newsfirstkannada.com

ಎವರೆಸ್ಟ್​, MDH ಪ್ರಾಡಕ್ಟ್​​ನಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ಸ್; 4 ಮಸಾಲೆ ಪೌಡರ್​​ಗಳು ಬ್ಯಾನ್​..!

Share :

Published April 22, 2024 at 2:28pm

Update April 22, 2024 at 2:29pm

    ಭಾರತದ ಜನಪ್ರಿಯ ಮಸಾಲೆ ಪೌಡರ್​ ವಿದೇಶದಲ್ಲಿ ಬ್ಯಾನ್

    ಆರೋಗ್ಯದ ಕಾಳಜಿಯಿಂದ ಬ್ಯಾನ್ ಮಾಡಿದ ಈ ದೇಶ

    ಅಡುಗೆಗೆ ವಿಪರೀತ ಮಸಾಲೆ ಬಳಸ್ತಿದ್ದೀರಾ? ಹುಷಾರ್!

ನೀವು ಅಡುಗೆಗೆ ಬಳಸುವ ಸ್ಪೈಸಿ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಾ? ಎಂಬ ಪ್ರಶ್ನೆಗೆ ‘ಇಲ್ಲ, ಹಾನಿಕಾರಕ’ ಎಂಬ ಉತ್ತರ ಅನೇಕರದ್ದು. ಆದರೂ ಕೆಲವು ಬ್ರಾಂಡ್​ಗಳ ಮಸಾಲೆ ಪದಾರ್ಥಗಳ ಮೇಲೆ ನಮಗೆ ತುಂಬಾನೇ ಪ್ರೀತಿ. ಇದೀಗ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದ ಬೆನ್ನಲ್ಲೇ, ಭಾರತದ ಜನಪ್ರಿಯ ಎರಡು ರೆಡಿಮೇಡ್ ಮಸಾಲೆ ಕಂಪನಿಗಳ ಪ್ರಾಡೆಕ್ಟ್​ಗಳು ವಿದೇಶದಲ್ಲಿ ಬ್ಯಾನ್ ಆಗಿದೆ.

​ತನ್ನ ನಾಗರಿಕರ ಆರೋಗ್ಯ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹಾಂಗ್​ ಕಾಂಗ್ ಸರ್ಕಾರ, ​MDH ಮತ್ತು ಎವರೆಸ್ಟ್​ಗಳ ಸ್ಪೈಸಿ ಪ್ರಾಡಕ್ಟ್​​ಗಳನ್ನು ಬ್ಯಾನ್ ಮಾಡಿದೆ. ಹಾಂಗ್​ ಕಾಂಗ್​​ನ ಫುಡ್​ ಸೇಫ್ಟಿ ವಾಚ್​​ಡಾಗ್ (Food safety watchdog) ಬ್ಯಾನ್ ಮಾಡಿ ಆದೇಶ ನೀಡಿದೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಆಘಾತ; ಕೆಲಸ ಕಳೆದುಕೊಂಡ 25,000 ಶಿಕ್ಷಕರು..!

ಎಂಡಿಹೆಚ್​ ಪ್ರಾಡೆಕ್ಟ್​​ನ ಮೂರು ಪೌಡರ್​​ಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಅಂಶಗಳು ಪತ್ತೆಯಾಗಿವೆ. ಮದ್ರಾಸ್ ಕರಿ ಪೌಡರ್ (Madras Curry Powder), ಮಿಕ್ಸ್ಡ್​ ಮಸಾಲಾ ಪೌಡರ್ (Mixed Masala Powder), ಸಾಂಬರ್ ಮಸಾಲ(Sambhar Masala)ದಲ್ಲಿ ಕ್ರಿಮಿನಾಶಕಕ್ಕೆ ಬಳಸುವ ಕೆಮಿಕಲ್ಸ್ ಪತ್ತೆಯಾಗಿದೆ. ಜೊತೆಗೆ ಎವರೆಸ್ಟ್​ನ ಫಿಶ್ ಕರಿ ಮಸಾಲಾದಲ್ಲೂ Ethylene oxide ಅಂಶ ಪತ್ತೆಯಾಗಿದೆ ಎಂದು ಆಹಾರ ಸಂಸ್ಕರಣಾ ಕೇಂದ್ರ (Centre for Food Safety) ಏಪ್ರಿಲ್ ಐದರಂದು ಘೋಷಣೆ ಮಾಡಿತ್ತು.

ಇದನ್ನೂ ಓದಿಆ 2 ಓವರ್​​ಗಳಲ್ಲಿ ಪಂದ್ಯದ ಗತಿಯೇ ಬದಲಾಯ್ತು.. RCB ವಿರೋಚಿತ ಸೋಲಿಗೆ 5 ಕಾರಣಗಳು..!

ಈ ಬಗ್ಗೆ ವೈಜ್ಞಾನಿಕ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ, ಹಾಂಗ್​ ಕಾಂಗ್ ಆಹಾರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ. ಹಾಂಗ್ ಕಾಂಗ್​​ನಲ್ಲಿ ಭಾರತದ ಎವರೆಸ್ಟ್ ಮತ್ತು ಎಂಡಿಹೆಚ್​ ಪ್ರಾಡೆಕ್ಟ್​​ಗಳನ್ನು ನಿಷೇಧ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎವರೆಸ್ಟ್​, MDH ಪ್ರಾಡಕ್ಟ್​​ನಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ಸ್; 4 ಮಸಾಲೆ ಪೌಡರ್​​ಗಳು ಬ್ಯಾನ್​..!

https://newsfirstlive.com/wp-content/uploads/2024/04/DMH.jpg

Load More