆಂದರಲ್ಲಿ ಕಾಣುತ್ತಿವೆ. ಇದು 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದಂತಹ ದಾಳಿಯನ್ನು ನೆನಪಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment