newsfirstkannada.com

ಚಂದನ್, ನಿವೇದಿತಾ ಬೇರೆ, ಬೇರೆ ಆಗಿದ್ದು ಇದಕ್ಕಾ.. ಕೊನೆಗೂ ಕಾರಣ ಹುಡುಕಾಡಿದ ನೆಟ್ಟಿಗರು; ಏನದು?

Share :

Published June 9, 2024 at 6:05pm

Update June 9, 2024 at 6:54pm

  ಕೈ ಕೈ ಹಿಡಿದುಕೊಂಡು ಕೋರ್ಟ್​ಗೆ ಎಂಟ್ರಿ ಕೊಟ್ಟ ಶಾಕ್​ ಕೊಟ್ಟಿದ್ದ ಜೋಡಿ

  ಅಯ್ಯೋ.. ಏನ್​ ಗುರು ಇದು ಅಂತಾ ಕಾಮೆಂಟ್​ ಮಾಡಿ ಫ್ಯಾನ್ಸ್ ತರಾಟೆ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಈ ವಿಚಾರ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ. ಈ ಇಬ್ಬರು ಬಿಗ್​​ಬಾಸ್​ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೂ ಸುದ್ದಿಯಾಗುತ್ತಲೇ ಇದ್ದರು. ಮೊದಲು ಅಣ್ಣ ತಂಗಿ ಅಂತ ಇದ್ದ ಈ ಜೋಡಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಹೀಗೆ ದಿನ ಕಳೆದಂತೆ ಸ್ನೇಹಿತರಾಗಿದ್ದ ಈ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಈ ವಿಚಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

ಇದಾದ ಬಳಿಕ ಬಿಗ್​ಬಾಸ್ ಶೋ ಮುಕ್ತಾಯಗೊಳ್ಳುತ್ತಿದ್ದಂತೆ 2019ರಂದು ಮೈಸೂರು ದಸರಾ ಈವೆಂಟ್‌ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು. ಈ ವಿಚಾರ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಂದನ್ ಶೆಟ್ಟಿ ಸಾರ್ವಜನಿಕವಾಗಿ ನಿವೇದಿತಾ ಗೌಡಗೆ ಲವ್ ಪ್ರಪೋಸ್ ಮಾಡಿ ಸಖತ್​ ಕಾಂಟ್ರೋವರ್ಸಿ ಮಾಡಿಕೊಂಡು ಸುದ್ದಿಯಲ್ಲಿದ್ದರು. ಇದಾದ ಬಳಿಕ ಈ ಇಬ್ಬರು ಬಹಳ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ 2020ರ ಫೆಬ್ರವರಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಬಿಗ್​​ಬಾಸ್​ನಲ್ಲಿ ಪರಿಚಯ.. ಮೈಸೂರು ದಸರಾದಲ್ಲಿ ಪ್ರಪೋಸ್.. ಅದ್ಧೂರಿ ಮದುವೆ.. ಇನ್​ಸ್ಟಾಗ್ರಾಮ್​ನಲ್ಲಿ ಸಖತ್​ ಫೇಮಸ್​​. ಹೀಗೆ ಪ್ರತಿ ಹಂತದಲ್ಲೂ ಈ ಕ್ಯೂಟ್​​ ಜೋಡಿ ಸುದ್ದಿಯಾಗುತ್ತಲೇ ಇತ್ತು. ಆದರೆ ತಂಬಾ ಗ್ರ್ಯಾಂಡ್​ ಆಗಿ ಸಪ್ತಪದಿ ತುಳಿದಿದ್ದ ಕ್ಯೂಟ್ ಜೋಡಿಯ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದೆ. ಕೇವಲ ನಾಲ್ಕೇ ವರ್ಷಕ್ಕೆ ಸಂಸಾರದ ಜಂಜಾಟಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಗುಡ್ ಬಾಯ್ ಹೇಳಿದ್ದಾರೆ. ಇನ್ನು, ಈ ವಿಚಾರವಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇನ್​​ಸ್ಟಾಗ್ರಾಮ್​​ ಓಪನ್​ ಮಾಡಿದ್ರೆ ಸಾಕು ಬರೀ ಈ ಜೋಡಿ ಬಗ್ಗೆನೇ ಸದ್ದು ಗದ್ದಲ. ಹೀಗಾಗಿ ಸಾಮಾಜಿಕ ಜಾಲತಾಣಲ್ಲಿ ಈ ಜೋಡಿ ಹಲ್​ ಚಲ್​ ಎಬ್ಬಿಸಿದೆ. ಫೇಸ್​ ಬುಕ್​​, ಇನ್​ಸ್ಟಾಗ್ರಾಮ್​ ಟ್ವಿಟರ್​ ಸೇರಿ ಎಲ್ಲಾ ಕಡೆ ಕೇವಲ ಚಂದನ್​ ಹಾಗೂ ನಿವೇದಿತಾ ಗೌಡ ಬಗ್ಗೆ ಚರ್ಚೆ ಶುರುವಾಗಿದೆ. ಬರೀ ಚಂದನ್​ ಹಾಗೂ ನಿವೇದಿತಾ ಗೌಡ ಡಿವೋರ್ಸ್‌ ಸುದ್ದಿ ಕೇಳಿ, ನೋಡಿ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ. ಇನ್ನೂ ಕಳೆದ ಎರಡು ದಿನಗಳಲ್ಲಿ ಚಂದನ್ ಶೆಟ್ಟಿ​ ಹಾಗೂ ನಿವೇದಿತಾ ಗೌಡ ಬಗ್ಗೆ ಗೂಗಲ್​​ನಲ್ಲಿ ಸಾಕಷ್ಟು ಜನರು ಹುಡುಕಿದ್ದಾರೆ. ಹೀಗಾಗಿ ಈ ಜೋಡಿ ಇಲ್ಲೂ ಕೂಡ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್, ನಿವೇದಿತಾ ಬೇರೆ, ಬೇರೆ ಆಗಿದ್ದು ಇದಕ್ಕಾ.. ಕೊನೆಗೂ ಕಾರಣ ಹುಡುಕಾಡಿದ ನೆಟ್ಟಿಗರು; ಏನದು?

https://newsfirstlive.com/wp-content/uploads/2024/06/niveditha5.jpg

Load More