/newsfirstlive-kannada/media/post_attachments/wp-content/uploads/2024/09/KLB_HONEY_TRAP.jpg)
ಕಲಬುರಗಿ ಸಿಟಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಸಕ್ರಿಯವಾಗಿದೆಯಾ ಎನ್ನುವ ಅನುಮಾನ ಮೂಡಿದೆ. ಅಮಾಯಕ ಯುವತಿಯರನ್ನ ಬಳಕೆ ಮಾಡಿಕೊಂಡು ದಂಧೆ ನಡೆಸಲಾಗುತ್ತಿತ್ತು ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಇದನ್ನೂ ಓದಿ: ದೇಶದ ಅತಿದೊಡ್ಡ ಗಣೇಶನ ವಿಗ್ರಹ.. ಎಷ್ಟು ಅಡಿ, ಎಷ್ಟು ಟನ್ ಇದೆ, ಇದರ ವಿಶೇಷತೆ ಏನು?
ಹನಿಟ್ರ್ಯಾಪ್ ಗ್ಯಾಂಗ್ವೊಂದು ಯುವತಿಯರನ್ನ, ಮಹಿಳೆಯರನ್ನು ಸೋಶಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಳ್ಳುತ್ತಿತ್ತು. ಬಳಿಕ ಅವರ ಮನೆಯ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಗ್ಯಾಂಗ್ ಆಟವಾಡಲು ಶುರುಮಾಡುತ್ತಿತ್ತು. ಈ ಯುವತಿಯರನ್ನ ಬಳಕೆ ಮಾಡಿ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಲಕ್ಷ, ಲಕ್ಷ ಹಣವನ್ನು ಗ್ಯಾಂಗ್ ವಸೂಲಿ ಮಾಡುತ್ತಿತ್ತು.
ಇದನ್ನೂ ಓದಿ:ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ?
ಈ ಮಾಹಿತಿಯನ್ನು ಹನಿಟ್ರ್ಯಾಪ್ಗೆ ಒಳಗಾಗಿದ್ದ ಯುವತಿಯರೇ ಬಹಿರಂಗಗೊಳಿಸಿದ್ದಾರೆ. ಸಂತ್ರಸ್ತೆಯರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದ 10ಕ್ಕೂ ಹೆಚ್ಚು ಯುವತಿಯರನ್ನ ಇಟ್ಟುಕೊಂಡು ಗ್ಯಾಂಗ್ ಹನಿಟ್ರ್ಯಾಪ್ ಮಾಡುತ್ತಿದೆ. ಹಣದ ಆಸೆ ತೋರಿಸಿ ಯುವತಿಯರನ್ನ ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಕಲಬುರಗಿಯ ದಲಿತ ಸೇನೆ ಹೆಸರಲ್ಲಿ ದರ್ಬಾರ್ ನಡೆಯುತ್ತಿದ್ದು ಸದ್ಯ ಸಂತ್ರಸ್ಥೆಯಿಂದಲೇ ಗ್ಯಾಂಗ್ ವಿರುದ್ಧ ದೂರು ದಾಖಲು ಆಗಿದೆ. ದಲಿತ ಸೇನೆಯ ಹಣಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ ಸೇರಿ ಒಟ್ಟು 8 ಜನರ ವಿರುದ್ಧ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ