newsfirstkannada.com

ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್‌ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

Share :

Published August 17, 2024 at 6:03am

    ಪ್ರಕೃತಿ ವಿಕೋಪದಿಂದ ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿದೆ ಬಾಲ್ಯ ವಿವಾಹ

    2022ರಲ್ಲಿ ನುಗ್ಗಿದ ಪ್ರವಾಹ ಇಂದು ಪಾಕ್​ನಲ್ಲಿ ಹೆಚ್ಚಿಸಿದೆ ಚೈಲ್ಡ್ ಮ್ಯಾರೇಜ್​

    ಹವಾಮಾನ ವೈಪರೀತ್ಯಕ್ಕೂ, ಬಾಲ್ಯ ವಿವಾಹಕ್ಕೂ ಇರುವ ನಂಟು ಏನು..?

ಇಸ್ಲಾಮಾಬಾದ್: ಪಾಕಿಸ್ತಾನ, ನ್ಯೂಕ್ಲಿಯರ್​ ಅಸ್ತ್ರಗಳನ್ನು ಹೊಂದಿರುವ ದೇಶ. ಕಣ್ಣು ಬಿಡುವ ಮುನ್ನವೇ ತನ್ನ ಗಡಿರೇಖೆ ವಿಸ್ತರಿಸಿಕೊಳ್ಳಲು ಹೊಂಚು ಹಾಕಿ ಮೂರು ಮೂರು ಯುದ್ಧಗಳನ್ನ ಹೂಡಿ ಬಡಿಸಿಕೊಂಡು, ಮೈಮುದುಡಿಕೊಂಡು ಮೂಲೆಯಲ್ಲಿ ಕುಳಿತ ದೇಶ. ಹೊಟ್ಟೆಗೆ ಹಿಟ್ಟಿಲ್ಲದಿದ್ದರು, ಗರಿಕೆ ತಿಂದು ಬದುಕುತ್ತೇವೆ ಎಂದು ಪರಮಾಣು ಬಾಂಬ್ ತಯಾರಿಸದೇ ಬಿಡಲ್ಲ ಎಂದು ಹೂಂಕರಿಸಿದ ಹುಂಬ ದೇಶ. ಈ ದೇಶದ ಇತಿಹಾಸವನ್ನು ಕೆಣಕಿದಾಗಲೆಲ್ಲ ಇಂತಹ ಅಬದ್ಧ.. ವಿವಾದಾತ್ಮಕ ವಿಷಯಗಳ ಗುಚ್ಚವೇ ನಮ್ಮ ಕೈಗೆ ಸಿಗುತ್ತವೆ. ಈಗ ಮತ್ತೊಮ್ಮೆ ಅಂತಹುದೇ ಅರ್ಥಹೀನ ವಿಚಾರಕ್ಕೆ ಸುದ್ದಿಯಾಗುತ್ತಿದೆ ಪಾಕಿಸ್ತಾನ.

ಇದನ್ನೂ ಓದಿ: ಜಗತ್ತಿಗೆ ಕೊರೊನಾ ಆಯ್ತು ಈಗ ಮಂಕಿ ಫಾಕ್ಸ್​ ಭೀತಿ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇದರ ಲಕ್ಷಣವೇನು?

“ಮಾನ್ಸೂನ್ ಮಧುಮಕ್ಕಳನ್ನು” ಸೃಷ್ಟಿಸುತ್ತಿರುವ ಹವಾಮಾನ ವೈಪರೀತ್ಯ
ಪಾಕಿಸ್ತಾನದಲ್ಲಾದ ಹವಾಮಾನ ಬದಲಾವಣೆಯಿಂದಾಗಿ ಅಲ್ಲಿ ದೊಡ್ಡ ಮಟ್ಟದ ಬಾಲ್ಯ ವಿವಾಹಗಳು ಜರುಗುತ್ತಿವೆ. ಅರೇ.. ಇಮಾಮ್ ಸಾಬಿಗೂ ಗೋಕಲಾಷ್ಟಮಿಗೂ ಏನ್ ಸಂಬಂಧ: ಪಾಕಿಸ್ತಾನದಲ್ಲಿ ಬಾಲ್ಯ ವಿವಾಹ ಹೆಚ್ಚಿಸಿದ್ದು ಹೇಗೆ ಅಂತ ನೀವು ಆಶ್ಚರ್ಯಗೊಳ್ಳಬಹುದು ಅಸಲಿ ವಿಚಾರ ಇರುವುದೇ ಅಲ್ಲಿ. ಅಲ್ಲಿ ಬೀಳುತ್ತಿರುವ ಮಾನ್ಸೂನ್​ ಮಳೆ ಈ ಬಾಲ್ಯ ವಿವಾಹವನ್ನು ಹೆಚ್ಚಿಸುತ್ತಿದೆ. ಬದುಕಿನ ಬಂಡಿ ನೂಕಲು ಅಲ್ಲಿನ ಪೋಷಕರು ಇನ್ನೂ ಅಂಗಳದಲ್ಲಿ ಆಟವಾಡಿ ಬೆಳೆಯಬೇಕಿದ್ದ, ಬದುಕಿನ ಹಲವಾರು ಖುಷಿಗಳನ್ನು ಕಾಣಬೇಕಿದ್ದ ತಮ್ಮ ಹೆಣ್ಣು ಮಕ್ಕಳನ್ನು ಹಣ ಪಡೆದುಕೊಂಡು ಮದುವೆ ಮಾಡಿ ಕೊಡುತ್ತಿದ್ದಾರೆ. ಇದಕ್ಕೆ ಕಾರಣ 2022ರಲ್ಲಿ ಪಾಕಿಸ್ತಾನ ಎದುರಿಸಿದ್ದ ಭೀಕರ ಪ್ರವಾಹ .

ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್​ನಿಂದ ಮೂರು F-16 ಜೆಟ್​ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!

ಬಾಲೆಯರ ಬದುಕು ಕಸಿದುಕೊಂಡ ಆ ಒಂದು ಪ್ರವಾಹ
2022ರಲ್ಲಿ ಆದ ಭೀಕರ ಪ್ರವಾಹದಿಂದಾಗಿ ಪಾಕಿಸ್ತಾನದ ಸಿಂಧ ಪ್ರಾಂತ್ಯ ಇಂದಿಗೂ ಕೂಡ ಚೇತರಿಸಿಕೊಂಡಿಲ್ಲ. ಆ ಮಟ್ಟದ ಹೊಡೆತವೊಂದು ಪಾಕ್​ನ ಸಿಂಧ್ ಪ್ರಾಂತ್ಯಕ್ಕೆ ಅಂದು ನುಗ್ಗಿದ ಪ್ರವಾಹ ಕೊಟ್ಟಿದೆ. ಇದೇ ಇಂದು ‘ಮಾನ್ಸೂನ್ ಮಧುಮಕ್ಕಳನ್ನು’ ತಯಾರು ಮಾಡುತ್ತಿದೆ.

ಇದನ್ನೂ ಓದಿ: ಉಗ್ರರ ಜತೆ ಅರ್ಷದ್ ನದೀಮ್; ಚಿನ್ನದ ಪದಕ ಗೆದ್ದ ಅತ್ಲೀಟ್​​ಗೆ ಸಿಕ್ಕ ಬಹುಮಾನ ಏನು..?

ಮಶೂಕ್ ಬಿರಾಮನಿ ಅನ್ನೋ ಎನ್​ಜಿಓ ಒಂದರ ಸ್ಥಾಪಕರೊಬ್ಬರು ಹೇಳುವ ಪ್ರಕಾರ. ಸದ್ಯ ಇಲ್ಲಿರುವ ಕುಟುಂಬಗಳು ಹೇಗಾದರೂ ಮಾಡಿ ಬದುಕಬೇಕಾದ ಸ್ಥಿತಿಯಲ್ಲಿವೆ. ಅವರಿಗೆ ದೊಡ್ಡ ಹಣದ ಮೂಲವಾಗಿ ಕಾಣುತ್ತಿರುವುದು ತಮ್ಮ ಹೆಣ್ಣು ಮಕ್ಕಳನ್ನು ದುಡ್ಡಿಗಾಗಿ ಮದುವೆ ಮಾಡುವುದು. ದೂರದ ಊರುಗಳಿಗೆ ಮದುವೆ ಮಾಡಿ ಕೊಡುವುದರಿಂದ ಅವರಿಗೆ ಗಂಡಿನ ಕಡೆಯವರು ಇಂತಿಷ್ಟು ಅಂತ ದುಡ್ಡು ಕೊಡುತ್ತಾರೆ ಅದೇ ಅವರಿಗೆ ಸದ್ಯ ಜೀವನೋಪಾಯಕ್ಕೆ ದಾರಿಯಾಗಿದೆ ಎಂದು ಹೇಳುತ್ತಿದ್ದಾರೆ.

ಖಾನ್ ಮೊಹ್ಮದ್ ಮಲ್ಲಹಾ ಅನ್ನೋ ಗ್ರಾಮದಲ್ಲಿ ಇದೇ ಮುಂಗಾರಿನ ಸಮಯದಲ್ಲಿ ಒಟ್ಟು 45 ಅಪ್ರಾಪ್ತ ಬಾಲಕಿಯರು ಸಾಮೂಹಿಕ ಮದುವೆಯಲ್ಲಿ ಮದುವೆಯಾಗಿದ್ದಾರೆ. 2022ಕ್ಕೂ ಮೊದಲು ಈ ಭಾಗದಲ್ಲಿ ಇಂತಹ ಸ್ಥಿತಿ ಇರಲಿಲ್ಲ. ವಯಸ್ಸಿಗೆ ಬರದೇ ಯಾವ ಹುಡುಗಿಯನ್ನು ಕೂಡ ಮದುವೆ ಮಾಡಿ ಕೊಡುತ್ತಿರಲಿಲ್ಲ. ಭೀಕರ ಪ್ರವಾಹ ಇಲ್ಲಿನವರ ಬದುಕು ಕಸಿದುಕೊಂಡಿದೆ ಹೀಗಾಗಿ ಚೈಲ್ಡ್ ಮ್ಯಾರೇಜ್ ಅನ್ನೋದು ಈಗ ಎಲ್ಲೆಲ್ಲಿಯೂ ಕಾಣುತ್ತದೆ.

ಇದನ್ನೂ ಓದಿ: ಚಿನ್ನ ಗೆದ್ದ ನದೀಮ್​​ಗೆ ಸ್ವಂತ ಮಾವನಿಂದಲೇ ಎಮ್ಮೆ ಗಿಫ್ಟ್; ಪಾಕ್​​ನಲ್ಲಿ ಭಾರೀ ಚರ್ಚೆ.. ಅದಕ್ಕೂ ಇದೆ ಒಂದು ಕಾರಣ..!

ನಜ್ಮಾ ಅಲಿ ಅನ್ನೋ ಅಪ್ರಾಪ್ತೆಯೊಬ್ಬಳು ತನ್ನ ಮದುವೆಯ ಬಗ್ಗೆ ಹೀಗೆ ಹೇಳುತ್ತಾಳೆ. ಎರಡು ವರ್ಷದ ಹಿಂದೆ ನನ್ನ ಮದುವೆಯಾಯ್ತು. ನಮ್ಮ ಯಜಮಾನ್ರು ಬೇರೆಯವರಿಂದ 1 ಲಕ್ಷ 25 ಸಾವಿರ ರೂಪಾಯಿ ತೆಗೆದುಕೊಂಡು ನನ್ನ ತಂದೆಗೆ ಸಾಲ ನೀಡಿ ನನ್ನನ್ನು ಮದುವೆಯಾಗಿದ್ದರು. ನನಗೆ ಆವಾಗ ಬಹಳ ಖುಷಿಯಾಗಿತ್ತು. ನನಗೆ ಈ ದುಡ್ಡಿನಲ್ಲಿ ಲಿಪ್ಸ್​ಟಿಕ್, ಮೇಕ್​ಅಪ್ ಸೆಟ್​ ಎಲ್ಲವೂ ಸಿಗುತ್ತದೆ ಎಂದುಕೊಂಡಿದ್ದೆ. ಆದ್ರೆ ಈಗ ನಾನು ನನ್ನ ಪತಿಯ ಹಾಗೂ ನನ್ನ ಮಗುವಿನೊಂದಿಗೆ ವಾಪಸ್ ನನ್ನ ತಂದೆಯ ಮನೆಗೆ ಬಂದಿದ್ದೇವೆ. ನಮಗೆ ತಿನ್ನಲೂ ಕೂಡ ಸದ್ಯ ಏನು ಇಲ್ಲ ಎಂದು ಗೋಳು ತೋಡಿಕೊಂಡಿದ್ದಾಳೆ.

ಪಂಜಾಬ್ ಪ್ರಾಂತ್ಯದ ಗಲ್ಲಿ ಗಲ್ಲಿಗೊಂದು ಇಂತಹ ಕರುಳು ಹಿಂಡುವ ಸಂಗತಿಗಳು ನಮಗೆ ಕಾಣ ಸಿಗುತ್ತವೆ. ಪ್ರಕೃತಿಯ ವಿಕೋಪ ಇಲ್ಲಿನ ಜನರನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ. ನುಗ್ಗಿ ಬಂದ ಪ್ರವಾಹ ಫಲವತ್ತಾದ ಭೂಮಿಯನ್ನು ವಿಷಕಾರಿಯನ್ನಾಗಿ ಮಾಡಿದೆ. ಬೆಳೆದ ಬೆಳೆ ಕೂಡ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಮದುವೆಯ ಹೆಸರಲ್ಲಿ ಮಾರಿ ಉಪಜೀವನ ಸಾಗಿಸುತ್ತಿದ್ದಾರೆ. ಪಾಕ್​ನ ಪಂಜಾಬ್ ಪ್ರಾಂತ್ಯದ ಬಾಲೆಯರ ಬದುಕು ಹೀಗೆ ಬಲಿಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್‌ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

https://newsfirstlive.com/wp-content/uploads/2024/08/Pakistan-Child-Marriage.jpg

Load More