Advertisment

20 ಸಾವಿರದಲ್ಲಿ ಇವಳನ್ನ ಮೆಂಟೇನ್ ಮಾಡ್ತಿಯಾ.. ರೇಣುಕಾಸ್ವಾಮಿ ಎದೆ, ಕುತ್ತಿಗೆಗೆ ಬಲವಾಗಿ ಒದ್ದ ದರ್ಶನ್!

author-image
Gopal Kulkarni
Updated On
ಜಾಮೀನು ಸಿಕ್ಕಿ ವಾರ ಕಳೆದರೂ ಬಿಡುಗಡೆ ಭಾಗ್ಯ ಇಲ್ಲ; ದರ್ಶನ್ ಗ್ಯಾಂಗ್​ಗೆ ಇದೆಂಥಾ ಪರಿಸ್ಥಿತಿ..!
Advertisment
  • ಪಟ್ಟಣಗೆರೆ ಶೆಡ್​ನಲ್ಲಿ ದರ್ಶನ್ ರೇಣುಕಾಸ್ವಾಮಿಯನ್ನು ಹೇಗೆಲ್ಲಾ ಹೊಡೆದರು!
  • ಬಲವಾಗಿ ಎದೆಗೆ ಬಿತ್ತು ಒದೆ, ಮರದ ಟೊಂಗೆ ಕಿತ್ತು ಭೀಕರವಾಗಿ ಹೊಡೆತ
  • ಚಾರ್ಜ್​ಶೀಟ್​ನಲ್ಲಿ ಆರೋಪಿ ದರ್ಶನ್​ ಕ್ರೌರ್ಯ ರೂಪದ ನರಕ ಅನಾವರಣ

ಬೆಂಗಳೂರು: ಸದ್ಯ ರಾಜ್ಯದಲ್ಲಿ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಸಿದ್ಧಗೊಂಡಿರುವ 3991 ಪುಟಗಳ ಜಾರ್ಜ್​ಶೀಟ್​ದೇ ದೊಡ್ಡ ಚರ್ಚೆಯಾಗುತ್ತಿದೆ. ಕ್ರೌರ್ಯಕ್ಕೆ ಮುಖವೊಂದು ಇದ್ದರೆ ಅದು ಹೇಗಿರುತ್ತಿತ್ತು ಅನ್ನೋದಕ್ಕೆ ರೇಣುಕಾಸ್ವಾಮಿಯನ್ನು ಸಾಯಿ ಬಡೆಯೋ ರೀತಿ ಹೊಡೆದ ದರ್ಶನ್​ನನ್ನು ಹೋಲುತ್ತಿತ್ತೊ ಏನೋ. ಹೀಗೆ ಹೇಳಲು ಒಂದು ಕಾರಣವಿದೆ. ಪಟ್ಟಣಗೆರೆ ಶೆಡ್​​ನಲ್ಲಿ ನಟ ದರ್ಶನ್ ರೇಣುಕಾಸ್ವಾಮಿಯನ್ನು ಹೊಡೆದ ರೀತಿಯೇ ಹಾಗಿದೆ. ಅದನ್ನು ತಪ್ಪೊಪ್ಪಿಗೆಯಲ್ಲಿ ಖುದ್ದು ದರ್ಶನ್​ ಅವರೇ ಹೇಳಿದ್ದಾರೆ.

Advertisment

ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್​ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?

ಶೆಡ್​ನಲ್ಲಿ ಅಂದು ರಾತ್ರಿ ನಡೆದ ಘಟನೆಯ ಒಂದೊಂದು ಅಂಶವನ್ನು ಕೂಡ ದರ್ಶನ್ ಪೊಲೀಸರೆದುರು ಹೇಳಿದ್ದಾರೆ. ಶೆಡ್​ನಲ್ಲಿ ನಾವು ಕೆಳಗೆ ಇಳಿಯುತ್ತಿದ್ದಂತೆ ನಮ್ಮ ಬಳಿಗೆ ಬಂದಿದ್ದ. ನಾನು ಬರುವ ಮೊದಲು ಅವರು ಆತನಿಗೆ ಹೊಡೆದಂತೆ ಕಾಣುತ್ತಿತ್ತು. ನಾನು ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್​ ತೋರಿಸಿ ಇದನ್ನು ಕಳುಹಿಸಿದ್ದು ನೀನೇನಾ ಎಂದು ಕೇಳಿದೆ. ಅದಕ್ಕಾತ ಹೌದು ಎಂದು ಉತ್ತರಿಸಿದ.

publive-image

ನಾನು ಇದೆಲ್ಲಾ ನಿನಗೆ ಬೇಕಾ ನಿನ್ನ ಸಂಬಳ ಎಷ್ಟು ಎಂದು ಕೇಳಿದೆ. 20 ಸಾವಿರ ರೂಪಾಯಿ ಸಂಬಳದಲ್ಲಿ ಇವಳನ್ನು ಮೆಂಟೇನ್ ಮಾಡೋಕಾಗುತ್ತಾ? ಈ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿ ಬಾ ಅಂತ ಕರಿತೀಯಾ ಎಂದು ಕೈನಿಂದ ಹೊಡೆದೆ. ಕಾಲಿನಿಂದ ಎದೆ, ಕುತ್ತಿಗೆ ತಲೆಗೆ ಬಲವಾಗಿ ಒದ್ದೆ. ಅಲ್ಲಿಯೇ ಬಾಗಿದ್ದ ಮರದ ಕೊಂಬೆಯನ್ನು ಮುರಿದು ಅದರಿಂದಲೂ ಆತನನ್ನು ಹೊಡೆದೆ.

Advertisment

ಇದನ್ನೂ ಓದಿ:ದರ್ಶನ್‌ಗೂ ಮುಂಚೆ ಪವಿತ್ರಾಗೌಡ ಲೈಫ್ ಹೇಗಿತ್ತು; ಮೊದಲ ಪತಿಗೆ ಡಿವೋರ್ಸ್​ ಕೊಟ್ಟ ಅಸಲಿ ಕಾರಣವೇನು?

ನನ್ನ ಕೈಗಳಿಂದಲೂ ಆತನಿಗೆ ನಾನು ಒಂದೆರಡು ಏಟು ಗುದ್ದಿದೆ. ನನ್ನ ಡ್ರೈವರ್ ಲಕ್ಷ್ಮಣ ಸಹ ರೇಣುಕಾಸ್ವಾಮಿಗೆ ಬಲವಾಗಿ ಹೊಡೆದಿದ್ದ. ನಂದೀಶ್​ ನನ್ನ ಮುಂದೆಯೇ ರೇಣುಕಾಸ್ವಾಮಿಯನ್ನು ಒಮ್ಮೆ ಎತ್ತಿ ನೆಲಕ್ಕೆ ಕುಕ್ಕಿದ. ನಾನು ಮತ್ತೊಮ್ಮೆ ರೇಣುಕಾಸ್ವಾಮಿಗೆ ಹೊಡೆದು ವಿನಯ್ ಜೊತೆ ಮನೆಗೆ ಹೋದೆ. ಸಂಜೆ 7.30ಕ್ಕೆ ಪ್ರದೂಷ್ ಮನೆಗೆ ಬಂದು ರೇಣುಕಾಸ್ವಾಮಿ ಸತ್ತೋದ ಎಂದು ವಿಷಯ ತಿಳಿಸಿದ ಎಂದು ದರ್ಶನ್ ತಮ್ಮ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment