ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಎ16 ಕೇಶವಮೂರ್ತಿ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದೇ ರೋಚಕ!
ಕೇಶವಮೂರ್ತಿಗೆ ಅಡ್ವಾನ್ಸ್ ಆಗಿ 5 ಲಕ್ಷ ರೂಪಾಯಿ ಕೊಡಲಾಗಿತ್ತಾ?
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆಯುತ್ತಿದೆ. ಇಷ್ಟು ದಿನದಿಂದ ಅಡಗಿರುವ ಸತ್ಯಗಳ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಒಂದೊಂದಾಗೇ ಹೊರ ಬರುತ್ತಿದೆ. ರೇಣುಕಾಸ್ವಾಮಿ ಕೊಲೆ ವೇಳೆ ಡಿಲೀಟ್ ಮಾಡಿದ್ದ ಫೋಟೋಗಳ ಸಮೇತ, ಸುಮನಹಳ್ಳಿ ರಾಜಕಾಲುವೆಯಲ್ಲಿ ಶವ ಎಸೆದು ಬಂದವರ ಕಠೋರ ಸತ್ಯ ಇದೀಗ ರಿವೀಲ್ ಆಗಿದೆ. ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಆಚೆ ಬಂದಿದೆ. ಟೀ ಕುಡಿಯೋಕೆ ಅಂತ ಹೋದವನು ಕೊಲೆ ಕೇಸ್ನಲ್ಲಿ ಜೈಲು ಪಾಲಾದ ಇಂಟ್ರೆಸ್ಟಿಂಗ್ ಕಹಾನಿ ಆಚೆ ಬಂದಿದೆ.
ಇದನ್ನೂ ಓದಿ: ಜೈಲಲ್ಲಿ ಅನ್ನ ತಿನ್ನುವುದು ಬಿಟ್ಟ ದರ್ಶನ್.. ಈ ಮಾತ್ರೆಗಳನ್ನ ಸೇವನೆ ಮಾಡುತ್ತಿರುವುದು ಏಕೆ?
ದರ್ಶನ್ ಮತ್ತು ಗ್ಯಾಂಗ್ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 16 ಕೇಶವಮೂರ್ತಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದೇ ರೋಚಕ. ಟೀ ಕುಡಿಯೋಕೆ ಅಂತ ಹೋಗಿದ್ದ ಕೇಶವಮೂರ್ತಿಗೆ ಕಾರ್ತಿಕ್ ಹಾಗೂ ನಿಖಿಲ್ ಭೇಟಿಯಾಗಿ ಒಂದು ಕೊಲೆಯಾಗಿದೆ. ನಾವು ಸರೆಂಡರ್ ಆದ್ರೆ ದುಡ್ಡು ಕೊಡುತ್ತಾರೆ. ಬಳಿಕ ಬೇಲ್ ಸಹ ಕೊಡಿಸುತ್ತಾರೆ ಎಂದು ಹೇಳಿದ್ದರು. ಕೇಶವಮೂರ್ತಿಗೆ ಅಡ್ವಾನ್ಸ್ ಆಗಿ 5 ಲಕ್ಷ ರೂಪಾಯಿ ಸಹ ಕೊಡಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಗೃಹಿಣಿ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್.. ಚಿತಾಗಾರದಲ್ಲಿ ಗಂಡನ ಮನೆಯವರಿಂದ ರಂಪಾಟ!
ರೇಣುಕಾಸ್ವಾಮಿ ಕೊಲೆ ಆದ ಬಳಿಕ ಸರೆಂಡರ್ ಆಗಲು ಕಾರ್ತಿಕ್ ಮತ್ತು ನಿಖಿಲ್ ಮೊದಲು ಒಪ್ಪಿದ್ದರು. ಆದ್ರೆ ರಾಘವೇಂದ್ರ ಮೊದಲು ಒಪ್ಪಿಗೆ ಕೊಟ್ಟು ಆಮೇಲೆ ಸರೆಂಡರ್ ಆಗಲ್ಲ ಎಂದಿದ್ದ. ಈ ಸಮಯದಲ್ಲಿ ಯಾರಾದ್ರೂ ಸಿಗ್ತಾರಾ ಅಂತ ಹುಡುಕಿಕೊಂಡು ಹೋಗಿದ್ದ ನಿಖಿಲ್ ಮತ್ತು ಕಾರ್ತಿಕ್ಗೆ ಉತ್ತರಹಳ್ಳಿ ಬಳಿ ಟೀ ಕುಡಿಯುತ್ತಾ ಕುಳಿತಿದ್ದ ಕೇಶವಮೂರ್ತಿ ಕಾಣುತ್ತಾನೆ. ಕೂಡಲೇ ಅವನ ಜೊತೆ ಮಾತನಾಡಿದ ಕಾರ್ತಿಕ್, ಒಂದು ಕೊಲೆಯಾಗಿದೆ. ಸರೆಂಡರ್ ಆದ್ರೆ ಹಣ ಕೊಡ್ತಾರೆ ಬಳಿಕ ಬೇಲ್ ಕೊಡಿಸಿ ಆಚೆಗೂ ಕರೆದುಕೊಂಡು ಬರುತ್ತಾರೆ ಎಂದು ಪುಸಲಾಯಿಸಿದ್ದ. ಹಣ ಸಿಗುತ್ತೆ ಅಂತ ಒಪ್ಪಿಕೊಂಡ ಕೇಶವಮೂರ್ತಿ ಶೆಡ್ಗೆ ಹೋಗಿದ್ದ. ಸದ್ಯ ಅಡ್ವಾನ್ಸ್ ಆಗಿ ನೀಡಿದ್ದ 5 ಲಕ್ಷ ರೂಪಾಯಿ ಹಣವನ್ನು ಕೂಡ ಕಾಮಾಕ್ಷಿಪಾಳ್ಯ ಪೊಲೀಸರು ರಿಕವರಿ ಮಾಡಿದ್ದಾರೆ. ಅಡ್ವಾನ್ಸ್ ಆಗಿ ನೀಡಿದ್ದ ಹಣ ಕೇಶವ ಸಹೋದರನ ಬಳಿ ಇತ್ತು. ಇದನ್ನು ರಿಕವರಿ ಮಾಡಿದ ಬಗ್ಗೆ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ