Advertisment

ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ; ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ

author-image
Veena Gangani
Updated On
ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ; ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ
Advertisment
  • ಕೋರಮಂಗಲದ ಪಬ್​ನಲ್ಲಿ ಸ್ನೇಹಿತರ ಜೊತೆ ಯುವತಿ ಪಾರ್ಟಿ
  • NMG ಜಂಕ್ಷನ್​ನಲ್ಲೇ ಕಾರು ಬಿಟ್ಟು ಬೈಕ್​ನಲ್ಲಿ ಹೋಗಿದ್ದ ಯುವತಿ
  • 40 ಜನರ ಟೀಂ ರಚನೆ ಮಾಡಿ ಆರೋಪಿಗಾಗಿ ಪೊಲೀಸರ ಶೋಧ

ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್ ಇಲ್ಲ? ಎಂಬ ಪ್ರಶ್ನೆ ಮತ್ತೆ ಎದ್ದಿದೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೋಗುವ ವೇಳೆ ಅಪರಿಚಿತ ಬೈಕ್​ ಸವಾರ ಅತ್ಯಾಚಾರ ಎಸೆಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹೆಚ್​ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. publive-image

Advertisment

ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ.. ನಿನ್ನೆ ರಾತ್ರಿ ಸುಮಾರು 1-1.30ರ ಸಮಯದಲ್ಲಿ ಈ ಘಟನೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬೈಕ್​ನಲ್ಲಿ ಓರ್ವ ಅಪರಿಚಿತನಿಂದ ಲಿಫ್ಟ್ ತೆಗೆದುಕೊಂಡಾಗ ಲೈಂಗಿಕ ದೌರ್ಜನ್ಯ ನಡೆದಿದೆ ಅಂತಾ ಗೊತ್ತಾಗಿದೆ. ಆತನಿಂದಲೇ ಅತ್ಯಾಚಾರ ಆಗಿರೋ ಶಂಕೆ ಇದೆ. ಈಗಾಗಲೇ ಯುವತಿಯ ಕುಟುಂಬಸ್ಥರು ಸಂಬಂಧಿಕರು, ಸ್ನೇಹಿತರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಪರಿಚಿತ ವ್ಯಕ್ತಿಯಿಂದ ಆಕೆ ಬೈಕ್​ನಲ್ಲಿ ಡ್ರಾಪ್ ತೆಗೆದುಕೊಂಡಿರೋದು ನಿಜ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗ್ತಿದೆ ಎಂದು ತಿಳಿಸಿದ್ದಾರೆ.

publive-image

ನಿನ್ನೆ ರಾತ್ರಿ ಆಗಿದ್ದೇನು?

ಯುವತಿಯೊಬ್ಬಳು ನಿನ್ನೆ ಕೋರಮಂಗಲದ ಪಬ್​ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟಿದ್ದಳು. ಈ ವೇಳೆ ಎಂಪೈರ್ ಸರ್ಕಲ್ ಬಳಿ ಕಾರು ಮತ್ತು ಆಟೋ ನಡುವೆ ಅಪಘಾತ ಆಗಿದೆ. ಆಗ ಆಟೋ ಚಾಲಕ ಹಾಗೂ ಕಾರು ಚಾಲಕನ ಮಧ್ಯೆ ಗಲಾಟೆ ಆಗಿದೆ. ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಹೊಯ್ಸಳ ವಾಹನ ಬಂದಿದೆ. ಆಗ ಯುವತಿ ಅಲ್ಲಿಂದ ಅಪರಿಚಿತ ಬೈಕ್​ಗೆ ಕೈಮಾಡಿ ಲಿಫ್ಟ್ ಪಡೆದಿದ್ದಾಳೆ. ನಂತರ ಮಾರ್ಗ ಮಧ್ಯೆ ಇಳಿದು ಮತ್ತೊಂದು ಬೈಕ್​ನಲ್ಲಿ ಡ್ರಾಪ್ ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಈ ವೇಳೆ ಅಪರಿಚಿತ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:40 ವರ್ಷದಲ್ಲೇ ಸಿದ್ದರಾಮಯ್ಯಗೆ ಬಿಗ್‌ ಶಾಕ್‌.. ಸಿಎಂ ಸ್ಥಾನಕ್ಕೆ ಎದುರಾಗೋ 10 ಪರಿಣಾಮಗಳೇನು?

Advertisment

ನಂತರ ಸಂತ್ರಸ್ತೆ ಎಮರ್ಜನ್ಸಿ ಕರೆ ಮೂಲಕ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದಿದ್ದ ಸ್ನೇಹಿತರು ಯುವತಿ ಸ್ಥಿತಿ ನೋಡಿ ಶಾಕ್​ ಆಗಿದ್ದಾರೆ. ಸಂಪೂರ್ಣವಾಗಿ ಯುವತಿಯ ಮೈಮೇಲಿನ ಬಟ್ಟೆ ಕಿತ್ತುಹೋಗಿ ಆಕೆಯೂ ಗಂಭೀರವಾದ ಸ್ಥಿತಿಯಲ್ಲಿದ್ದಳು. ಆ ಕೂಡಲೇ ಸ್ನೇಹಿತರು ಯುವತಿಗೆ ಮೈಮೇಲೆ ಕಾರಿನ ಟಾರ್ಪಲ್​ ಹೊದಿಸಿ ಕರೆದೊಕೊಂಡು ಹೋಗಿದ್ದಾರೆ. ಬಳಿಕ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಿದ್ದಾರೆ. ಘಟನೆ ಬಗ್ಗೆ ಹೆಚ್​ಎಸ್​ಆರ್ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

publive-image

SOSನಿಂದ ಉಳಿದ ಯುವತಿಯ ಪ್ರಾಣ

‘SAVE OUR SOULS’ ಬಟನ್​ನಿಂದ ಯುವತಿಯ ಪ್ರಾಣ ಉಳಿದಿದೆ. ಮೊಬೈಲ್‌ನಲ್ಲಿ ಸ್ವಿಚ್ ಆಫ್ ಬಟನ್ ಪ್ರೆಸ್ ಮಾಡಿದ್ರೆ SOS ಆಪ್ಷನ್ ಬರುತ್ತೆ. ಅದಕ್ಕೆ ಸಂಬಂಧಿಕರ ಎಮೆರ್ಜೆನ್ಸಿ ನಂಬರ್ ಆ್ಯಡ್ ಮಾಡಬಹುದು. ಅದನ್ನ ಪ್ರೆಸ್ ಮಾಡಿದಾಗ ಆ್ಯಡ್ ಮಾಡಿದ ನಂಬರ್‌ಗೆ ನಿರಂತರವಾಗಿ ಕರೆಗಳು ಹೋಗುತ್ತವೆ. ಜೊತೆಗೆ ಮೊಬೈಲ್ ಇರೋ ಲೋಕೇಶನ್ ಕೂಡಾ ಶೇರ್ ಆಗುತ್ತದೆ. ಹೀಗೆ ಯುವತಿಯೂ SOSನಲ್ಲಿ ತಂದೆ ಹಾಗೂ ಸ್ನೇಹಿತೆ ನಂಬರ್ ಆ್ಯಡ್ ಮಾಡಿದ್ದಳು. ಸಂಕಷ್ಟದಲ್ಲಿದ್ದ ಯುವತಿ ‘SAVE OUR SOULS’ ಬಟನ್ ಒತ್ತಿದ್ದಾಳೆ. ತಕ್ಷಣವೇ ಸಂತ್ರಸ್ತೆ ಮೊಬೈಲ್‌ನಿಂದ ತಂದೆ ಹಾಗೂ ಸ್ನೇಹಿತರಿಗೆ ಕರೆ ಹೋಗಿದೆ. ಲೋಕೇಷನ್ ಆಧರಿಸಿ ಸ್ಥಳಕ್ಕೆ ಬಂದ ಸ್ನೇಹಿತರಿಂದ ಯುವತಿ ರಕ್ಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment