Advertisment

ಸ್ಮಶಾನಕ್ಕೆ ಹೋದಾಗ ಕೈ ಹಿಡಿದ 8 ತಿಂಗಳ ಮಗು.. ದಿಢೀರ್ ಆಸ್ಪತ್ರೆಗೆ ಶಿಫ್ಟ್‌; ಆಮೇಲೆ ನಡೆದಿದ್ದು ಘೋರ ದುರಂತ!

author-image
Gopal Kulkarni
Updated On
ಸ್ಮಶಾನಕ್ಕೆ ಹೋದಾಗ ಕೈ ಹಿಡಿದ 8 ತಿಂಗಳ ಮಗು.. ದಿಢೀರ್ ಆಸ್ಪತ್ರೆಗೆ ಶಿಫ್ಟ್‌; ಆಮೇಲೆ ನಡೆದಿದ್ದು ಘೋರ ದುರಂತ!
Advertisment
  • ಅಂತ್ಯ ಸಂಸ್ಕಾರದ ವೇಳೆ ಸಂಬಂಧಿಕರ ಕೈ ಗಟ್ಟಿಯಾಗಿ ಹಿಡಿದ ಮಗು
  • ಮಗು ಬದುಕಿದ ಖುಷಿಯಲ್ಲಿ ಆಸ್ಪತ್ರೆಗೆ ಧಾವಿಸಿದ ಕುಟುಂಬಕ್ಕೆ ಶಾಕ್​
  • ಹೆತ್ತವರ ಒಡಲಲ್ಲಿ ಹುಟ್ಟಿದ ಆ ಒಂದು ಭರವಸೆಯನ್ನು ಸುಳ್ಳಾಯ್ತು

ಬದುಕು ವೈಚಿತ್ರ್ಯಗಳ ಆಗರ. ಏನೇನೋ ನಡೆದು, ಏನೇನೋ ಘಟಿಸುತ್ತವೆ. ಅದರ ಆಟಗಳನ್ನು ನಾವು ಬೆರಗುಗಣ್ಣಿನಿಂದ ನೋಡಬೇಕು ಅಷ್ಟೆ. ಯಾವತ್ತೂ ಕೊಟ್ಟು ಕಿತ್ತುಕೊಳ್ಳುವ ಆಟವೇ ಬದುಕಿಗೆ ಇಷ್ಟವೋ ಏನೋ ಅನ್ನುವಂತಹ ಒಂದು ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ

Advertisment

ಬ್ರಿಜಿಲ್​ನ ಕೊರಿಯ್ ಪಿಂಟೋದಲ್ಲಿ ಕೈ ಎಂಬ ಎಂಟು ತಿಂಗಳ ಮಗುವೊಂದು ತೀರಿ ಹೋಗಿತ್ತು. ಮಗುವಿನ ಅಂತ್ಯ ಸಂಸ್ಕಾರಕ್ಕೆ ಎಂದು ಸ್ಮಶಾನಕ್ಕೆ ಕುಟುಂಬ ಹಾಗೂ ಸಂಬಂಧಿಕರು ಹೋಗಿದ್ದಾರೆ. ಕೈರಾ ಶವಪೆಟ್ಟಿಗೆಯಲ್ಲಿದ್ದಾಗ ಅವಳ ಕೈಯನ್ನು ಸಂಬಂಧಿಕರೊಬ್ಬರು ಹಿಡಿದಿದ್ದಾರೆ. ಕೂಡಲೇ ಮಗುವು ಕೂಡ ಅವರ ಕೈಯನ್ನು ಗಟ್ಟಿಯಾಗಿ ಹಿಡಿದಾಗ ಎಲ್ಲರಲ್ಲೂ ಏನೋ ಸಂತಸ, ಭರವಸೆಯ ಭಾವಗಳು ಜಿಣುಗಿವೆ. ಮಗು ಜೀವಂತವಾಗಿರುವದನ್ನು ಅರಿತ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇದನ್ನೂ ಓದಿ:ಮ್ಯಾಕ್​ಡೊನಾಲ್ಡ್ಸ್​ ತಿಂಡಿ ತಿನ್ನುವ ಮುನ್ನ ಎಚ್ಚರ! ಅಮೆರಿಕಾದಲ್ಲಿ 1 ಬಲಿ, ಡಜನ್ ಜನರ ಒದ್ದಾಟ, ಏನಾಯ್ತು?

ಆದ್ರೆ ಆರಂಭದಲ್ಲಿ ಮಗು ಬದುಕಿಲ್ಲ ಎಂದು ಹೇಳಿದ ವೈದ್ಯರು. ಪರೀಕ್ಷೆಗೆ ಒಳಪಡಿಸಿದಾಗ.ಮಗುವಿನ ಪಲ್ಸ್​ ಹಾಗೂ ಆಕ್ಸಿಜನ್ 84 ಪರ್ಸೆಂಟ್ ಇರುವುದು ಖಾತ್ರಿಯಾಗಿದೆ. ಕೂಡಲೇ ಐಸಿಯುಗೆ ಮಗುವನ್ನು ಸೇರಿಸಲಾಗಿದೆ. ಕ್ರಿಟಿಕಲ್ ಕಂಡಿಷನ್​ನಲ್ಲಿದ್ದ ಮಗುವನ್ನು ಉಳಿಸಲು ವೈದ್ಯರು ತಮ್ಮ ಎಲ್ಲ ಶ್ರಮವನ್ನೂ ಪಣಕ್ಕಿಟ್ಟು ಹೋರಾಡಿದ್ದಾರೆ. ಆದ್ರೆ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಎಂಟು ತಿಂಗಳಿನ ಕಂದಮ್ಮ ಸೋತು ಹೋಗಿದೆ. ಕೊನೆಗೆ ವಿಧಿಯೇ ಗೆದ್ದು ಕೇಕೆ ಹಾಕಿದೆ.

Advertisment

ಇದನ್ನೂ ಓದಿ:ಒಂದೇ ವಾರದಲ್ಲಿ 90 ಹುಸಿ ಬಾಂ*ಬ್ ಬೆದರಿಕೆ; ಈ ನೀಚತನದ ಹಿಂದಿರುವ ಆ ಅದಮ್ ಲಾಂಜಾ ಯಾರು?

ಮೊದಲೇ ಕುಸಿದು ಹೋಗಿದ್ದ ಕೈರಾ ತಂದೆಗೆ ಮಗು ಮರಳಿ ಮೃತಪಟ್ಟಿದೆ ಎಂದು ತಿಳಿದಾಗ ಸಿಡಿಲು ಬಡಿದಂತೆಯೇ ಆಗಿದೆ. ಘಟನೆ ಬಗ್ಗೆ ಮಾತನಾಡಿದ ಮಗುವಿನ ತಂದೆ ಕ್ರಿಸ್ಟಿಯಾನೋ. ನಾವು ಮೊದಲೇ ಮಗು ಕಳೆದುಕೊಂಡ ದುಃಖದಲ್ಲಿ ಹೈರಾಣಾಗಿ ಹೋಗಿದ್ದೇವು. ಯಾವಾಗ ಮಗು ಜೀವಂತವಾಗಿದೆ ಎಂದು ಗೊತ್ತಾಯಿತೋ ಆವಾಗ ಒಂದು ಭರವಸೆಯ ಕಿರಣ ಬದುಕಲ್ಲಿ ಮೂಡಿತ್ತು. ಆದ್ರೆ ವಿಧಿಯಾಟದ ಮುಂದೆ ನಾವು ಸೋತೆವು ಈಗ ಎಲ್ಲವೂ ಮುಗಿದು ಹೋಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment