newsfirstkannada.com

‘ಹೇಳಿದಷ್ಟು ಮಾಡು ಅಷ್ಟೇ’ ಎಂದಿದ್ದ ದರ್ಶನ್; ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ಪವಿತ್ರಗೆ ಗೊತ್ತಾಗಿದ್ದೇಗೆ..?

Share :

Published September 6, 2024 at 9:51am

    ರೇಣುಕಾಸ್ವಾಮಿ ಕೇಸ್​ ತನಿಖೆ ಬಳಿಕ ಚಾರ್ಜ್​ಶೀಟ್

    ಚಾರ್ಜ್​ಶೀಟ್​ನಲ್ಲಿ ಬಯಲಾಗಿದೆ ಪ್ರಕರಣದ ಅಸಲಿ ಸತ್ಯ

    ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಕೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಾಡಿರುವ ದೋಷಾರೋಪದ ವಿಚಾರಗಳು ಒಂದೊಂದೇ ಬಯಲಿಗೆ ಬರುತ್ತಿವೆ.

ದರ್ಶನ್ ಗ್ಯಾಂಗ್​ ನಡೆಸಿದ ಅಮಾನುಷ ಕೃತ್ಯದಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ಒಂದು ದಿನ ಕಳೆದರೂ ಪವಿತ್ರಗೌಡಗೆ ಗೊತ್ತೇ ಇರಲಿಲ್ಲ. 2024 ಜೂನ್ 8 ಶನಿವಾರ ಸಂಜೆ 6 ಗಂಟೆಗೆ ಮಾರಣಾಂತಿಕ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?

ಆದರೆ ಭಾನುವಾರ ಮಧ್ಯಾಹ್ನದವರೆಗೂ ಪವಿತ್ರಾಗೆ ಕೊಲೆ ವಿಚಾರವೇ ಗೊತ್ತಿರಲಿಲ್ಲ. ಭಾನುವಾರ ಪವಿತ್ರಾಗೆ ಕರೆ ಮಾಡಿದ್ದ ದರ್ಶನ್ ಪೊಲೀಸರು ಬರ್ತಾರೆ ಎಂದಿದ್ದ. ಒಂದು ವೇಳೆ ಪೊಲೀಸರು ಬಂದರೆ ನನಗೇನೂ ಗೊತ್ತಿಲ್ಲ ಎಂದು ಹೇಳಿಬಿಡು ಅಂತಾ ದರ್ಶನ್, ಪವಿತ್ರಗೆ ಹೇಳಿದ್ದ. ಅದಕ್ಕೆ ಪವಿತ್ರಗೌಡ ಏನಾಯಿತು ಎಂದು ಕೇಳಿದ್ದಳು. ಅದಕ್ಕೆ ಏನು ಆಗಿಲ್ಲ, ನೀನು ಹೇಳಿದಷ್ಟು ಮಾಡು ಎಂದು ದರ್ಶನ್ ಹೇಳಿದ್ದ.

ಇದರಿಂದ ಗಾಬರಿಯಾಗಿದ್ದ ಪವಿತ್ರಾಗೌಡ ಪವನ್​ಗೆ ಕರೆ ಮಾಡಿದ್ದಳು. ಆಗ ಪವನ್ ರೇಣುಕಾಸ್ವಾಮಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಇದರಿಂದ ಪವಿತ್ರಗೌಡ ಮತ್ತಷ್ಟು ಹೆದರಿದ್ದಳು. ದರ್ಶನ್​​ ಸಂಪರ್ಕ ಮಾಡಲು ಭಯ ಪಡುತ್ತಿದ್ದಳು ಎಂಬ ವಿಚಾರವನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ:ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹೇಳಿದಷ್ಟು ಮಾಡು ಅಷ್ಟೇ’ ಎಂದಿದ್ದ ದರ್ಶನ್; ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ಪವಿತ್ರಗೆ ಗೊತ್ತಾಗಿದ್ದೇಗೆ..?

https://newsfirstlive.com/wp-content/uploads/2024/06/DARSHAN_PAVITRA-1.jpg

Load More