/newsfirstlive-kannada/media/post_attachments/wp-content/uploads/2024/08/rajasthan2.jpg)
ನಾಯಿಯನ್ನ ಬೈಕ್ಗೆ ಕಟ್ಟಿ ಎಳೆದೊಯ್ಯೋ ವಿಕೃತಿ ಮನಸ್ಸಿನ ಅದೆಷ್ಟೋ ಜನರನ್ನ ನೀವು ನೋಡಿರುತ್ತೇವೆ. ಆದ್ರೆ, ಮನುಷ್ಯರನ್ನೂ ಬೈಕ್ಗೆ ಕಟ್ಟಿ ಎಳೆದೊಯ್ಯೋ ಪರಮ ವಿಕೃತ ಮನಸ್ಸಿನೋರು ನಮ್ಮ ಮಧ್ಯೆ ಇದ್ದಾರೆ. ಅದಕ್ಕೆ ರಾಜಸ್ಥಾನದಲ್ಲಿ ನಡೆದಿರೋ ಈ ಅಮಾನುಷ ಘಟನೆಯೇ ಸಾಕ್ಷಿ. ರಾಜಸ್ಥಾನದ ನಾಗೌರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಇದನ್ನು ಕಣ್ಣಾರೆ ಕಂಡು ಇಡೀ ಊರಿನವರನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಕಾಮಿ ಅಲ್ಲ ವಿಕೃತ ಕ್ರಿಮಿ.. ಕೊಲ್ಕತ್ತಾ ವೈದ್ಯೆ ಕೊಂದ ಹೆಣ್ಣು ಬಾಕನ ಇತಿಹಾಸ ಏನು ಗೊತ್ತಾ?
ಪ್ರೇಮ್ ರಾಮ್ ಮೇಘವಾಲ್ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಈತನ ಕ್ರೌರ್ಯ ಇಷ್ಟಕ್ಕೇ ನಿಂತಿಲ್ಲ. ಬೈಕ್ ನಿಲ್ಲಿಸಿದ್ದ ಆತ, ಹೆಂಡತಿಯ ಮೇಲೆ ಹತ್ತಿ ನಿಂತಿದ್ದಾನೆ. ಪರಿಣಾಮ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾಳೆ. ನೆಲದಲ್ಲಿ ಬಿದ್ದ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕಿರುಚುತ್ತಿದ್ದರೂ ಸ್ಥಳದಲ್ಲಿದ್ದವರು ಮೂಕಪ್ರೇಕ್ಷಕರಾಗಿ ನಿಂತಿದ್ರು. ಪತ್ನಿ ತನ್ನ ತಂಗಿಯ ಮನೆಗೆ ಹೋಗ್ತೀನಿ ಅಂತಾ ಪತಿ ಮೇಘವಾಲ್ ಬಳಿ ಹೇಳಿದ್ದಾಳೆ.
ಎಲ್ಲಿಗೂ ಹೋಗೋದು ಬೇಡ ಅಂತಾ ಗಂಡ ನಿರಾಕರಿಸಿದ್ದಾನೆ. ಆಗ ಆಕೆ ಮತ್ತಷ್ಟು ಹಠ ಮಾಡಿದ್ದಾಳೆ. ಇದ್ರಿಂದ ಕೋಪಗೊಂಡ ಮೇಘವಾಲ್, ಬೈಕ್ಗೆ ಹಗ್ಗ ಕಟ್ಟಿ, ಇನ್ನೊಂದು ತುದಿಗೆ ಪತ್ನಿಯ ಕಾಲನ್ನ ಕಟ್ಟಿ ಧರಧರನೆ ನಡುರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಇದು ಕಳೆದೊಂದು ತಿಂಗಳ ಹಿಂದಿನ ವಿಡಿಯೋವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾವಾಗ ಜಾಲತಾಣದಲ್ಲಿ ವೈರಲ್ ಆಯ್ತೋ ಪತಿರಾಯನನ್ನ ಪೊಲೀಸರು ಬಂಧಿಸಿದ್ದಾರೆ. ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿ ವಿಚಾರಣೆ ಮುಂದುವರಿಸಿದ್ದಾರೆ. ಒಟ್ಟಾರೆ ಜೀವನಪೂರ್ತಿ ನಿನ್ನನ್ನ ಚೆನ್ನಾಗಿ ನೋಡಿಕೊಳ್ತೀನಿ ಅಂತಾ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದವಳ ಜೊತೆ ಈ ರೀತಿ ನಡೆದುಕೊಂಡಿದ್ದು ಕ್ರೌರ್ಯದ ಪರಮಾವಧಿಯೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ