newsfirstkannada.com

ಕಾಮಿ ಅಲ್ಲ ವಿಕೃತ ಕ್ರಿಮಿ.. ಕೊಲ್ಕತ್ತಾ ವೈದ್ಯೆ ಕೊಂದ ಹೆಣ್ಣು ಬಾಕನ ಇತಿಹಾಸ ಏನು ಗೊತ್ತಾ?

Share :

Published August 14, 2024 at 6:11am

Update August 14, 2024 at 6:53am

    ಅಶ್ಲೀಲ ಚಿತ್ರ ವ್ಯಸನಿಯಾಗಿದ್ದ! ಹೆಣ್ಣು ಬಾಕ ಅದೆಂಥಾ ಕ್ರೂರಿ?

    ಗಂಟಲಿನ ಎಲುಬು ಕಟ್‌, ಮೂಗು-ಬಾಯಲ್ಲಿ ಸುರಿದ ರಕ್ತ!

    4 ಮದುವೆಯಾಗಿದ್ದ, ಮೂವರು ಪತ್ನಿಯರು ಬಿಟ್ಟು ಹೋಗಿದ್ರು

ರಾಕ್ಷಸರ ಕತೆಗಳನ್ನು ಪುಸ್ತಕದಲ್ಲಿ ಓದಿರ್ತೀವಿ. ಇಲ್ಲವೇ ಸಿನಿಮಾಗಳಲ್ಲಿ ನೋಡಿರ್ತೀವಿ. ಆದ್ರೆ, ಕಣ್ಣಾರೆ ನೋಡಿದ್ದಿಲ್ಲ. ಅಷ್ಟಕ್ಕೂ ನಾವೇಕೆ ರಾಕ್ಷಸರ ಬಗ್ಗೆ ಹೇಳ್ತಿದ್ದೇವೆ ಅಂದ್ರೆ, ಕೋಲ್ಕತ್ತಾ ವೈದ್ಯೆಯನ್ನು ಅತ್ಯಾಚಾರ ಮಾಡಿ, ಹತ್ಯೆ ಮಾಡಿರೋ ಆರೋಪಿ ಸಂಜಯ್‌ ರಾಯ್‌ ಕೂಡ ಒಬ್ಬ ರಾಕ್ಷಸ. ಆತನ ರಕ್ತಚರಿತ್ರೆಯ ಕಥೆಗಳನ್ನು ಕೇಳಿದ್ರೆ ಯಾರೇ ಆದ್ರೂ ಒಂದು ಕ್ಷಣ ಬೆಚ್ಚಿ ಬೀಳ್ತೀರಾ. ಅಷ್ಟಕ್ಕೂ ಆತ ಪೊಲೀಸರ ಬಲೆಯೊಳಗೆ ಸಿಲುಕಿದ್ದು ಹೇಗೆ? ಹೆಣ್ಣು ಬಾಕನ ಇತಿಹಾಸ ಏನು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಇದನ್ನೂ ಓದಿ: ಹತ್ಯೆಯಾದ ಮೇಲೂ ಅತ್ಯಾಚಾರ.. ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ 10 ಸ್ಫೋಟಕ ಸತ್ಯಗಳು ಇಲ್ಲಿವೆ

ಪೈಶಾಚಿಕ ಕೃತ್ಯದ ನಂತರ ರಕ್ಕಸ ಸಿಕ್ಕಿ ಬಿದ್ದಿದ್ದು ಹೇಗೆ?

ಅಂದು ರಾತ್ರಿ ಬೆಳಗಾಗೋದ್ರಲ್ಲಿ ವೈದ್ಯೆ ಭೀಭತ್ಯವಾಗಿ ಸಾವನ್ನಪ್ಪಿದ್ದಳು. ಆಸ್ಪತ್ರೆಯ ಸಿಬ್ಬಂದಿ ಅಲ್ಲಿ ಹೋಗಿ ನೋಡೋದ್ರಲ್ಲಿ ಭೀಕರವಾಗಿ ಕೊಲೆಯಾಗಿರೋದು ಗೊತ್ತಾಗಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿರೋ ವೈದ್ಯೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಹಾಗೇ ಸ್ಥಳದಲ್ಲಿ ಏನಾದ್ರೂ ಸಾಕ್ಷ್ಯ ಸಿಗುತ್ತಾ? ಕೊಲೆಗಾರ ಸುಳಿವು ಪತ್ತೆಯಾಗಿತ್ತಾ ಅಂತಾ ಪೊಲೀಸರು ಜಾಲಾಡಿದ್ದಾರೆ. ಆವಾಗ ಬ್ಲೂಟೂಥ್‌ ಹೆಡ್‌ಫೋನ್‌ ಪತ್ತೆಯಾಗಿದೆ. ಅದುವೇ ಕೊಲೆಗಾನರ ಬೇಟೆಗೆ ಸುಳಿವು ನೀಡಿದೆ.

ಹಾಗೇ ವಿಚಾರಣೆ ವೇಳೆ ಎಲ್ಲಾ ಶಂಕಿತರ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಸಿಕ್ಕ ಬ್ಲೂಟ್ಯೂತ್‌ ಹೆಡ್‌ಫೋನ್‌ ಅನ್ನು ಎಲ್ಲ ಶಂಕಿತರ ಮೊಬೈಲ್ ಫೋನ್‌ಗಳೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಬ್ಲೂಟೂತ್‌ ಹೆಡ್‌ಫೋನ್‌ ಆರೋಪಿ ಸಂಜಯ್ ರಾಯ್‌ನ ಮೊಬೈಲ್‌ ಫೋನ್‌ಗೆ ಸ್ವಯಂಚಾಲಿತವಾಗಿ ಕನೆಕ್ಟ್ ಆಗಿದೆ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ ಪೊಲೀಸರು ಆತನನ್ನು ಅಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ತಂಡವು ವಿಚಾರಣೆ ನಡೆಸಿದಾಗ, ಸಂಜಯ್ ಆರಂಭದಲ್ಲಿ ವಿಭಿನ್ನ ಹೇಳಿಕೆಗಳನ್ನು ನೀಡಿದ್ದ. ಪೊಲೀಸರನ್ನೇ ದಾರಿ ತಪ್ಪಿಸೋ ಸ್ಟೇಟ್‌ಮೆಂಟ್‌ ಕೊಟ್ಟಿದ್ದ. ಆದ್ರೆ, ಪೊಲೀಸರು ಸರಿಯಾಗಿ ವಿಚಾರಣೆ ನಡ್ಸಿದಾಗ ಈತನೇ ಆಪರಾಧ ಕರಾಳ ಚರಿತ್ರೆಯೇ ಸ್ಫೋಟವಾಗಿದೆ.

ಇದನ್ನೂ ಓದಿ: ನೈಟ್ ​ಶಿಫ್ಟ್ ಡ್ಯೂಟಿಗೆ ಬಂದ ವೈದ್ಯೆ ರೇಪ್ & ಮರ್ಡರ್‌ ಕೇಸ್‌ಗೆ ಭಯಾನಕ ಟ್ವಿಸ್ಟ್‌; ಆಗಿದ್ದೇನು?

ಅಶ್ಲೀಲ ಚಿತ್ರ ವ್ಯಸನಿ, ಪಕ್ಕಾ ಹೆಣ್ಣುಬಾಕ!
ಅದ್ಯಾವಾಗ ಸಂಜಯ್‌ ರಾಯ್‌ ಅನ್ನೋ ವಿಕೃತ ಕ್ರಿಮಿ ಪೊಲೀಸರ ಬಲೆಗೆ ಬಿದ್ನೋ ಅವಾಗ್ಲೇ ಗೊತ್ತಾಗಿದ್ದು ಈತನಲ್ಲಿ ಒಬ್ಬ ಮಹಾನ್‌ ವಿಕೃತಕಾಮಿ ಇದ್ದಾನೆ ಅನ್ನೋದು. ಹೌದು, ಈತನ ಮೊಬೈಲ್‌ನಲ್ಲಿ ನೂರಾರು ಅಶ್ಲೀಲ ಚಿತ್ರಗಳು ಇರ್ತಾವೆ. ಅವು ಸಹಜ ಲೈಂಗಿಕ ಸಂಪರ್ಕವನ್ನು ಹೊಂದಿರೋ ಚಿತ್ರಗಳು ಇಲ್ಲವೇ ಅಲ್ಲ. ಒಂದೊಂದ್‌ ವಿಡಿಯೋಗಳು ಚಿತ್ರ ವಿಚಿತ್ರವಾಗಿ,ಹೆಣ್ಣಿನ ಮೇಲೆ ಕ್ರೌರ್ಯ ನಡ್ಸಿ ಮಾಡಿರೋ ಅತ್ಯಾಚಾರದ ವಿಡಿಯೋಗಳಾಗಿರ್ತಾವೆ. ಅದನ್ನು ನೋಡಿದ್ಮೇಲೆ ಈತನೊಬ್ಬ ಅಶ್ಲೀಲ ಚಿತ್ರ ವ್ಯಸನಿ ಅನ್ನೋದ್‌ ಪೊಲೀಸರಿಗೆ ಕನ್‌ಫರ್ಮ್‌ ಆಗುತ್ತೆ. ಹಾಗೇ ಒಬ್ಬ ಹೆಣ್ಣು ಬಾಕನೂ ಹೌದು. ಈತ ಅಶ್ಲೀಲ ಚಿತ್ರಗಳನ್ನು ನೋಡಿ ಅದೇ ರೀತಿಯಲ್ಲಿ ಅತ್ಯಾಚಾರಕ್ಕೆ ಪ್ರಯತ್ನ ಮಾಡ್ತಿದ್ದ ಅನ್ನೋದ್‌ ಗೊತ್ತಾಗಿದೆ. ವೈದ್ಯೆಯ ಮೇಲೆ ಅಮಾನುಷ ಕ್ರೌರ್ಯ ಮೆರೆದ ರೀತಿಯಲ್ಲಿಯೇ ಆತ ಇನ್ನಷ್ಟು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರೋ ಸಾಧ್ಯತೆಯೂ ಇದೆ. ಆ ನಿಟ್ಟಿನಲ್ಲಿಯೂ ಪೊಲೀಸ್ರು ತನಿಖೆ ಮಾಡ್ತಿದ್ದಾರೆ.

ಮದುವೆಯಾಗಿದ್ದ… ಮೂವರು ಬಿಟ್ಟೋಗಿದ್ರು!

ಕ್ರಿಮಿ ಸಂಜಯ್‌ ರಾಯ್‌ ಇತಿಹಾಸ ಅಕ್ಷರಶಃ ಬೆಚ್ಚಿ ಬೀಳಿಸುವಂತೆ. ಆತನಿಗೆ ತಾನು ಮಾಡಿದ್ದು ಪಾಪ ಕೃತ್ಯ ಅನ್ನೋ ಕನಿಷ್ಠ ಪಾಪ ಪ್ರಜ್ಞೆಯೂ ಇಲ್ಲ. ಬೇಕಾದ್ರೆ ತನ್ನನ್ನು ಗಲ್ಲಿಗೇರಿಸಿ ಅಂತಾ ಪೊಲೀಸರಿಗೆ ನೇರವಾಗಿ ಹೇಳ್ತಿದ್ದಾನೆ. ಹಾಗೇ ಈತನ ಇತಿಹಾಸವನ್ನು ನೋಡ್ತಾ ಹೋದಾಗ ಕಾಣಿಸೋದ್‌ ಈಗಾಗಲೇ 4 ಮದುವೆಯಾಗಿದ್ದಾನೆ ಅನ್ನೋದು. ಮೊದಲ ಪತ್ನಿ ಜೊತೆ ಅಮಾನುಷವಾಗಿ ನಡೆದುಕೊಳ್ಳುತ್ತಾನೆ. ಅಸಹಜ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸ್ತಾನೆ, ಪೀಡಿಸ್ತಾನೆ. ಅದ್ರಿಂದ ಬೇಸತ್ತ ಮೊದಲ ಪತ್ನಿ ಈತನಿಂದ ದೂರಾಗುತ್ತಾಳೆ. ಅನಂತರ ಮತ್ತೆ 2 ಮದುವೆ ಮಾಡಿಕೊಳ್ತಾನೆ. ಆ ಎರಡೂ ಪತ್ನಿಯರ ಜೊತೆಗೂ ಅಷ್ಟೇ ಕ್ರೂರವಾಗಿ, ಕಾಮಿ ಕ್ರಿಮಿಯಾಗಿ ನಡೆದುಕೊಳ್ತಾನೆ. ಅವ್ರು ಈ ಪಾಪಿಯಿಂದ ದೂರಾಗ್ತಾರೆ. ಆಮೇಲೆ ಇತ್ತೀಚಿನ ವರ್ಷದಲ್ಲಿ 4ನೇ ಮದುವೆ ಆಗಿರ್ತಾನೆ. ಆದರೆ ಆಕೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುತ್ತಾಳೆ. ಅದಾತ್ಮೇಲೆ ಈತನ ಕಣ್ಣು ಕಂಡವರ ಹೆಣ್ಣು ಮಕ್ಕಳ ಮೇಲೆ ಬೀಳಲು ಶುರುವಾಗುತ್ತೆ.

ಇದನ್ನೂ ಓದಿ: ರೇಪ್ ಮಾಡಿ ಮುಖಕ್ಕೆ ಗುದ್ದಿದ.. ವೈದ್ಯೆಯ ಕಣ್ಣಿಗೆ ಹೊಕ್ಕ ಚಸ್ಮಾ ಗ್ಲಾಸ್; ಕೊಲ್ಕತ್ತಾ ಕಿರಾತಕನ ಮತ್ತಷ್ಟು ಕ್ರೌರ್ಯ ಬಯಲು

ತಾನು ಪೊಲೀಸ್‌ ಪೇದೆ ಅಂತಾ ಹೇಳಿಕೊಳ್ತಿದ್ದ!

ಸಂಜಯ್‌ ಒಬ್ಬ ಕಾಮಿ ಅಷ್ಟೇ ಅಲ್ಲ, ಖತರ್ನಾಕ್‌ ವ್ಯಕ್ತಿ ಕೂಡ ಹೌದು. ಎಲ್ಲಿ ತನ್ನನ್ನು ಹೇಗೆ ಪರಿಚಯ ಮಾಡಿಸ್ಕೊಳ್ಳಬೇಕು? ಏನಂತಾ ಪರಿಚಯ ಮಾಡಿಸ್ಕೊಂಡ್ರೆ ಹವಾ ಸೃಷ್ಟಿಯಾಗುತ್ತೆ ಅನ್ನೋದ್‌ ಅತನಿಗೆ ಗೊತ್ತಿತ್ತು. ಬಹುಪಾಲು ಕ್ಷೇತ್ರದಲ್ಲಿ ಆತ ತಾನೊಬ್ಬ ಪೊಲೀಸ್‌ ಪೇದೆ ಅಂತಾ ಪರಿಚಯ ಮಾಡಿಸಿಕೊಳ್ತಿದ್ದ. ಇದೀಗ ವೈದ್ಯೆ ಅತ್ಯಾಚಾರ ಮತ್ತು ಮರ್ಡರ್‌ ಆಗಿರೋ ಆಸ್ಪತ್ರೆಯಲ್ಲಿಯೂ ಸಂಜಯ್‌ ರಾಯ್‌ ತಾನೊಬ್ಬ ಪೊಲೀಸ್‌ ಪೇದೆ ಅಂತಾ ಪರಿಚಯ ಮಾಡಿಸ್ಕೊಂಡಿದ್ದ. ತನಗೆ ದೊಡ್ಡ ದೊಡ್ಡ ಪೊಲೀಸ್‌ ಅಧಿಕಾರಿಗಳ ಜೊತೆ ನೇರ ಸಂಪರ್ಕವಿದೆ ಅಂತಾ ಹೇಳಿಕೊಳ್ತಿದ್ದ. ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದ್‌ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವು ನೀಡುವಂತೆ ಮಾಡಿ ವಂಚನೆ ಮಾಡ್ತಿದ್ದ. ಇದೇ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗೆ ತೀರಾ ಹತ್ತಿರದ ಪರಿಚಿತನಾಗಿದ್ದ.

ಅಷ್ಟಕ್ಕೂ ನಿಜಕ್ಕೂ ಈತ ಪೊಲೀಸ್‌ ಪೇದೆನಾ? ಅಂತಾ ಕೇಳಿದ್ರೆ ಇಲ್ಲ ಅನ್ನೋ ಉತ್ತರ ಕೇಳಿಬರ್ತಿದೆ. ಹೌದು, ಈತನೊಬ್ಬ ಸ್ವಯಂ ಸೇವಕ ಉದ್ಯೋಗಿಯಾಗಿದ್ದ. 33 ವರ್ಷದ ಸಂಜಯ್ ರಾಯ್ 2019ರಲ್ಲಿ ಕೋಲ್ಕತ್ತಾ ಪೊಲೀಸ್‌ಗೆ ನಾಗರಿಕ ಸ್ವಯಂಸೇವಕನಾಗಿ ಸೇರಿದ್ದು ಆಸ್ಪತ್ರೆಯ ಔಟ್‌ಪೋಸ್ಟ್‌ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದನು. ಕ್ಯಾಂಪಸ್‌ನ ಕಟ್ಟಡಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ. ಸ್ಥಳೀಯ ಪಾರ್ಕಿಂಗ್‌, ಟ್ರಾಫಿಕ್‌ ನಿರ್ವಹಣೆ ಮಾಡುತ್ತಿದ್ದ.

ಬಾಕ್ಸಿಂಗ್‌ ತರಬೇತಿ, ಮದ್ಯ ವ್ಯಸನಿ!
ವ್ಯದ್ಯೆಯ ಮರಣೋತರ ವರದಿಯಲ್ಲಿ ಒಟ್ಟು 9 ಕಡೆ ಗಾಯವಾಗಿದೆ. ಕುತ್ತಿಗೆಯ ನರವೇ ಮುರಿದು ಹೋಗಿದೆ. ಮೂಗಲ್ಲಿ ಬಾಯಕ್ಕೆ ರಕ್ತ ಸೋರಿದೆ. ಅಂದ್ರೆ, ಅತ್ಯಾಚಾರ ಸಂದರ್ಭದಲ್ಲಿ ಆಕೆ ಪ್ರತಿರೋಧ ತೋರಿದ್ದಾಳೆ. ಬಟ್‌, ಬಾಕ್ಸಿಂಗ್‌ ತರಬೇತಿ ಪಡೆದಿದ್ದ ಸಂಜಯ್‌ ಬಾರೀ ಬಲಶಾಲಿ ವ್ಯಕ್ತಿಯಾಗಿದ್ದ. ಆತನ ರಾಕ್ಷಸಿ ಕೈಗಳಿಂದ ಆಕೆಯ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಹೌದು, ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಸ್ವಯಂ ಉದ್ಯೋಗಿ ಆಗೋದಕ್ಕೂ ಮುನ್ನ ಸಂಜಯ್‌ ಬಾಕ್ಸಿಂಗ್‌ ತರಬೇತಿಯನ್ನು ಪಡೆದಿದ್ದ ಅನ್ನೋದ್‌ ಗೊತ್ತಾಗಿದೆ. ಇನ್ನೊಂದ್‌ ವಿಚಾರ ಅಂದ್ರೆ, ಆತ ವಿಪರೀತ ಮದ್ಯ ವ್ಯಸನಿಯಾಗಿದ್ದ ಅನ್ನೋದು.

ಇದನ್ನೂ ಓದಿ: ನೈಟ್ ಡ್ಯೂಟಿ ವೈದ್ಯೆಗೆ ರೇಪ್‌ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?

ಪ್ರತಿ ನಿತ್ಯ ಮದ್ಯ ಸೇವನೆ ಮಾಡ್ತಿದ್ದ. ಯಾವಾಗ ಮದ್ಯ ಸೇವನೆ ಮಾಡ್ತಿದ್ನೋ ಅಂತಾ ಎಲ್ಲಾ ಸಂದರ್ಭದಲ್ಲಿಯೂ ಅಶ್ಲೀಲ ವಿಡಿಯೋಗಳನ್ನು ನೋಡ್ತಿದ್ದ. ವೈದ್ಯಯನ್ನು ಅತ್ಯಾಚಾರ ಮತ್ತು ಕೊಲೆ ಮಾಡೋದಿನವೂ ಈತ ಮದ್ಯ ಸೇವನೆ ಮಾಡಿ ಅಶ್ಲೀಲ ವಿಡಿಯೋಗಳನ್ನು ನೋಡ್ಕೊಂಡ್‌ ಅನಂತರ ವೈದ್ಯೆ ಇರೋ ರೋಮ್‌ಗೆ ಪ್ರವೇಶ ಪಡೆದಿದ್ದ ಅನ್ನೋದ್‌ ಗೊತ್ತಾಗಿದೆ. ಹಾಗೇ ಸಾವನ್ನಪ್ಪಿದ ಮೇಲೂ ಅತ್ಯಾಚಾರ ಮಾಡಿದ್ದಾನೆ ಅನ್ನೋ ಮಾತುಗಳು ಹೇಳಿ ಬರ್ತಿವೆ.

ವೈದ್ಯೆಯ ಹತ್ಯೆಯಲ್ಲಿ ಕೆಲವು ಅನುಮಾನಗಳು ವ್ಯಕ್ತವಾಗ್ತಿವೆ. ಆಕೆಯ ಮೇಲೆ ಭೀಕರ ಅತ್ಯಾಚಾರವಾಗ್ತಾ ಇದ್ರೂ? ಆಸ್ಪತ್ರೆಯಲ್ಲಿ ರಾತ್ರಿ ಡ್ಯೂಟಿ ಮಾಡೋರಿಗೆ ಗೊತ್ತೇ ಆಗಿಲ್ವಾ? ಸಂಜಯ್‌ ರಾಯ್‌ ಜೊತೆ ಇನ್ನು ಯಾರಾದ್ರೂ ಬೇರೆ ರಕ್ಕಸರು ಇದ್ರಾ? ಅನ್ನೋದು. ಆ ನಿಟ್ಟಿನಲ್ಲಿಯೂ ಪೊಲೀಸ್ರು ತನಿಖೆ ಮಾಡ್ತಿದ್ದಾರೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗ್ಲಿ ಅನ್ನೋದೇ ಜನರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಮಿ ಅಲ್ಲ ವಿಕೃತ ಕ್ರಿಮಿ.. ಕೊಲ್ಕತ್ತಾ ವೈದ್ಯೆ ಕೊಂದ ಹೆಣ್ಣು ಬಾಕನ ಇತಿಹಾಸ ಏನು ಗೊತ್ತಾ?

https://newsfirstlive.com/wp-content/uploads/2024/08/kolkata-rape-and-murder-2-1.jpg

Load More